Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DK ಕಂಬ್ಯಾಕ್: 22 ಎಸೆತಗಳಲ್ಲಿ ಅರ್ಧಶತಕ ದಾಖಲು

IPL 2020: Joint Fastest Fifty For Dinesh Karthik In IPL

ದುಬೈ ಇಂಟರ್‌ನ್ಯಾಷ್‌ನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ , ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ.

ಐಪಿಎಲ್ 13ನೇ ಆವೃತ್ತಿಯ 24ನೇ ಪಂದ್ಯದಲ್ಲಿ ಪಂಜಾಬ್‌-ಕೊಲ್ಕತ್ತಾ ಸೆಣಸಾಟ ನಡೆಸಿವೆ. ಈ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ನಾಯಕ ಡಿನೇಶ್ ಕಾರ್ತಿಕ್‌ ಅಬ್ಬರದ ಆಟವಾಡಿ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳಿದ್ದು, ಐಪಿಎಲ್‌ನಲ್ಲಿ 19ನೇ ಅರ್ಧಶತಕ ದಾಖಲಿಸಿದರು.

ಇನ್ನು ದಿನೇಶ್ ಕಾರ್ತಿಕ್‌ಗೆ ಇದು ವೈಯಕ್ತಿಕವಾಗಿ ವೇಗದ ಅರ್ಧಶತಕವಾಗಿದ್ದು, ಹಿಂದೆ 2018ರಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್‌ ವಿರುದ್ಧವೇ ಇಂದೋರ್‌ನಲ್ಲಿ 22 ಎಸೆತಗಳಲ್ಲಿ ಅರ್ಧಶತಕ ಗಡಿ ಮುಟ್ಟಿದ್ರು. ಆ ಬಳಿಕ ತಮ್ಮ ವೈಯಕ್ತಿಕ ದಾಖಲೆಯನ್ನು ಮತ್ತೆ ಮುಟ್ಟಿದ್ದಾರೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್‌ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು. 29 ಎಸೆತಗಳಲ್ಲಿ 58 ರನ್ ದಾಖಲಿಸಿದ ದಿನೇಶ್ ಕಾರ್ತಿಕ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ರನ್‌ ಔಟ್ ಆದ್ರು.

Story first published: Saturday, October 10, 2020, 17:42 [IST]
Other articles published on Oct 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+