CSK ಅಭಿಮಾನಿಗಳನ್ನು ನೆನೆಸಿಕೊಂಡ್ರೆ ದುಃಖವಾಗುತ್ತದೆ: ವೀರೇಂದ್ರ ಸೆಹ್ವಾಗ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶನಿವಾರ ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ 37 ರನ್‌ಗಳಿಂದ ಸೋತಾಗ ಸಿಎಸ್‌ಕೆ ಅಭಿಮಾನಿಗಳನ್ನು ನೆನಸಿಕೊಂಡರೆ ದುಃಖವಾಗುತ್ತದೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಈ ಹಿಂದೆ ಎಲ್ಲಾ ಸೀಸನ್‌ನಲ್ಲಿ ಸಿಎಸ್‌ಕೆ ತಂಡವೆಂದ್ರೆ ಎದುರಾಳಿಗಳಿಗೆ ಭಯವಿತ್ತು, ಅಲ್ಲದೆ ಸಿಎ್‌ಕೆ ಬಗ್ಗೆ 'ಎಚ್ಚರದಿಂದ' ಇರುತ್ತಿದ್ದವು ಆದರೆ ಈ ವರ್ಷ ಅವರ ಬ್ಯಾಟಿಂಗ್ ನಿಜವಾಗಿಯೂ ಅವರನ್ನು ನಿರಾಸೆಗೊಳಿಸಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
"ಚೆನ್ನೈ ಅಭಿಮಾನಿಗಳಿಗೆ ಇದು ನಿಜಕ್ಕೂ ಬೇಸರ. ಇದು ಹೋರಾಡಿದ ತಂಡ ಮತ್ತು ಇತರೆ ತಂಡಗಳು ಕೊನೆಯ ಹಂತದವರೆಗೂ ಜಾಗರೂಕರಾಗಿರುತ್ತಿದ್ದವು. ವಿಶೇಷವಾಗಿ ತಂಡದ ಬ್ಯಾಟಿಂಗ್ ನಿರಾಶಾದಾಯಕವಾಗಿದೆ, ಅದನ್ನು ಬಿಟ್ಟುಬಿಡಿ. ಕೊಹ್ಲಿ ಇಂದು ಹೆಚ್ಚುವರಿ ವಿಶೇಷವಾಗಿದ್ದರು. ಅನೇಕ ಬ್ಯಾಟ್ಸ್‌ಮನ್‌ಗಳು ಇದರಿಂದ ಕಲಿಯಬಹುದು, ಕೇವಲ 5 ಡಾಟ್‌ಗಳನ್ನು ಮಾತ್ರ ಆಡಿದರು "ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಸಿಎಸ್‌ಕೆ 7 ಪಂದ್ಯಗಳಲ್ಲಿ ಕೇವಲ ಎರಡು ಜಯಗಳಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 7 ನೇ ಸ್ಥಾನದಲ್ಲಿದೆ.
ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಸ್ಟಾರ್ ಪರ್ಫಾರ್ಮರ್ ಆಗಿದ್ದರು. ಎಬಿ ಡಿವಿಲಿಯರ್ಸ್ ಸೇರಿದಂತೆ ಆರಂಭಿಕ ಬ್ಯಾಟ್ಸ್‌ಮನ್‌ಗಳು ಮುಗ್ಗರಿಸಿದರ ನಡುವೆಯು ಕೊಹ್ಲಿ ಅಜೇಯ 90ರನ್‌ಗಳು ತಂಡದ ಮೊತ್ತವನ್ನ 169 ಕ್ಕೆ ತೆಗೆದುಕೊಂಡು ಹೋಯಿತು. ಅಲ್ಲದೆ ಉತ್ತಮ ಬೌಲಿಂಗ್ ದಾಳಿಯಿಂದ ಸಿಎಸ್‌ಕೆ ವಿರುದ್ಧ ಐಪಿಎಲ್‌ನಲ್ಲಿ 37ರನ್‌ಗಳ ಬೃಹತ್ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications