ಐಪಿಎಲ್ ಪಂದ್ಯ ವೀಕ್ಷಣೆಗಾಗಿ ಬಿಎಸ್ಎನ್ಎಲ್, ಜಿಯೋ ಆಫರ್

ಬೆಂಗಳೂರು, ಮಾರ್ಚ್ 26: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019 ಆರಂಭವಾಗಿದ್ದು, ಪ್ರತಿ ಪಂದ್ಯ ರೋಚಕ ಅನುಭವ ನೀಡುತ್ತಿದೆ. ಈ ನಿಟ್ಟಿನಲ್ಲಿ ಐಪಿಎಲ್ ಟಿ20 ಸಮರ ವೀಕ್ಷಿಸಲು ಬಯಸುವ ಕ್ರಿಕೆಟ್ ಅಭಿಮಾನಿಗಳಿಗಾಗಿ ಸರ್ಕಾರದ ಸಾಮ್ಯದಲ್ಲಿರುವ ಬಿಎಸ್ಎನ್ಎಲ್ಸೇರಿದಂತೆ ಜಿಯೋ, ಏರ್ ಟೆಲ್ ಟೆಲಿಕಾಂ ಸಂಸ್ಥೆಗಳು ವಿವಿಧ ಯೋಜನೆಗಳನ್ನು ಪ್ರಕಟಿಸಿವೆ.
ಬಿಎಸ್ಎನ್ಎಲ್ನಿಂದ ಉಚಿತ ಡೇಟಾ ಮತ್ತು ಉಚಿತ ಕರೆಯನ್ನು ಒಳಗೊಂಡ ಎರಡು ಭರ್ಜರಿ ಪ್ಲಾನ್ಬಿಡುಗಡೆ ಮಾಡಲಾಗಿದ್ದು, 149 ರೂ ಮತ್ತು 499 ರೂ.ಗಳ ದರದಲ್ಲಿ ಯೋಜನೆ ಲಭ್ಯವಿದೆ.
ಐಪಿಎಲ್ ಟೂರ್ನಿಯಲ್ಲಿ ಆಟವಾಡಿ, ಆಕರ್ಷಕ ಬಹುಮಾನ ಗೆಲ್ಲಿರಿ
ಐಪಿಎಲ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ 1 ಹಾಗೂ ಸ್ಥಳೀಯ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಇದಲ್ಲದೆ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರತಿದಿನ 4 ಹಾಗೂ 8 ಗಂಟೆಗೆ ನೇರ ಪ್ರಸಾರ ನೋಡಬಹುದು.
ಬಿಎಸ್ಎನ್ಎಲ್ 149ರು ಹಾಗೂ 499ರು ಎರಡು ಯೋಜನೆಯನ್ನು ಘೋಷಿಸಿದೆ. ಜೊತೆಗೆ ಎಸ್ಎಂಎಸ್ ಪ್ಯಾಕೇಜ್ ಕೂಡಾ ಲಭ್ಯವಿದ್ದು, ಪಂದ್ಯದ ಕ್ಷಣ ಕ್ಷಣದ ಅಲರ್ಟ್ ಪಡೆಯಬಹುದು. ಎಸ್ಎಂಎಸ್ ಅಲರ್ಟ್ ಉಚಿತವಾಗಿ ಲಭ್ಯವಾಗಲಿದೆ.

ಬಿಎಸ್ಎನ್ಎಲ್ 149 ರು ಯೋಜನೆ
ಬಿಎಸ್ಎನ್ಎಲ್ತನ್ನ ಗ್ರಾಹಕರಿಗೆ 149ರೂ.ಗಳ ಯೋಜನೆ ಪ್ರಕಟಿಸಿದ್ದು, ಇದರಲ್ಲಿ ಪ್ರತಿದಿನ 1GB ಡೇಟಾವನ್ನು ಉಚಿತವಾಗಿ ಪಡೆಯಬಹುದು. ಇದರ ಜೊತೆ ಐಪಿಎಲ್ಪ್ರತಿ ಪಂದ್ಯಗಳ ಮಾಹಿತಿಯನ್ನು ಎಸ್ಎಮ್ಎಸ್ಮೂಲಕ ಪಡೆಯಬಹುದು. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಬಿಎಸ್ಎನ್ಎಲ್499 ರೂ.ಗಳ ಪ್ಲಾನ್ನಲ್ಲಿ ಪ್ರತಿದಿನ 1GB ಡೇಟಾ ಉಚಿತವಾಗಿ ದೊರೆಯಲಿದೆ. ಇದರೊಂದಿಗೆ ಅನಿಯಮಿತ ಕರೆಯ ಸೌಲಭ್ಯವಿದೆ. ಜೊತೆಗೆ ಎಸ್ಎಮ್ಎಸ್ಅಲರ್ಟ್ ಸಹ ಪಡೆಯಬಹುದು.

ಜಿಯೋ ಐಪಿಎಲ್ ಯೋಜನೆ: ಜಿಯೋ 197
ಜಿಯೋ 197 ಯೋಜನೆಯಲ್ಲಿ ತನ್ನ ಗ್ರಾಹಕರಿಗೆ 2ಜಿಬಿ ತನಕ ಡೇಟಾ ನೀಡುತ್ತಿದ್ದು, ಪ್ಯಾಕೇಜ್ ಮುಗಿದ ಬಳಿಕ 64ಕೆಬಿಪಿಎಸ್ ನಂತೆ 28 ದಿನಗಳ ತನಕ ಬಳಸಬಹುದು. ಅನಿಯಮಿತ ಕರೆ ಮಾಡಬಹುದು ಜೊತೆಗೆ ಎಸ್ಎಂಎಸ್ ಉಚಿತವಾಗಿ ಲಭ್ಯವಿದೆ.
IPL 2019: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಮೇ 12ಕ್ಕೆ ಫೈನಲ್ ಪಂದ್ಯ!

ಜಿಯೋ 299 ಪ್ಯಾಕ್
ಜಿಯೋ 299 ಯೋಜನೆಯಲ್ಲಿ ತನ್ನ ಗ್ರಾಹಕರಿಗೆ 3ಜಿಬಿ ತನಕ ಡೇಟಾ ನೀಡುತ್ತಿದ್ದು, ಪ್ಯಾಕೇಜ್ ಮುಗಿದ ಬಳಿಕ 64ಕೆಬಿಪಿಎಸ್ ನಂತೆ 28 ದಿನಗಳ ತನಕ ಬಳಸಬಹುದು. ಅನಿಯಮಿತ ಕರೆ ಮಾಡಬಹುದು ಜೊತೆಗೆ ಎಸ್ಎಂಎಸ್ ಉಚಿತವಾಗಿ ಲಭ್ಯವಿದೆ. ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಬಹುದು.

ಏರ್ ಟೆಲ್ 249 ಯೋಜನೆ
ಭಾರ್ತಿ ಏರ್ ಟೆಲ್ ನಿಂದ 249 ಯೋಜನೆ ಪ್ರಕಟಿಸಲಾಗಿದ್ದು, ಪ್ರತಿದಿನ 2ಜಿಬಿ ಡೇಟಾ ಪಡೆಯಬಹುದು. ಅನಿಯಮಿತ ಕರೆ, 100 ಎಸ್ಎಂಎಸ್ ಉಚಿತ, ಏರ್ ಟೆಲ್ ಟಿವಿ ವೀಕ್ಷಣೆ, 28 ದಿನಗಳ ವ್ಯಾಲಿಡಿಟಿ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications