'ಸಮಯ ಉರುಳುತ್ತಿದೆ': ರಾಬಿನ್ ಉತ್ತಪ್ಪಗೆ ಗೌತಮ್ ಗಂಭೀರ್ ಎಚ್ಚರಿಕೆ

ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ರಾಜಸ್ಥಾನ ರಾಯಲ್ಸ್ ತಂಡ ಸತತ ಗೆಲುವುಗಳ ಬಳಿಕ ಸೋಲಿನ ಹಾದಿ ಹಿಡಿದಿದೆ. ಬೌಲಿಂಗ್ ವಿಭಾಗದಲ್ಲಿ ಅಷ್ಟೇನೂ ಪ್ರಭಾವಿಯಾಗಿ ಕಾಣಿಸದಿದ್ದರೂ, ಬ್ಯಾಟಿಂಗ್ ವಿಭಾಗದ ಮೂಲಕವೇ ಅದು ಪಂದ್ಯಗಳನ್ನು ಗೆದ್ದಿತ್ತು. ಶಾರ್ಜಾದಲ್ಲಿ ಎರಡು ಪಂದ್ಯಗಳು ಅಧಿಕ ಸ್ಕೋರಿಂಗ್ ಮೂಲಕ ಗಮನ ಸೆಳೆದಿದ್ದವು.
ರಾಜಸ್ಥಾನ ರಾಯಲ್ಸ್ ತಂಡ ಗೆಲುವುಗಳಲ್ಲಿ ಬ್ಯಾಟ್ಸ್‌ಮನ್‌ಗಳ ಪಾತ್ರ ಹಿರಿದು. ಮುಖ್ಯವಾಗಿ ಇಡೀ ತಂಡ ಸಂಜು ಸ್ಯಾಮ್ಸನ್, ಸ್ಟೀವ್ ಸ್ಮಿತ್ ಮತ್ತು ಜೋಸ್ ಬಟ್ಲರ್ ಅವರ ಮೇಲೆ ಅವಲಂಬಿತವಾಗಿದೆ. ತಂಡ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾದ ರಾಬಿನ್ ಉತ್ತಪ್ಪ ಮೊದಲ ನಾಲ್ಕೂ ಪಂದ್ಯಗಳಲ್ಲಿ ತೀರಾ ನಿರಾಸೆ ಮೂಡಿಸಿದ್ದಾರೆ.
ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಿರುವ ಉತ್ತಪ್ಪ, ಸಿಗುವ ಅವಕಾಶಗಳನ್ನೆಲ್ಲ ಕೈ ಚೆಲ್ಲುತ್ತಿದ್ದಾರೆ. ಇದರಿಂದ ಅವರು ಮುಂದಿನ ಪಂದ್ಯಗಳಲ್ಲಿ ಸ್ಥಾನ ಕಳೆದುಕೊಳ್ಳುವ ಅಪಾಯಕ್ಕೂ ಸಿಲುಕಿದ್ದಾರೆ. ಉತ್ತಪ್ಪ ಆಟದ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಸಮಯ ಕಳೆಯುತ್ತಿದೆ
ರಾಬಿನ್ ಉತ್ತಪ್ಪ ಯಾವುದೇ ರೀತಿಯ ಫಾರ್ಮ್‌ನಲ್ಲಿ ಇದ್ದಾರೆ ಎನಿಸುತ್ತಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ರಾಬಿನ್ ಉತ್ತಪ್ಪ ಮತ್ತು ರಿಯಾನ್ ಪರಾಗ್ ಅವರ ಸಮಯ ಕಳೆದುಹೋಗುತ್ತಿದೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ಉತ್ತಪ್ಪ ಅವರಲ್ಲಿ ಯಾವುದೇ ರೀತಿಯ ಫಾರ್ಮ್ ಕಾಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಉತ್ತಪ್ಪ ಕಳಪೆ ಪ್ರದರ್ಶನ
ರಾಜಸ್ಥಾನ ರಾಯಲ್ಸ್ ಆಡಿರುವ ಈವರೆಗಿನ ಪಂದ್ಯಗಳಲ್ಲಿ ರಾಬಿನ್ ಉತ್ತಪ್ಪ ಅವರ ಸ್ಕೋರ್ 5, 9, 2 ಮತ್ತು 17. ಉತ್ತಪ್ಪ ಮೇಲೆ ಹೆಚ್ಚಿನ ನಿರೀಕ್ಷೆ ಹಾಗೂ ಜವಾಬ್ದಾರಿ ಇರುವಾಗ ಅವರ ಪ್ರದರ್ಶನ ನಿರಾಸೆಗೊಳಿಸಿದೆ. ಜತೆಗೆ ಎರಡು ಸುಲಭದ ಕ್ಯಾಚ್‌ಗಳನ್ನು ಕೂಡ ಅವರು ಕೈಚೆಲ್ಲಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿ ಯಶಸ್ವಿಯಾಗಿದ್ದ ಉತ್ತಪ್ಪ ಅವರಿಗೆ ನಾಯಕರಾಗಿದ್ದ ಗೌತಮ್ ಗಂಭೀರ್, ಉತ್ತಪ್ಪಗೆ ಸಿಕ್ಕಿದ್ದ ಸಮಯ ಮೀರಿ ಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 2020: ಸತತ ನಾಲ್ಕನೇ ಪಂದ್ಯದಲ್ಲೂ ರಾಬಿನ್ ಉತ್ತಪ್ಪ ನಿರಾಸೆ

ಉತ್ತಪ್ಪ ನಿರೀಕ್ಷೆ ಪೂರ್ಣಗೊಳಿಸಲಿ
'ರಾಬಿನ್ ಉತ್ತಪ್ಪ ಉತ್ತಮ ಪ್ರದರ್ಶನ ನೀಡಲೇಬೇಕು. ಆಟವನ್ನು ಮುಗಿಸುವ ಸಾಮರ್ಥ್ಯವಿದೆ ಎಂದು ರಾಬಿನ್ ಉತ್ತಪ್ಪ ಅವರ ಮೇಲೆ ಬಹಳ ನಿರೀಕ್ಷೆಗಳಿದ್ದವು. ಇಲ್ಲದಿದ್ದರೆ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಬೇಕಿರುವ ಕೆಲವು ಆಕ್ರಮಣಕಾರಿ ಆಟವನ್ನಾದರೂ ನೀಡಬೇಕು. ಹೀಗಾಗಿ ರಾಬಿನ್ ಉತ್ತಪ್ಪ ಆ ನಿರೀಕ್ಷೆಗಳನ್ನು ತುಂಬಲೇಬೇಕು' ಎಂದು ಗಂಭೀರ್ ಹೇಳಿದ್ದಾರೆ.

ರಿಯಾನ್ ಪರಾಗ್ ಸ್ಥಾನಕ್ಕೂ ಕುತ್ತು
ಯುವ ಆಟಗಾರ ರಿಯಾನ್ ಪರಾಗ್ ಕೂಡ ಯಾವುದೇ ರೀತಿಯಲ್ಲಿ ಗಮನ ಸೆಳೆದಿಲ್ಲ. ಅವರು ಸರಿಯಾಗಿ ಆಡದೆ ಹೋದರೆ ಬೆನ್ ಸ್ಟೋಕ್ಸ್ ಬರುತ್ತಿದ್ದಂತೆ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಬೇಕಾಗುತ್ತದೆ. ತಂಡದಲ್ಲಿ ಬೆಂಚ್‌ನಲ್ಲಿ ಕುಳಿತಿರುವ ಅನೇಕ ಆಟಗಾರರಾಗಿದ್ದಾರೆ. ಪರಾಗ್ ಮತ್ತು ಉತ್ತಪ್ಪ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದೆ ಹೋದರೆ ಬೇರೆ ಆಟಗಾರರಿಗೆ ಅವಕಾಶ ನೀಡಬೇಕಾಗುತ್ತದೆ. ತಂಡದ ಸಂಯೋಜನೆಯೇ ವಿಭಿನ್ನವಾಗಲಿದೆ ಎಂದಿದ್ದಾರೆ.
ಕೊಹ್ಲಿ ಹೆಸರಿನಲ್ಲಿದ್ದ ಅತಿ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ರಾಬಿನ್ ಉತ್ತಪ್ಪ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications