IPL 2019: ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರಕ್ಕೆ ನಿಷೇಧ, ಭಾರತಕ್ಕೆ ನಷ್ಟ?!

ನವದೆಹಲಿ, ಮಾರ್ಚ್ 21: ಈ ಬಾರಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12ನೇ ಆವೃತ್ತಿ ಪಾಕಿಸ್ತಾನದಲ್ಲಿ ಪ್ರಸಾರಗೊಳ್ಳಲ್ಲ. ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಲಾಗಿರುವ ಸಂಗತಿ ಪಾಕಿಸ್ತಾನ ಮಾಹಿತಿ ಸಚಿವಾಲಯದಿಂದ ಲಭಿಸಿದೆ. ಭಾರತಕ್ಕೆ ಇದು ತಿರುಗುಬಾಣ ಎಂದು ಪಾಕಿಸ್ತಾನ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಭಾರತದ 40ಕ್ಕೂ ಹಚ್ಚು ಯೋಧರು ಮೃತರಾಗಿದ್ದರು. ಈ ದಾಳಿಯಲ್ಲಿ ಪಾಕ್ ಕೈವಾಡ ಇರುವುದಾಗಿ ನಂಬಲಾಗಿದ್ದರಿಂದ ಈ ಬಾರಿ ಭಾರತದಲ್ಲಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟೂರ್ನಿಯ ಪ್ರಸಾರ ನಿಲ್ಲಿಸಲಾಯಿತು.
'ಪಿಎಸ್‌ಎಲ್ ವೇಳೆ ಭಾರತದ ಕಂಪನಿಗಳು ಮತ್ತು ಭಾರತ ಸರ್ಕಾರ ಪಾಕಿಸ್ತಾನ ಕ್ರಿಕೆಟ್ ಬೋರ್ಡನ್ನು ನಡೆಸಿಕೊಂಡ ರೀತಿಯನ್ನು ನಾವು ಸಹಿಸಲಾರೆವು. ಹೀಗಾಗಿ ಪಾಕಿಸ್ತಾನದಲ್ಲಿ ಈ ಬಾರಿ ಐಪಿಎಲ್ ಪ್ರಸಾರಗೊಳ್ಳಲಾರದು' ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫಾವದ್ ಅಹ್ಮದ್ ಚೌಧರಿ ಹೇಳಿದ್ದಾರೆ.
'ಕ್ರಿಕೆಟ್ ಮತ್ತು ರಾಜಕೀಯವನ್ನು ಬೇರೆಬೇರೆಯಾಗಿಡಿ ಎಂಬುದನ್ನು ಭಾರತಕ್ಕೆ ತಿಳಿಸುವ ಪ್ರಯತ್ನವನ್ನು ನಾವು ಮಾಡಿದ್ದೆವು. ಆದರೂ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಆರ್ಮಿ ಕ್ಯಾಪ್ ಧರಿಸಿ ಪಂದ್ಯವನ್ನಾಡಿತ್ತು. ಇದಕ್ಕೆ ಐಸಿಸಿ ಕೂಡ ಕ್ರಮ ಕೈಗೊಳ್ಳಲಿಲ್ಲ. ಏನೇ ಇರಲಿ, ಪಾಕಿಸ್ತಾನದಲ್ಲಿ ಈ ಬಾರಿ ಐಪಿಎಲ್ ಪ್ರಸಾರಗೊಳ್ಳಲಾರದು ಎಂದು ಅಹ್ಮದ್, ಪಾಕ್ ಚಾನೆಲ್ ಜೊತೆ ಹೇಳಿಕೊಂಡಿದ್ದಾರೆ.
ಪಿಎಸ್ಎಲ್ ಪ್ರಸಾರವನ್ನು ಭಾರತದಲ್ಲಿ ನಿಲುಗಡೆಗೊಳಿಸಿದಾಗ ಪಾಕ್‌ಗೆ ಮುಖಭಂಗವಾಗಿತ್ತು. ಈಗ ಭಾರತಕ್ಕೂ ಒಂದರ್ಥದಲ್ಲಿ ಹಿನ್ನಡೆಯೆ. ಇದರಿಂದ ಐಪಿಎಲ್ ಮತ್ತು ಭಾರತೀಯ ಕ್ರಿಕೆಟ್‌ಗೆ ಸಣ್ಣ ಮಟ್ಟಿನ ಆರ್ಥಿಕ ನಷ್ಟವಾಗಲಿದೆ. ಅದಕ್ಕಿಂತಲೂ ಹೆಚ್ಚಾಗಿ ಪಾಕಿಸ್ತಾನದಲ್ಲಿರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ನಿರಾಸೆಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications