ಕೊನೆಯ ಓವರ್ ಜಡೇಜಾ ಎಸೆದಿದ್ದು ಹೇಗೆ ಅನುಕೂಲವಾಯಿತು ಎಂದು ವಿವರಿಸಿದ ಧವನ್

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ ರೋಚಕವಾಗಿ ಗೆದ್ದುಕೊಂಡಿತು. ಶಿಖರ್ ಧವನ್ ಅಜೇಯ ಶತಕ ಹಾಗೂ ಅಂತಿಮ ಓವರ್‌ನಲ್ಲಿ ಅಕ್ಸರ್ ಪಟೇಲ್ ಮಿಂಚಿನ ಆಟದಿಂದಾಗಿ ಚೆನ್ನೈ ಕೊನೆಯ ಓವರ್‌ನಲ್ಲಿ ಸೋಲು ಕಂಡಿತ್ತು.
ಅಂತಿಮ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 17 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಅಕ್ಸರ್ ಪಟೇಲ್ ಸಿಕ್ಸರ್‌ಗಳ ಸುರಿಮಳೆ ಸಿಡಿಸಿ ಗೆಲುವನ್ನು ಸಾಧ್ಯವಾಗಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಶಿಖರ್ ಧವನ್ ಅಂತಿಮ ಓವರ್‌ಅನ್ನು ರವೀಂದ್ರ ಜಡೇಜಾ ಎಸೆದಿದ್ದು ರನ್ ಗಳಿಸಲು ಅನುಕೂಲವಾಯಿತು ಎಂದು ಹೇಳಿದ್ದಾರೆ.
'ಬ್ರಾವೋ ಅಂತಿಮ ಓವರ್ ಬೌಲಿಂಗ್ ಮಾಡಲು ಶಕ್ತರಾಗಿಲ್ಲ ಎಂಬುದು ನಮಗೆ ತಿಳಿದಿತ್ತು. ಹಾಗಾಗಿ ರವೀಂದ್ರ ಜಡೇಜಾ ಅವರೇ ಬೌಲಿಂಗ್ ಮಾಡಬೇಕಿತ್ತು. ನಾವಿಬ್ಬರೂ ಎಡಗೈ ಆಟಗಾರರಾಗಿದ್ದು ರವೀಂದ್ರ ಜಡೇಜಾ ಬೌಲಿಂಗ್ ನಮಗೆ ಅನುಕೂಲವಾಗಿತ್ತು ಎಂದು' ಶಿಖರ್ ಧವನ್ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
19ನೇ ಓವರ್‌ಲ್ಲಿ ಸ್ಯಾಮ್ ಕರ್ರನ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಅವರ ಯಾರ್ಕರ್ ಎಸೆತಗಳು ನಿಖರವಾಗಿತ್ತು. ಇಬ್ಬನಿ ಇದ್ದ ಕಾರಣ ಅದರ ಅನುಕೂಲವನ್ನು ನಾವು ಪಡೆದುಕೊಳ್ಳಲು ಯಶಸ್ವಿಯಾದೆವು ಎಂದು ಧವನ್ ಪ್ರತಿಕ್ರಿಯಿಸಿದ್ದಾರೆ. 19ನೇ ಓವರ್ ಎಸೆದ ಸ್ಯಾಮ್ ಕರ್ರನ್ ಅದ್ಭುತ ಬೌಲಿಂಗ್ ದಾಳಿಯ ಮೂಲಕ ಕೇವಲ 4 ರನ್ ನೀಡುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಇದೇ ಸಂದರ್ಭದಲ್ಲಿ ಶಿಖರ್ ಧವನ್ ಅಕ್ಸರ್ ಪಟೇಲ್ ಬಗ್ಗೆಯೂ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಅಕ್ಸರ್ ಪಟೇಲ್ ಯಾವಾಗಲೂ ನಮ್ಮ ಪಾಲಿಗೆ ಅಸ್ತ್ರ. ಬೌಲಿಂಗ್‌ನಲ್ಲಿ ಅಕ್ಸರ್ ಯಾವಾಗಲೂ ನಿಯಂತ್ರಣವನ್ನು ಸಾಧಿಸಿಕೊಂಡು ಬರುತ್ತಿದ್ದಾರೆ, ಆಲೌಂಡರ್ ಆಗಿ ಅವರು ನೀಡಿದ ಪ್ರದರ್ಶನ ಅಮೋಘ ಎಂದು ಧವನ್ ಹೇಳಿದ್ದಾರೆ. ಶಿಖರ್ ಧವನ್ ಈ ಪಂದ್ಯದ ಮೂಲಕ ಐಪಿಎಲ್‌ನಲ್ಲಿ ಚಿಚ್ಚಲ ಶತಕವನ್ನು ಬಾರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications