ಆರ್‌ಸಿಬಿ ಎದುರು ಹೊಸ ಜೆರ್ಸಿ ಧರಿಸಿ ಆಡಲಿದೆ ಡೆಲ್ಲಿ ಕ್ಯಾಪಿಟಲ್ಸ್
ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್‌ನಲ್ಲಿ ಇದುವರೆಗೂ ಗಮನಾರ್ಹ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಡೆಲ್ಲಿ ತಂಡ ಹೆಚ್ಚು ಸ್ಥಿರ ಪ್ರದರ್ಶನ ನೀಡುತ್ತಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿನ 15 ರನ್ ಸೋಲು ಹೊರತುಪಡಿಸಿ ಯುಎಇಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉತ್ತಮ ರನ್ ರೇಟ್ ಕೂಡ ಹೊಂದಿರುವ ಡಿಸಿ, ಅಂಕಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದೆ.
ಹೆಚ್ಚಿನ ಯುವ ಆಟಗಾರರನ್ನೇ ಒಳಗೊಂಡಿರುವ ತಂಡ, ಈ ಬಾರಿಯ ಆವೃತ್ತಿಯಲ್ಲಿ ಇದುವರೆಗೂ ಉತ್ತಮ ಲಯದಲ್ಲಿದೆ. ಇತ್ತ ಜಯದ ಹಾದಿಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖಾಮುಖಿಯಾಗುತ್ತಿದೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸೋಮವಾರ ಗೆಲ್ಲುವ ತಂಡ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೊಸ ಬಣ್ಣದ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಈಗಾಗಲೇ ನೂತನ ಜೆರ್ಸಿಯನ್ನು ಡೆಲ್ಲಿ ತಂಡ ಬಿಡುಗಡೆ ಮಾಡಿದೆ. ಮುಂದೆ ಓದಿ.

ಹೊಸ ಬಣ್ಣಗಳ ಸೇರ್ಪಡೆ
ಜೆಎಸ್‌ಡಬ್ಲ್ಯೂ ಪೈಂಟ್ಸ್ ಸಹಭಾಗಿತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಧರಿಸಿದ್ದ ಜೆರ್ಸಿಗೆ ಹೊಸ ಬಣ್ಣಗಳನ್ನು ಅಳವಡಿಸಿದೆ. ಮಾಮೂಲಿ ಜರ್ಸಿಯ ಮುಂಭಾಗದಲ್ಲಿ ಕಾಮನ ಬಿಲ್ಲಿನಂತೆ ಬಣ್ಣಗಳನ್ನು ಅಳವಡಿಸಲಾಗಿದೆ. ಇದರಿಂದ ಡೆಲ್ಲಿ ತಂಡದ ಜೆರ್ಸಿ ಲುಕ್ ಬದಲಾಗಿದೆ.

ವಿಡಿಯೋ ಬಿಡುಗಡೆ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರರಾದ ನಾಯಕ ಶ್ರೇಯಸ್ ಅಯ್ಯರ್, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್ ಮತ್ತು ಅಜಿಂಕ್ಯ ರಹಾನೆ ಅವರನ್ನು ಒಳಗೊಂಡ ಹೊಸ ದಿರಿಸಿನ ವಿಡಿಯೋವನ್ನು ಫ್ರಾಂಚೈಸಿಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಎಂಐನ ಇಂಜಿನ್‌ನಂತಿರುವ 3 ಆಟಗಾರರ ಹೆಸರಿಸಿದ ಕೀರನ್ ಪೊಲಾರ್ಡ್
ಮತ್ತಷ್ಟು ಬಣ್ಣ ತುಂಬುತ್ತಿದ್ದೇವೆ
'ದಿಲ್ಲಿವಾಲಾಗಳೇ, ನಾವು ನಮ್ಮ ರೋಮಾಂಚನಕಾರಿ ಆಟದ ಹೀರೋಗಳ ಉಡುಪಿಗೆ ಮತ್ತಷ್ಟು ಬಣ್ಣಗಳನ್ನು ಸೇರಿಸುವ ಮೂಲಕ ಜೆಎಸ್‌ಡಬ್ಲ್ಯೂ ಪೈಂಟ್ಸ್ ಜತೆಗಿನ ಈ ವರ್ಷದ ಐಪಿಎಲ್ ಆವೃತ್ತಿಯ ಸುಂದರ ಸಹಭಾಗಿತ್ವವನ್ನು ಸಂಭ್ರಮಿಸುತ್ತಿದ್ದೇವೆ. ಪ್ರತಿ ಬಣ್ಣವನ್ನೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ' ಎಂದು ಫ್ರಾಂಚೈಸಿ ಮಾಹಿತಿ ನೀಡಿದೆ.

ಟೂರ್ನಿಯಿಂದ ಅಮಿತ್ ಮಿಶ್ರಾ ಹೊರಕ್ಕೆ
ಡೆಲ್ಲಿ ತಂಡ ಆರಂಭದಿಂದಲೇ ಗಾಯದ ಹೊಡೆತವನ್ನು ಅನುಭವಿಸುತ್ತಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಮೊದಲ ಪಂದ್ಯದ ಮೊದಲ ಓವರ್‌ನಲ್ಲಿಯೇ ಎರಡು ವಿಕೆಟ್ ಕಿತ್ತಿದ್ದ ಆರ್. ಅಶ್ವಿನ್ ಗಾಯದ ಕಾರಣದಿಂದ ಎರಡು ಪಂದ್ಯ ಆಡಿರಲಿಲ್ಲ. ಈಗ ಅವರು ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಆದರೆ ಈಗ ಮತ್ತೊಬ್ಬ ಸ್ಪಿನ್ನರ್ ಅಮಿತ್ ಮಿಶ್ರಾ ಬೆರಳಿನ ಗಾಯದ ಕಾರಣದಿಂದ ಈ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಆಡದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications