Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಕ್ರೀಡಾ ಸ್ಫೂರ್ತಿ' ಮರೆತ ಧೋನಿ ಫೋಟೊ ಹಾಕಿ ರಿಕಿ ಪಾಂಟಿಂಗ್ ಕಾಲೆಳೆದ ಐಸ್‌ಲ್ಯಾಂಡ್

ಕಳೆದ ಎರಡು ದಿನಗಳಿಂದ 'ಮಂಕಡಿಂಗ್' ಮತ್ತೆ ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಆರ್. ಅಶ್ವಿನ್, ಆರ್‌ಸಿಬಿ ಆಟಗಾರ ಆರೋನ್ ಫಿಂಚ್ ಅವರನ್ನು 'ಮಂಕಡ್' ರೀತಿ ಔಟ್ ಮಾಡುವ ಎಚ್ಚರಿಕೆ ನೀಡಿದ್ದು. ಅಶ್ವಿನ್ ಬೌಲ್ ಮಾಡುವ ಮೊದಲೇ ಆರೋನ್ ಫಿಂಚ್ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದರು. ಬೌಲ್ ಮಾಡದೆ ಹಾಗೆಯೇ ನಿಂತ ಅಶ್ವಿನ್ ವಿಕೆಟ್‌ಗೆ ಚೆಂಡು ಮುಟ್ಟಿಸುವ ಎಚ್ಚರಿಕೆ ನೀಡಿದ್ದರು. ಅವರು ಹಾಗೆ ಮಾಡಿದ್ದರೆ ಫಿಂಚ್ ಔಟ್ ಆಗುತ್ತಿದ್ದರು.

ಆರ್. ಅಶ್ವಿನ್ ಈ ರೀತಿ ಮಾಡಿರುವುದು ಇದೇ ಮೊದಲಲ್ಲ. 'ಮಂಕಡಿಂಗ್' ಔಟ್‌ನಲ್ಲಿ ಅಶ್ವಿನ್ ಹೆಸರುವಾಸಿ. ಈ ರೀತಿ ಔಟ್ ಮಾಡುವುದು ಕ್ರೀಡಾ ಸ್ಫೂರ್ತಿ ಅಲ್ಲ ಎಂದು ಟೀಕಿಸಲಾಗುತ್ತದೆ. ಆದರೆ ಕ್ರಿಕೆಟ್‌ ನಿಯಮದಲ್ಲಿ ಇದಕ್ಕೆ ನಿಷೇಧವಿಲ್ಲ. ಹೀಗಿರುವಾಗ ಬ್ಯಾಟ್ಸ್‌ಮನ್ ಮೊದಲೇ ಕ್ರೀಸ್ ಬಿಟ್ಟಾಗ ಬೌಲರ್ ಔಟ್ ಮಾಡುವುದರಲ್ಲಿ ತಪ್ಪೇನಿದೆ? ಇದು ಆಟದ ಒಂದು ಭಾಗವಲ್ಲವೇ? ಎಂದೂ ಪ್ರಶ್ನಿಸಲಾಗುತ್ತಿದೆ.

ಪ್ರಸಕ್ತ ಸಾಲಿನ ಐಪಿಎಲ್ ಶುರುವಾಗುವ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅವರು ಅಶ್ವಿನ್ ಈ ರೀತಿ 'ಮಂಕಡಿಂಗ್' ಮಾಡಲು ಅವಕಾಶ ನೀಡುವುದಿಲ್ಲ. ಅದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದಿದ್ದರು. ಆದರೆ ಫಿಂಚ್ ಘಟನೆ ಬಳಿಕ ಅಶ್ವಿನ್, 'ಇದೇ ಮೊದಲ ಮತ್ತು ಕೊನೆಯ ಎಚ್ಚರಿಕೆ' ಎಂದು ಬ್ಯಾಟ್ಸ್‌ಮನ್‌ಗಳನ್ನು ಎಚ್ಚರಿಸಿದ್ದಾರೆ. ಮುಂದೆ ಓದಿ.

ನಗು ಬೀರಿದ್ದ ಪಾಂಟಿಂಗ್

ನಗು ಬೀರಿದ್ದ ಪಾಂಟಿಂಗ್

ಆರೋನ್ ಫಿಂಚ್ ಅವರನ್ನು ಔಟ್ ಮಾಡದೆ ಆರ್. ಅಶ್ವಿನ್ ಎಚ್ಚರಿಕೆಯ ಸೂಚನೆ ನೀಡಿದ ಘಟನೆ, ಡಗೌಟ್‌ನಲ್ಲಿ ಕುಳಿತಿದ್ದ ರಿಕಿ ಪಾಂಟಿಂಗ್ ಸೇರಿದಂತೆ ಎಲ್ಲರ ಮುಖದಲ್ಲಿ ನಗು ತರಿಸಿತ್ತು. 'ಮಂಕಡಿಂಗ್' ಮಾಡುವುದನ್ನು ಬಯಸುವುದಿಲ್ಲ ಎಂಬ ಪಾಂಟಿಂಗ್ ಹೇಳಿಕೆಗೆ ಅಶ್ವಿನ್ ಗೌರವ ನೀಡಿದಂತಿತ್ತು.

ಪಾಂಟಿಂಗ್ ಕಡೆಗೆ ವ್ಯಂಗ್ಯದ ಬಾಣ

ಪಾಂಟಿಂಗ್ ಕಡೆಗೆ ವ್ಯಂಗ್ಯದ ಬಾಣ

ಆದರೆ, 'ಕ್ರೀಡಾ ಸ್ಫೂರ್ತಿ'ಯ ಬಗ್ಗೆ ಮಾತನಾಡಿದ್ದ ರಿಕಿ ಪಾಂಟಿಂಗ್ ಬಗ್ಗೆ ಐಸ್‌ಲ್ಯಾಂಡ್ ಕ್ರಿಕೆಟ್ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವ್ಯಂಗ್ಯವಾಡಿದೆ. ತಾವು ಆಡುವಾಗ ಎಂದಿಗೂ ಕ್ರೀಡಾ ಸ್ಫೂರ್ತಿ ಮೆರೆಯದ ರಿಕಿ ಪಾಂಟಿಂಗ್ ಅವರ ಹೇಳಿಕೆ ಬೋಗಸ್ ಎಂದು ಲೇವಡಿ ಮಾಡಿದೆ. ಧೋನಿ ಅವರ ಸ್ಟಂಪಿಂಗ್ ಫೋಟೊವನ್ನು ಬಳಸಿ ತಮಾಷೆಯ ಪೋಸ್ಟ್ ಮಾಡಿದೆ.

ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಚೆನ್ನೈನ ಸ್ಟಾರ್ ಆಟಗಾರ ಅಲಭ್ಯ?

ಸ್ಟಂಪ್ ಔಟ್ ಫೋಟೊ

ಸ್ಟಂಪ್ ಔಟ್ ಫೋಟೊ

ಆರ್‌ಸಿಬಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅವರನ್ನು ಸ್ಟಂಪ್ ಔಟ್ ಮಾಡುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಎಂ.ಎಸ್. ಧೋನಿ ಅವರ ಫೋಟೊ ಹಂಚಿಕೊಂಡಿರುವ ಐಸ್‌ಲ್ಯಾಂಡ್ ಕ್ರಿಕೆಟ್, 'ಎಂಎಸ್ ಧೋನಿ ಹೇಗೆ ಕ್ರೀಡಾ ಸ್ಫೂರ್ತಿ ಮರೆತಿದ್ದಾರೆ ನೋಡಿ ಎಂದು ಹೇಳಿದೆ.

ಧೋನಿ ಕ್ರೀಡಾ ಸ್ಫೂರ್ತಿ ವಿರುದ್ಧ

ಧೋನಿ ಕ್ರೀಡಾ ಸ್ಫೂರ್ತಿ ವಿರುದ್ಧ

'ಇದು ಎಂಎಸ್ ಧೋನಿ ಅವರ ಆಟಗಾರನಿಗೆ ತಕ್ಕುದಲ್ಲದ ವರ್ತನೆ. ಅವರು ಹಲವು ಬಾರಿ ಈ ರೀತಿ ಮಾಡಿದ್ದಾರೆ. ಬ್ಯಾಟ್ಸ್‌ಮನ್ ಸ್ವಲ್ಪವೇ ಸ್ವಲ್ಪ ಕ್ರೀಸ್‌ನಿಂದ ಹೊರಗೆ ಬಂದಿದ್ದಾರೆ. ಅದು ಅವರ ತಪ್ಪಲ್ಲ. ಬ್ಯಾಟ್ಸ್‌ಮನ್‌ಗೆ ಒಂದು ಎಚ್ಚರಿಕೆ ನೀಡುವ ಮೂಲಕ ಅವರು ಬ್ಯಾಟಿಂಗ್ ಮುಂದುವರಿಸಲು ಅವಕಾಶ ನೀಡಬೇಕಿತ್ತು- ರಿಕಿ ಪಾಂಟಿಂಗ್' ಎಂದು ಪಾಂಟಿಂಗ್ ವಿರುದ್ಧ ವ್ಯಂಗ್ಯದ ಬಾಣ ಬಿಟ್ಟಿದೆ.

Story first published: Wednesday, October 7, 2020, 11:37 [IST]
Other articles published on Oct 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+