Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಆರ್‌ ಅಶ್ವಿನ್‌ಗೆ ವ್ಯಂಗ್ಯವಾಡಿದ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್

IPL 2019: Dale Steyn trolls Ravichandran Ashwin over ‘Mankad’ incident

ನವದೆಹಲಿ, ಏಪ್ರಿಲ್ 21: ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್) ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್‌ ಅಶ್ವಿನ್ 'ಮಂಕಡಿಂಗ್' ವಿಚಾರಕ್ಕೆ ಸುದ್ದಿಯಾಗಿದ್ದು ಹೆಚ್ಚು. ಅಶ್ವಿನ್‌ ಈಗ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್ ವ್ಯಂಗ್ಯಕ್ಕೂ ತುತ್ತಾಗಿದ್ದಾರೆ.

'ಮಂಕಡ್' ಪ್ರಸಂಗ ಶುರುವಾಗಿದ್ದು ಈ ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಣ ಪಂದ್ಯದ ವೇಳೆ. ಆಗ ಆರ್‌ಆರ್‌ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರನ್ನು ಅಶ್ವಿನ್, ಎಚ್ಚರಿಕೆ ನೀಡದೆಯೇ 'ಮಂಕಡ್' ಮಾದರಿಯಲ್ಲಿ ಔಟ್ ಮಾಡಿದ್ದರು. ಇದು ವಿವಾದ ಸೃಷ್ಟಿಸಿತ್ತು.

ಶನಿವಾರ (ಏಪ್ರಿಲ್ 20) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ XI ಪಂಜಾಬ್ ನಡುವಿನ ಪಂದ್ಯದಲ್ಲಿ ಡೆಲ್ಲಿಯ ಶಿಖರ್ ಧವನ್ ನಾನ್ ಸ್ಟ್ರೈಕ್‌ನಲ್ಲಿದ್ದಾಗ 13ನೇ ಓವರ್‌ ಎಸೆಯುತ್ತಿದ್ದ ಅಶ್ವಿನ್ ಅರ್ಧಕ್ಕೆ ನಿಲ್ಲಿಸಿದ್ದರು. ಮತ್ತೆ ಅದೇ ಓವರ್‌ನಲ್ಲಿ ಅಶ್ವಿನ್ ಚೆಂಡು ಎಸೆಯುವಾಗ ಧವನ್ ಕ್ರೀಸ್‌ನಲ್ಲಿ ನಿಂತಿದ್ದಲ್ಲಿಂದಲೇ ಕ್ರೀಸ್ ಬಿಟ್ಟವರ ಹಾಗೆ ನಟಿಸಿ ವ್ಯಂಗ್ಯವಾಡಿದ್ದರು.

ಇದೀಗ ಸ್ಟೇನ್ ಅಶ್ವಿನ್‌ ಕಾಲೆಳೆದಿದ್ದಾರೆ. ಐಪಿಎಲ್‌ನಲ್ಲಿ ಪ್ರಮುಖ ಬೌಲರ್‌ಗಳ ದಾಳಿ ಹೇಗಿದೆ? ಎಂಬ ಪ್ರಶ್ನೆಗೆ ಉತ್ತರಿಸಿ ಟ್ವೀಟ್ ಮಾಡಿರುವ ಸ್ಟೇನ್, 'ಬೂಮ್ರಾ ಬೌಲ್ಡ್ ಮಾಡ್ತಾರೆ, ರಬಾಡಾ ಕ್ಯಾಚ್ ಮೂಲಕ ಔಟ್ ಮಾಡಿಸ್ತಾರೆ, ತಾಹಿರ್ ಎಲ್‌ಬಿಡ್ಲ್ಯೂ ಮಾಡ್ತಾರೆ, ಅಶ್ವಿನ್ ಮಂಕಡ್ ಮಾಡ್ತಾರೆ' ಎಂದು ಬರೆದು ಜೊತೆಗೊಂದು ಹಲ್ಲು ಕಿಸಿಯುವ ಇಮೋಜಿಯನ್ನೂ ಸೇರಿಸಿದ್ದಾರೆ!

Story first published: Sunday, April 21, 2019, 23:18 [IST]
Other articles published on Apr 21, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+