ಐಪಿಎಲ್ 2018: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ

Posted By:
IPL 2018 Full Schedule : Royal Challengers Bengaluru

ಬೆಂಗಳೂರು, ಫೆಬ್ರವರಿ 15: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರ ಹರಾಜು ಪ್ರಕ್ರಿಯೆಯಲ್ಲಿ ಆಲ್ ರೌಂಡರ್ ಗಳಿಗೆ ಮಣೆ ಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವು ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗುತ್ತಿದೆ. ಏಪ್ರಿಲ್ 08ರಿಂದ ಆರ್ ಸಿಬಿ ತನ್ನ ಅಭಿಯಾನ ಆರಂಭಿಸಲಿದೆ.

11ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ಏಪ್ರಿಲ್ 7 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ.27 ರಂದು ನಡೆಯಲಿದೆ. ಏಪ್ರಿಲ್ 08ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಪಂದ್ಯವನ್ನು ಆರ್ ಸಿಬಿ ಆಡಲಿದೆ.

ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 13ರಂದು ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ಮೊದಲ ಪಂದ್ಯವಾಡಲಿದೆ. ಮೇ 17ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿರುವ ಪಂದ್ಯ ಗೋ ಗ್ರೀನ್ ಗೇಮ್ ಎನಿಸಿಕೊಳ್ಳಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹಾಗೂ ಸರ್ಫರಾಜ್ ಖಾನ್ ರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. ಮಿಕ್ಕ ಎಲ್ಲಾ ಆಟಗಾರರು ಹರಾಜಿನಲ್ಲಿ ಖರೀದಿಸಲಾಗಿದೆ.

ಈ ಆವೃತಿಯಲ್ಲಿ ಪಂದ್ಯಗಳ ಪ್ರಾರಂಭ ಸಮಯವನ್ನು ಬದಲಾಯಿಸಲಾಗಿದ್ದು, ಪಂದ್ಯಗಳು ಸಂಜೆ 5.30 ಮತ್ತು 7 ಕ್ಕೆ ಪ್ರಾರಂಭ ಆಗಲಿವೆ. ಟಿವಿಗಳ ಬೇಡಿಕೆ ಮೇರೆಗೆ ಈ ಬದಲಾವಣೆ ಮಾಡಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ.

IPL- 2018: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) Away ಪಂದ್ಯಗಳ ವೇಳಾಪಟ್ಟಿ
ಯಾವಾಗ, ದಿನ ಯಾವ ತಂಡದ ವಿರುದ್ಧ
ಎಲ್ಲಿ
ಏಪ್ರಿಲ್ 08, ಭಾನುವಾರ
vs ಕೋಲ್ಕತಾ ನೈಟ್ ರೈಡರ್ಸ್
ಈಡನ್ ಗಾರ್ಡನ್ಸ್
ಏಪ್ರಿಲ್ 17, ಮಂಗಳವಾರ ಮುಂಬೈ ಇಂಡಿಯನ್ಸ್
ವಾಂಖೆಡೆ ಸ್ಟೇಡಿಯಂ
ಏಪ್ರಿಲ್ 21, ಶನಿವಾರ
ಡೆಲ್ಲಿ ಡೇರ್ ಡೆವಿಲ್ಸ್
ಫಿರೋಜ್ ಶಾ ಕೋಟ್ಲಾ
ಮೇ 5, ಶನಿವಾರ
ಚೆನ್ನೈ ಸೂಪರ್ ಕಿಂಗ್ಸ್
ಎಂ ಚಿದಂಬರಂ ಸ್ಟೇಡಿಯಂ
ಮೇ 7, ಸೋಮವಾರ
ಸನ್ ರೈಸರ್ಸ್ ಹೈದರಾಬಾದ್
ರಾಜೀವ್ ಗಾಂಧಿ ಸ್ಟೇಡಿಯಂ
ಮೇ 14, ಸೋಮವಾರ
ಕಿಂಗ್ಸ್ ಎಲೆವನ್ ಪಂಜಾಬ್
ಮೋಹಾಲಿ
ಮೇ 19, ಶನಿವಾರ
ರಾಜಸ್ಥಾನ್ ರಾಯಲ್ಸ್
ಜೈಪುರ
IPL- 2018: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) Home ಪಂದ್ಯಗಳ ವೇಳಾಪಟ್ಟಿ
ಯಾವಾಗ, ದಿನ ಯಾವ ತಂಡದ ವಿರುದ್ಧ
ಎಲ್ಲಿ
ಏಪ್ರಿಲ್ 13, ಶುಕ್ರವಾರ vs ಕಿಂಗ್ಸ್ ಎಲೆವನ್ ಪಂಜಾಬ್ ಚಿನ್ನಸ್ವಾಮಿ ಕ್ರೀಡಾಂಗಣ
ಏಪ್ರಿಲ್ 15, ಭಾನುವಾರ ರಾಜಸ್ಥಾನ್ ರಾಯಲ್ಸ್ ಚಿನ್ನಸ್ವಾಮಿ ಕ್ರೀಡಾಂಗಣ
ಏಪ್ರಿಲ್ 25, ಬುಧವಾರ ಚೆನ್ನೈ ಸೂಪರ್ ಕಿಂಗ್ ಚಿನ್ನಸ್ವಾಮಿ ಕ್ರೀಡಾಂಗಣ
ಏಪ್ರಿಲ್ 29, ಭಾನುವಾರ ಕೋಲ್ಕತಾ ನೈಟ್ ರೈಡರ್ಸ್ ಚಿನ್ನಸ್ವಾಮಿ ಕ್ರೀಡಾಂಗಣ
ಮೇ 1,ಮಂಗಳವಾರ ಮುಂಬೈ ಇಂಡಿಯನ್ಸ್ ಚಿನ್ನಸ್ವಾಮಿ ಕ್ರೀಡಾಂಗಣ
ಮೇ 12, ಶನಿವಾರ ಡೆಲ್ಲಿ ಡೇರ್ ಡೆವಿಲ್ಸ್ ಚಿನ್ನಸ್ವಾಮಿ ಕ್ರೀಡಾಂಗಣ
ಮೇ 17, ಗುರುವಾರ ಸನ್ ರೈಸರ್ಸ್ ಹೈದರಾಬಾದ್ ಚಿನ್ನಸ್ವಾಮಿ ಕ್ರೀಡಾಂಗಣ
Story first published: Thursday, February 15, 2018, 15:20 [IST]
Other articles published on Feb 15, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ