For Quick Alerts
ALLOW NOTIFICATIONS  
For Daily Alerts
 

ಪ್ಲೇ ಆಫ್ ಬಗ್ಗೆ ಮುಂಬೈ ಇಂಡಿಯನ್ಸ್ ಯೋಚಿಸುತ್ತಿಲ್ಲ: ಕೃನಾಲ್ ಪಾಂಡ್ಯ

IPL 2019: Krunal Pandya says Mumbai Indians not thinking about playoffs

ಮುಂಬೈ, ಏಪ್ರಿಲ್ 30: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಮೂರು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಸಾರಿ ಪ್ಲೇ ಆಫ್‌ ಪ್ರವೇಶಿಸುವ ಬಗ್ಗೆ ಈಗ ಯೋಚಿಸುತ್ತಿಲ್ಲ ಎಂದು ತಂಡದ ಆಲ್ ರೌಂಡರ್ ಆಟಗಾರ ಕೃನಾಲ್ ಪಾಂಡ್ಯ ಮಂಗಳವಾರ (ಏಪ್ರಿಲ್ 30) ಹೇಳಿದ್ದಾರೆ.

12ನೇ ಆವೃತ್ತಿಯ ಐಪಿಎಲ್‌ನಲ್ಲಿ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶಿವೆ. ಇನ್ನುಳಿದ ಎರಡು ಪ್ಲೇ ಆಫ್ ಸ್ಥಾನ ಖಾತರಿಪಡಿಸಿಕೊಳ್ಳುವುದಕ್ಕಾಗಿ ಉಳಿದ ತಂಡಗಳು ಸೆಣಸಾಡುತ್ತಿವೆ. ಅಂಕಟ್ಟಿಯಲ್ಲಿ ಸದ್ಯ ಮುಂಬೈ 3ನೇ ಸ್ಥಾನದಲ್ಲಿ ನೆಲೆಯೂರಿದೆ.

ತಂಡದ ಸ್ಥಿತಿಯ ಬಗ್ಗೆ ಮಾತನಾಡಿದ ಕೃನಾಲ್, 'ಈ ಐಪಿಎಲ್ ಸೀಸನ್ ನಮ್ಮ ತಂಡಕ್ಕೆ ಉತ್ತಮ ಫಲಿತಾಂಶ ನೀಡಿದೆ. ಒಟ್ಟು 12 ಪಂದ್ಯಗಳನ್ನು ಆಡಿದ ಬಳಿಕ ತಂಡ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಬಳಿ ಈಗಾಗಲೇ 14 ಪಾಯಿಂಟ್ ಇರುವುದು ನಮಗೆ ಖುಷಿ ನೀಡಿದೆ' ಎಂದರು.

'ಪ್ಲೇ ಆಫ್ ಅಥವಾ ಇನ್ಯಾವುದೋ ವಿಚಾರದ ಬಗ್ಗೆ ನಮ್ಮ ತಂಡ ಯೋಚಿಸುತ್ತಿದೆ ಎಂದು ನನಗನ್ನಿಸುತ್ತಿಲ್ಲ. ಬದಲಿಗೆ ಲೀಗ್‌ನ ಉಳಿದೆರಡು ಪಂದ್ಯಗಳನ್ನು ಗೆದ್ದುಕೊಳ್ಳುವತ್ತ ನಮ್ಮ ಯೋಚನೆಯಿದೆ. ಲೀಗ್ ನಲ್ಲಿ ನಮ್ಮ ಪಾಲಿನ ಎರಡು ಪಂದ್ಯಗಳನ್ನು ಮೊದಲು ಗೆದ್ದುಕೊಳ್ಳುತ್ತೇನೆ. ಲೀಗ್ ಕತೆ ಮತ್ತೆ ನೋಡೋಣ' ಎನ್ನುವ ಮೂಲಕ ಕೃನಾಲ್ ತಂಡದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇ 2ರಂದು ಮುಂಬೈ ಮತ್ತು ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ.

Story first published: Tuesday, April 30, 2019, 18:47 [IST]
Other articles published on Apr 30, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+