Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2019: ಧೋನಿಗೆ ಕೃನಾಲ್ 'ಮಂಕಡ್' ಎಚ್ಚರಿಕೆ ಕೊಟ್ಟರಾ?-ವಿಡಿಯೋ

IPL 2019: Did Krunal Pandya give ‘Mankad’ warning to MS Dhoni?

ಮುಂಬೈ, ಏಪ್ರಿಲ್ 4: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್ ಪಂದ್ಯದ ವೇಳೆ ಸಿಎಸ್‌ಕೆ ನಾಯಕ ಎಂಎಸ್ ಧೋನಿಗೆ ಎಂಐ ಆಲ್‌ ರೌಂಡರ್ ಕೃನಾಲ್ ಪಾಂಡ್ಯ 'ಮಂಕಡ್' ಎಚ್ಚರಿಕೆ ಕೊಟ್ಟರಾ? ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬುಧವಾರ (ಏಪ್ರಿಲ್ 4) ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 15ನೇ ಪಂದ್ಯದಲ್ಲಿ ಚೆನ್ನೈ ಇನ್ನಿಂಗ್ಸ್‌ ವೇಳೆ 14ನೇ ಓವರ್‌ನಲ್ಲಿ (ಸರಿಯಾಗಿ 13.4ನೇ ಓವರ್‌) ಬೌಲಿಂಗ್ ಮಾಡಲು ಹೊರಟಿದ್ದ ಕೃನಾಲ್ ಅಚಾನಕ್ ನಿಂತರು. ಆಗ ಸ್ಟ್ರೈಕ್‌ನಲ್ಲಿ ಕೇದಾರ್ ಜಾಧವ್ ಇದ್ದರೆ ಈಚೆಬದಿ ಕ್ರೀಸ್‌ನಲ್ಲಿ ಧೋನಿ ನಿಂತಿದ್ದರು.

ಕೃನಾಲ್ ಚೆಂಡು ಎಸೆಯೋಕೂ ಮುನ್ನ ಧೋನಿ ಕ್ರೀಸ್ ದಾಟಿ ಮುಂದೆ ಹೋಗಿದ್ದರು, ಆದರೆ ಬ್ಯಾಟ್ ಇನ್ನೂ ಕ್ರೀಸ್ ತಾಗಿಕೊಂಡೇ ಇತ್ತು. ಕೃನಾಲ್‌ಗೆ ಧೋನಿ ಕ್ರೀಸ್ ಬಿಟ್ಟಂತೆ ಅನ್ನಿಸಿತೋ ಏನೋ. ಕ್ರೀಸ್‌ನಲ್ಲಿರಲಿ, ಇಲ್ಲದಿರಲಿ ಒಟ್ಟಿನಲ್ಲಿ ಒಂದು ಸಾರಿ ವಾರ್ನ್ ಮಾಡಿಬಿಡೋಣ ಅನ್ನಿಸಿರಬೇಕು; ಕೃನಾಲ್ ಬೌಲಿಂಗ್ ನಿಲ್ಲಿಸಿದ್ದರು.

ಈ ಸಂದರ್ಭ ಪಾಂಡ್ಯ ಮತ್ತು ಧೋನಿ ಮಧ್ಯೆ ಯಾವುದೇ ಸಂಭಾಷಣೆ ನಡೆದಿಲ್ಲ. ಜಸ್ಟ್ ಮಂಕಡ್ ರೀತಿಯ ಕ್ಷಣ ಕಾಣಸಿಕ್ಕಿತ್ತಷ್ಟೆ. ಅಂತೂ ಕೃನಾಲ್ ಈ ವರ್ತನೆ ಧೋನಿಗೆ ಎಂಥದ್ದೋ ಒಂದು ಸಂದೇಶ ರವಾನಿಸಿದ್ದಂತೂ ನಿಜ. ಅಂದ್ಹಾಗೆ ಪಂದ್ಯದಲ್ಲಿ 37 ರನ್ ಜಯ ಸಾಧಿಸಿದ ಎಂಐ ಐಪಿಎಲ್‌ನಲ್ಲಿ 100ನೇ ಗೆಲುವಿನ ಇತಿಹಾಸ ನಿರ್ಮಿಸಿತು.

Story first published: Thursday, April 4, 2019, 19:35 [IST]
Other articles published on Apr 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+