For Quick Alerts
ALLOW NOTIFICATIONS  
For Daily Alerts
 

ಧೋನಿ ಪಡೆ ಬಗ್ಗುಬಡಿಯಲು ವಾರ್ನರ್ ಪಡೆಗೆ ಲಕ್ಷ್ಮಣ್ ಟಿಪ್ಸ್

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 2020ನೇ ಆವೃತ್ತಿಯಲ್ಲಿ ಈ ಸಮಯಕ್ಕೆ ಅಂಕಪಟ್ಟಿಯಲ್ಲಿ ಕೊನೆಯೆರಡು ಸ್ಥಾನಗಳಲ್ಲಿರುವ ಸನ್‌ರೈಸರ್ಸ್ ಹೈದಬಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶುಕ್ರವಾರ ಮುಖಾಮುಖಿಯಾಗುತ್ತಿದೆ.

ಈ ಎರಡು ತಂಡಗಳು ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಸೋಲು ಹಾಗೂ ಒಂದು ಗೆಲುವನ್ನು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳನ್ನು ಈ ಎರಡು ತಂಡಗಳು ಪಡೆದುಕೊಂಡಿದೆ.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಟ್ಟಿಹಾಕಲು ಡೇವಿಡ್ ವಾರ್ನರ್ ಅವರ ಸನ್‌ರೈಸರ್ಸ್ ಹೈದರಾಬಾದ್ ಏನೆಲ್ಲ ತಂತ್ರಗಾರಿಕೆ ರೂಪಿಸಬೇಕು ಎಂಬುದನ್ನು ಬ್ಯಾಟಿಂಗ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7: 30 ಕ್ಕೆ ಪಂದ್ಯ ಆರಂಭವಾಗಲಿದೆ. ಗಾಯಗೊಂಡ ಲಯನ್ಸ್ ವಿರುದ್ಧ ಕುಸಿದಿರುವ ಹೈದ್ರಾಬಾದಿಗಳು ಪುಟಿದೇಳಲು ಏನು ಮಾಡಬೇಕು? ಓವರ್ ಟು ಲಕ್ಷ್ಮಣ್...

ಚೆನ್ನೈ ವಿರುದ್ಧ ಹೈದರಾಬಾದ್ ದಾಖಲೆ ಉತ್ತಮವಾಗಿಲ್ಲ

ಚೆನ್ನೈ ವಿರುದ್ಧ ಹೈದರಾಬಾದ್ ದಾಖಲೆ ಉತ್ತಮವಾಗಿಲ್ಲ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ದಾಖಲಿಸಿದ ದಾಖಲೆ ಉತ್ತಮವಾಗಿಲ್ಲ. ಉಭಯ ತಂಡಗಳು ಈವರೆಗೆ ಹಲವಾರು ಬಾರಿ ಮುಖಾಮುಖೀಯಾಗಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ 9 ಪಂದ್ಯಗಳನ್ನು ಗೆದ್ದಿದೆ. ಪ್ರಸಕ್ತ ಐಪಿಎಲ್ ನಲ್ಲಿ ಸನ್‌ರೈಸರ್ಸ್ ಗೆಲುವಿನ ವಿಶ್ವಾಸ ಮೂಡಿಸಿದೆ. ಐಪಿಎಲ್‌ 2020ರಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಎದುರಾಗಿವೆ. ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ ತಂಡಗಳು ಎರಡು ಗೆಲುವುಗಳನ್ನು ಪಡೆದಿವೆ. ಮೊದಲ ಪಂದ್ಯವನ್ನು ಹೊರತುಪಡಿಸಿ, ಚೆನ್ನೈ ಸೂಪರ್ ಕಿಂಗ್ಸ್ ಇತರ ಎರಡು ಪಂದ್ಯಗಳನ್ನು ಕಳೆದುಕೊಂಡಿತು.

ಚೆನ್ನೈ ವಿರುದ್ಧ ಆಕ್ರಮಣಕಾರಿ ಆಟವಾಡಿ

ಚೆನ್ನೈ ವಿರುದ್ಧ ಆಕ್ರಮಣಕಾರಿ ಆಟವಾಡಿ

ಸೋಲಿನಿಂದ ಆತ್ಮವಿಶ್ವಾಸವನ್ನು ಕಳೆದುಕೊಂಡಿರುವ ಚೆನ್ನೈ ವಿರುದ್ಧ ಗೆಲ್ಲಲು ಹೆಚ್ಚಿನ ಆಕ್ರಮಣಶೀಲತೆಯನ್ನು ತೋರಿಸಬೇಕಾಗಿದೆ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾರ್ಗದರ್ಶಕ ವಿ.ವಿ.ಎಸ್ ಲಕ್ಷ್ಮಣ್ ಸಲಹೆ ನೀಡಿದ್ದಾರೆ. ಆರಂಭಿಕ ಆಟಗಾರರಷ್ಟೇ ಅಲ್ಲದೆ, ಸ್ಲಾಗ್ ಓವರ್ ಗಳಲ್ಲಿ ಹೆಚ್ಚಿನ ರನ್ ಗಳಿಸಬೇಕಿದೆ. ಧೋನಿ ಆಟದ ಮಧ್ಯೆ ರನ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಮಾಡಬೇಕು, ವಿಕೆಟ್ ಕಳೆದುಕೊಳ್ಳದೆ ಇದ್ದರೆ ರನ್ ಗತಿ ಹೆಚ್ಚಿಸಬಹುದು ಎಂದಿದ್ದಾರೆ.

ಐಪಿಎಲ್ 2020: ಚೆನ್ನೈ ಸೂಪರ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್, ಸಂಭಾವ್ಯ ತಂಡ

ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಆತಂಕ

ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಆತಂಕ

"ನಾವು ಆಕ್ರಮಣಕಾರಿಯಾಗಿ ಆಡಿ ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸದ್ಯ ಆತಂಕ ಮೂಡಿಸಿದೆ. ಒತ್ತಡಗಳು ಸಹಜವಾಗಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಬರುವ ಆಟಗಾರರು ಮುಕ್ತವಾಗಿ ಬ್ಯಾಟಿಂಗ್ ಮಾಡಬೇಕು ಎಂದು ವಿವಿಎಸ್ ಲಕ್ಷ್ಮಣ್ ಹೇಳಿದರು. ಯುವ ಕ್ರಿಕೆಟರ್ ಗಳಿಗೆ ಇದು ತಮ್ಮ ಪ್ರತಿಭೆ ಪ್ರದರ್ಶಿಸಲು ಸಕಾಲ, ಇನ್ನಿಂಗ್ಸ್ ಕಟ್ಟುವ ಜೊತೆಗೆ ಚೆನ್ನೈನ ಸ್ಲೋ ಬೌಲರ್ ಗಳನ್ನು ಗುರಿಯಾಗಿಸಿಕೊಂಡು ರನ್ ಗಳಿಸಲು ಯತ್ನಿಸಬೇಕು ಎಂದಿದ್ದಾರೆ.

ಚೆನ್ನೈ ಪ್ರಮುಖ ಅಸ್ತ್ರವೇ ಬಲಹೀನವಾಗಿದೆ

ಚೆನ್ನೈ ಪ್ರಮುಖ ಅಸ್ತ್ರವೇ ಬಲಹೀನವಾಗಿದೆ

ಚೆನ್ನೈ ತಂಡದ ಪ್ರಮುಖ ಅಸ್ತ್ರವಾಗಿದ್ದ ಸ್ಪಿನ್ ವಿಭಾಗ ಬಲಹೀನವಾಗಿದೆ. ಹೀಗಾಗಿ, ಆದಷ್ಟು ಸ್ಪಿನ್ನರ್ ಗಳನ್ನು ಟಾರ್ಗೆಟ್ ಮಾಡುವುದು ಒಳ್ಳೆಯದು. ರಶೀದ್ ಖಾನ್, ಸಮದ್ ಪ್ರದರ್ಶನ ಉತ್ತಮವಾಗಿದೆ. ನಟರಾಜನ್ ಇರುವುದರಿಂದ ಕೊನೆ ಓವರ್ ಗಳಲ್ಲಿ ಎದುರಾಳಿಗಳನ್ನು ಕಟ್ಟಿ ಹಾಕುವ ಭರವಸೆ ಮೂಡಿದೆ. ಒಟ್ಟಾರೆ, ಮೊದಲೇ ಹೇಳಿದಂತೆ ಇಂದಿನ ಪಂದ್ಯದಲ್ಲಿ ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್ ಮೇಲೆ ಪಂದ್ಯದ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

Story first published: Friday, October 2, 2020, 15:04 [IST]
Other articles published on Oct 2, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+