ರಾಜಸ್ಥಾನ ವಿರುದ್ಧ ವಾಟ್ಸನ್ ಶತಕ, ಚೆನ್ನೈಗೆ 64ರನ್ ಗಳ ಜಯ

ಪುಣೆ, ಏಪ್ರಿಲ್ 20: ಚೆನ್ನೈ ತಂಡದ ಆರಂಭಿಕ ಆಟಗಾರ ಶೇನ್ ವಾಟ್ಸನ್ ಆಗಿನ್ನು 8 ರನ್ ಅಷ್ಟೇ ಗಳಿಸಿದ್ದಾಗ, ಸುಲಭದ ಕ್ಯಾಚಿತ್ತು ಇನ್ನೇನು ಪೆವಿಲಿಯನ್ ಕಡೆ ಮುಖ ಮಾಡಬೇಕು, ನೋಡಿದರೆ ಸ್ಲಿಪ್ ನಲ್ಲಿದ್ದ ರಾಹುಲ್ ತ್ರಿಪಾಠಿ ಕ್ಯಾಚ್ ಕೈ ಚೆಲ್ಲಿದ್ದರು.
ಈ ಜೀವದಾನದ ಲಾಭ ಪಡೆದ ವಾಟ್ಸನ್ ಐಪಿಎಲ್ 2018ರಲ್ಲಿ ತಮ್ಮ ಮೊದಲ ಶತಕ ಬಾರಿಸಿದರು. ಒಟ್ಟಾರೆ, ಇದು ಅವರ ವೈಯಕ್ತಿಕ ಮೂರನೇ ಶತಕವಾಗಿದೆ.
ಐಪಿಎಲ್ ವಿಶೇಷ ಪುಟ | ಅಂಕಪಟ್ಟಿ | ಫ್ಯಾಂಟಸಿ ಲೀಗ್
ವಾಟ್ಸನ್ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 204/5 ಸ್ಕೋರ್ ಮಾಡಿದ ಮೇಲೆ ತಮ್ಮ ಹಿಂದಕ್ಕೆ ತಿರುಗಿ ನೋಡಲಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಸುಲಭವಾಗಿ ಕಟ್ಟಿ ಹಾಕಿ 64ರನ್ ಗಳ ಅರ್ಹ ಜಯ ಸಂಪಾದಿಸಿತು.
ಪಂದ್ಯದ ಸ್ಕೋರ್ ಕಾರ್ಡ್, ಗ್ರಾಫಿಕ್ಸ್
ಶೇನ್ ವಾಟ್ಸನ್ 106 ರನ್(57ಎಸೆತ, 9 ಬೌಂಡರಿ, 6ಸಿಕ್ಸರ್) ಗಳಿಸಿದಲ್ಲದೆ ಬೌಲಿಂಗ್ ನಲ್ಲೂ ಮಿಂಚಿ 3 ಓವರ್ ಗಳಲ್ಲಿ 13ರನ್ನಿತ್ತು 1 ವಿಕೆಟ್ ಗಳಿಸಿ, ಪಂದ್ಯ ಶ್ರೇಷ್ಠ ಎನಿಸಿಕೊಂಡರು.
ಚೆನ್ನೈ ಪರ ರೈನಾ 46, ಬ್ರಾವೋ ಅಜೇಯ 24ರನ್ ಗಳಿಸಿದರು. ರಾಜಸ್ಥಾನ್ ಪರ ಶ್ರೇಯಸ್ ಗೋಪಾಲ್ 20ಕ್ಕೆ3 ಗಳಿಸಿದರು.
205 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 18.3ಓವರ್ ಗಳಲ್ಲಿ 140 ರನ್‌ಗಳಿಗೆ ಆಲೌಟಾಯಿತು. ಬೆನ್ ಸ್ಟೋಕ್ಸ್ 45, ಜೋಸ್ ಬಟ್ಲರ್ 22 ಗಳಿಸಿದರು. ಚೆನ್ನೈ ಪರ ಶಾರ್ದೂಲ್, ದೀಪಕ್, ಬ್ರಾವೋ, ಕರ್ಣ್ ಶರ್ಮ ತಲಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications