For Quick Alerts
ALLOW NOTIFICATIONS  
For Daily Alerts
 

ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ಕೆ: ಪ್ಲೇಯಿಂಗ್ 11 ತಿಳಿದುಕೊಳ್ಳಿ

IPL 2020: CSK vs RR Match 37; Toss Report and Playing 11

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ 37ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌ ಬ್ಯಾಟಿಂಗ್ ಆಯ್ದುಕೊಂಡಿದೆ. ಐಪಿಎಲ್‌ನಲ್ಲಿ 200ನೇ ಪಂದ್ಯವನ್ನಾಡುತ್ತಿರುವ ಎಂ.ಎಸ್ ಧೋನಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಎರಡು ಬದಲಾವಣೆ ಮಾಡಿದ್ದಾರೆ.

ವಿಂಡೀಸ್ ಮೂಲದ ಆಲ್‌ರೌಂಡರ್ ಡ್ವೇನ್ ಬ್ರಾವೋ ಗಾಯಾಳುವಾಗಿ ತಂಡದಿಂದ ಹೊರಬಿದ್ದ ಪರಿಣಾಮ ಜೋಶ್ ಹೇಜಲ್‌ವುಡ್, ಹಾಗೂ ಕರಣ್ ಶರ್ಮಾ ಬದಲು ಪಿಯೂಷ್ ಚಾವ್ಲಾ ಸ್ಥಾನ ಪಡೆದಿದ್ದಾರೆ.

ಇನ್ನೂ ಅಂಕಪಟ್ಟಿಯಲ್ಲಿ ಚೆನ್ನೈನಷ್ಟೇ ಪಾಯಿಂಟ್ಸ್ ಗಳಿಸಿರುವ ರಾಜಸ್ಥಾನ್ ರಾಯಲ್ಸ್ ಕೇವಲ ಒಂದು ಬದಲಾವಣೆ ಮಾಡಿದ್ದು ಜಯದೇವ್ ಉನಾದ್ಕಟ್ ಬದಲು ಅಂಕಿತ್ ರಜಪೂತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಉಭಯ ತಂಡಗಳು 9 ಪಂದ್ಯದಲ್ಲಿ ಮೂರು ಪಂದ್ಯ ಗೆದ್ದು ಆರು ಪಂದ್ಯಗಳನ್ನು ಸೋತಿದೆ. ಹೀಗಾಗಿ ಇಂದಿನ ಪಂದ್ಯ ಮಾಡು ಇಲ್ಲವೆ ಮಡಿ ಪರಿಸ್ಥಿತಿ ಸೃಷ್ಟಿಸಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲೇಯಿಂಗ್ 11:

ಸ್ಯಾಮ್ ಕರನ್, ಫಾಫ್ ಡುಪ್ಲೆಸಿಸ್, ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಎಂ.ಎಸ್. ಧೋನಿ, ರವೀಂದ್ರ ಜಡೇಜಾ, ಕೇದಾರ್ ಜಾಧವ್, ದೀಪಕ್ ಚಹಾರ್, ಪಿಯೂಷ್ ಚಾವ್ಲಾ, ಶಾರ್ದೂಲ್ ಠಾಕೂರ್, ಜೋಶ್ ಹೇಜಲ್‌ವುಡ್

ರಾಜಸ್ಥಾನ್ ರಾಯಲ್ಸ್‌ ಪ್ಲೇಯಿಂಗ್ 11:

ರಾಬಿನ್ ಉತ್ತಪ್ಪ, ಬೆನ್‌ಸ್ಟೋಕ್ಸ್, ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್, ಜಾಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಶ್ರೇಯಸ್ ಗೋಪಾಲ್, ಜೊಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ಅಂಕಿತ್ ರಜಪೂತ್

Story first published: Monday, October 19, 2020, 19:15 [IST]
Other articles published on Oct 19, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+