
ನವದೆಹಲಿ, ನವೆಂಬರ್ 15: ಮುಂಬರಲಿರುವ ಐಪಿಎಲ್ 12ನೇ ಆವೃತ್ತಿಗೆ ಸಂಬಂಧಿಸಿ ಫ್ರಾಂಚೈಸಿಗಳ ನಡುವೆ ಆಟಗಾರರ ಬದಲಾವಣೆಗಳ ಪ್ರಕ್ರಿಯೆ ನಡೆಯುತ್ತಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೂಡ 2019ರ ಐಪಿಎಲ್‌ಗಾಗಿ ಆಟಗಾರರನ್ನು ಬದಲಿಸಿಕೊಂಡಿದೆ.
ಐಪಿಎಲ್ 2019ರ ಕಾವು ಮೆಲ್ಲಗೆ ಏರುತ್ತಿದ್ದು, ಕಳೆದ ಆವೃತ್ತಿಯಲ್ಲಿ ತಂಡವನ್ನು ಪ್ರತಿನಿಧಿಸಿದ್ದ ಆಟಗಾರರು ಈಬಾರಿ ತಂಡದಿಂದ ತಂಡಕ್ಕೆ ಜಿಗಿಯುತ್ತಿರೋದು ಒಂದೆಡೆಯಾದರೆ, ಹಳೆ ತಂಡದಲ್ಲೇ ಗಟ್ಟಿಯಾಗಿ ಕೂತಿರುವ ಆಟಗಾರರೂ ಇದ್ದಾರೆ.
ನಟಿ ಪ್ರೀತಿ ಜಿಂಟಾ ಸಹ ಮಾಲಕತ್ವದ ಕಿಂಗ್ಸ್ XI ಪಂಜಾಬ್ ತಂಡ ತಂಡದ ಆಟಗಾರರಲ್ಲಿ ಮಾಡಿಕೊಂಡಿರುವ ಬದಲಾವಣೆ ಅಚ್ಚರಿ ಮೂಡಿಸುವಂತಿದೆ. ಮನ್‌ದೀಪ್ ಸಿಂಗ್ ಒಬ್ಬರನ್ನೇ ತಂಡಕ್ಕೆ ಸೇರಿಸಿಕೊಂಡಿರುವ ಪಂಜಾಬ್ ಬಹಳಷ್ಟು ಆಟಗಾರರನ್ನು ಬಿಟ್ಟುಕೊಟ್ಟಿದೆ.
ಒಳ ಬಂದವರು: ಮನ್‌ದೀಪ್‌ಸಿಂಗ್. ಹೊರ ಹೋದವರು: ಮಾರ್ಕಸ್ ಸ್ಟೊಯಿನ್ಸ್, ಅಕ್ಸರ್ ಪಟೇಲ್, ಆರನ್ ಫಿಂಚ್, ಮೊಹಿತ್ ಶರ್ಮಾ, ಬರೀಂದರ್ ಸ್ರನ್, ಯುವರಾಜ್ ಸಿಂಗ್, ಬೆನ್ ದ್ವಾರ್ಷಿಯಿಸ್, ಮನೋಜ್ ತಿವಾರಿ, ಅಕ್ಷದೀಪ್ ನಾಥ್, ಪ್ರದೀಪ್ ಸಾಹು, ಮಾಯಾಂಕ್ ದಾಗರ್, ಮಂಜೂರ್ ದರ್.
ಉಳಿಸಿಕೊಂಡವರು: ರವಿಚಂದ್ರನ್ ಅಶ್ವಿನ್, ಲೋಕೇಶ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಆಂಡ್ರ್ಯೂ ಟೈ, ಮುಜೀಬ್ ಉರ್ ರಹಮಾನ್, ಅಂಕೆತ್ ರಜಪೂತ್, ಕ್ರಿಸ್ ಗೇಲ್ ಮತ್ತು ಡೇವಿಡ್ ಮಿಲ್ಲರ್.