ವಿಂಡೀಸ್ ಮತ್ತೊಬ್ಬ ದಾಂಡಿಗನ ಆಗಮನ: ಆರ್ ಸಿಬಿಗೆ ಬಂತು ಬಲ

ಜೈಪುರ, ಡಿಸೆಂಬರ್ 18: ಕಳೆದ ಐಪಿಎಲ್ ಆವೃತ್ತಿಯಿಂದ ಕ್ರಿಸ್ ಗೇಲ್ ಅವರನ್ನು ಕೈಬಿಟ್ಟು ಪರಿತಪಿಸಿದ್ದ ಆರ್ ಸಿಬಿ, ಈ ಬಾರಿಯ ಐಪಿಎಲ್‌ನಲ್ಲಿ ಅಭಿಮಾನಿಗಳಿಗೆ ಖುಷಿ ನೀಡುವ ಸುದ್ದಿ ನೀಡಿದೆ.
ಹಾಗೆಂದು ಕ್ರಿಸ್ ಗೇಲ್ ಆರ್ ಸಿಬಿಗೆ ವಾಪಸಾಗಿಲ್ಲ. ಆದರೆ, ಅವರಂತೆಯೇ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಶಿಮ್ರೋನ್ ಹೆಟ್ಮೇರ್ ಆರ್ ಸಿಬಿ ಪಾಲಾಗಿದ್ದಾರೆ.
ಕಳೆದ ತಿಂಗಳು ಭಾರತದ ಪ್ರವಾಸ ಮಾಡಿದ್ದ ವೆಸ್ಟ್ ಇಂಡೀಸ್ ತಂಡದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದ 21 ವರ್ಷದ ಹೆಟ್ಮೇರ್, ಈ ಬಾರಿಯ ಐಪಿಎಲ್‌ನಲ್ಲಿ ಹರಾಜಾಗುವುದು ಖಚಿತವಾಗಿತ್ತು. ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ 140 ಸ್ಟ್ರೈಕ್ ರೇಟ್‌ನೊಂದಿಗೆ ಅವರು 259 ರನ್ ಕಲೆಹಾಕಿದ್ದರು.
ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 40ರ ಸರಾಸರಿ ಮತ್ತು 150ರ ಸ್ಟ್ರೈಕ್ ರೇಟ್‌ನೊಂದಿಗೆ ಆಡಿದ್ದ ಹೆಟ್ಮೇರ್, ಮೂರನೇ ಅತ್ಯಧಿಕ ರನ್ ಸ್ಕೋರರ್ ಎನಿಸಿದ್ದರು.
50 ಲಕ್ಷ ಮೂಲಬೆಲೆ ಹೊಂದಿದ್ದ ಹೆಟ್ಮೇರ್ ಅವರನ್ನು 4.20 ಕೋಟಿ ರೂಪಾಯಿಗೆ ಆರ್ ಸಿಬಿ ಖರೀದಿಸಿದೆ. ಆರಂಭಿಕರಾಗಿ, ಮಧ್ಯಮ ಕ್ರಮಾಂಕದ ಆಟಗಾರನಾಗಿಯೂ ಆಡಬಲ್ಲ ಹೆಟ್ಮೇರ್, ಅವರಿಂದ ಆರ್ ಸಿಬಿಗೆ ಹೊಸ ಶಕ್ತಿ ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications