Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂದು ಚೆನ್ನೈ-ಮುಂಬೈ ಮುಖಾಮುಖಿ: ಪಿಚ್ ರಿಪೋರ್ಟ್, ಸಂಭಾವ್ಯ ತಂಡ ತಿಳಿದುಕೊಳ್ಳಿ

ಪಾಯಿಂಟ್ಸ್‌ ಟೇಬಲ್‌ನಲ್ಲಿ ತಳ ಮುಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌ ಇಂದು ಬಲಿಷ್ಟ ಮುಂಬೈ ಇಂಡಿಯನ್ಸ್‌ ವಿರುದ್ಧ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಕಾದಾಟ ನಡೆಸಲಿದೆ. ಐಪಿಎಲ್ 13ನೇ ಆವೃತ್ತಿಯ 41ನೇ ಪಂದ್ಯ ಇದಾಗಿದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಲು ರೋಹಿತ್ ಪಡೆ ಕಣ್ಣಿಟ್ಟಿದೆ.

ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ ಪ್ರದರ್ಶನ ಕಳೆಗುಂದಿದೆ. ಈಗಾಗಲೇ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇ ಆಫ್ ಕನಸನ್ನು ಕೈ ಬಿಟ್ಟಿದ್ದರೂ, ಮುಂಬೈ ಇಂಡಿಯನ್ಸ್ ವಿರುದ್ಧ ಹಿಂದಿನ ಗೆಲುವಿನ ವಿಶ್ವಾಸದೊಂದಿಗೆ ಮತ್ತೆ ಜಯದ ಹಾದಿಗೆ ಮರಳಲು ಯೋಜಿಸಿದೆ.

ಚೆನ್ನೈ-ಮುಂಬೈ ಹೆಡ್‌ ಟು ಹೆಡ್‌

ಚೆನ್ನೈ-ಮುಂಬೈ ಹೆಡ್‌ ಟು ಹೆಡ್‌

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಇದುವರೆಗೆ ಐಪಿಎಲ್‌ನಲ್ಲಿ 29 ಬಾರಿ ಮುಖಾಮುಖಿಯಾಗಿವೆ. ಸಿಎಸ್‌ಕೆ ವಿರುದ್ಧ ಮುಂಬೈ ಪ್ರಾಬಲ್ಯ ಮೆರೆದಿದ್ದು 17 ಪಂದ್ಯಗಳನ್ನು ಗೆದ್ದುಕೊಂಡಿದೆ. ಸಿಎಸ್‌ಕೆ 12 ಪಂದ್ಯಗಳಲ್ಲಿ ಜಯಿಸಿದೆ.ಐಪಿಎಲ್ 2020ರ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಮುಂಬೈ ವಿರುದ್ಧ ಐದು ವಿಕೆಟ್‌ಗಳ ಗೆಲುವು ಸಾಧಿಸಿತು.

ಮಹೇಂದ್ರ ಸಿಂಗ್ ಧೋನಿಯ ಈ 5 ನಿರ್ಧಾರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ, ಕಷ್ಟ!

ಪಿಚ್‌ ಮತ್ತು ಟಾಸ್ ವರದಿ

ಪಿಚ್‌ ಮತ್ತು ಟಾಸ್ ವರದಿ

ಸೀಸನ್‌ ಆರಂಭದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಶಾರ್ಜಾ ಸ್ವರ್ಗವಾಗಿತ್ತು ಮತ್ತು ಅದು ಮುಂದುವರೆದಂತೆ, ಬೌಲರ್‌ಗಳು ಈಗ ಹೆಚ್ಚಿನ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಕೆಟ್ಟ ಬೌಲ್‌ಗಳನ್ನು ಗಮನಿಸಿ ಶಾಟ್‌ಗಳಿಗೆ ಹೋಗುವುದನ್ನು ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳು ಆದ್ಯತೆ ನೀಡುತ್ತಾರೆ. ಮುಂಬೈ ಇಂಡಿಯನ್ಸ್‌ ಸಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ.

ಇಲ್ಲಿ ಕೊನೆಯ ಎರಡು ಪಂದ್ಯಗಳನ್ನು ತಂಡ ಎರಡನೇ ಬ್ಯಾಟಿಂಗ್ ತಂಡ ಪಂದ್ಯ ಗೆದ್ದುಕೊಂಡಿತು. ಆದರೆ, ಹಿಂದಿನ ಮೂರು ತಂಡಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡವು ಗೆದ್ದುಕೊಂಡಿತು.

ಸಿಎಸ್‌ಕೆ ಸಂಭಾವ್ಯ ಪ್ಲೇಯಿಂಗ್ 11

ಸಿಎಸ್‌ಕೆ ಸಂಭಾವ್ಯ ಪ್ಲೇಯಿಂಗ್ 11

ಸ್ಯಾಮ್ ಕರ್ರನ್, ಫಾಫ್ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಕೇದಾರ್ ಜಾಧವ್ / ಎನ್ ಜಗದೀಶನ್, ಎಂಎಸ್ ಧೋನಿ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಶಾರ್ದುಲ್ ಠಾಕೂರ್, ಪಿಯೂಷ್ ಚಾವ್ಲಾ /, ಜೋಶ್ ಹೇಜಲ್‌ವುಡ್

ಧೋನಿ ಐದನೇ ಸ್ಥಾನಕ್ಕಿಂತ ಕೆಳಗೆ ಬ್ಯಾಟಿಂಗ್ ಮಾಡಬಾರದು: ಅಜಿತ್‌ ಅಗರ್ಕರ್

ಮುಂಬೈ ಇಂಡಿಯನ್ಸ್‌ ಸಂಭಾವ್ಯ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್‌ ಸಂಭಾವ್ಯ ಪ್ಲೇಯಿಂಗ್ 11

ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ

Story first published: Friday, October 23, 2020, 12:50 [IST]
Other articles published on Oct 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+