ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಅಪರೂಪದ ಸಾಧನೆ ಮಾಡಿದ ಧೋನಿ
ಗಾಯ ಮತ್ತು ಆಯಾಸದ ನಡುವೆಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ, ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯವರೆಗೂ ಹೋರಾಟ ನಡೆಸುವ ಪ್ರಯತ್ನ ಮಾಡಿದ್ದರು. ಧೋನಿ ಅವರ ಬ್ಯಾಟಿಂಗ್ ಶೈಲಿ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಟೀಕೆಗೆ ಒಳಗಾಗುತ್ತಿದೆ. ಟಿ20ಯನ್ನೂ ಟೆಸ್ಟ್ ರೀತಿ ಆಡುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಅದಕ್ಕೆ ಈಗ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಅವರು ಬಳಲಿದ ಬಗೆಯೂ ಸೇರಿಕೊಂಡಿದೆ.
ಧೋನಿಗೆ ವಯಸ್ಸಾಗಿದೆ. ಹಿಂದಿನಂತೆ ಆಡಲೂ ಆಗುತ್ತಿಲ್ಲ, ಓಡಲೂ ಆಗುತ್ತಿಲ್ಲ. ಗೆಲ್ಲುವ ಪಂದ್ಯಗಳನ್ನೂ ಅವರು ಸೋಲಿಸುತ್ತಿದ್ದಾರೆ. ತಂಡಕ್ಕೆ ಅವಶ್ಯಕತೆ ಬಿದ್ದಾಗ ಮೇಲಿನ ಕ್ರಮಾಂಕದಲ್ಲಿ ಆಡಿ ಜವಾಬ್ದಾರಿಯನ್ನು ಹೊರಲು ಹಿಂದೇಟು ಹಾಕುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಆಡಿದರೂ ಧೋನಿ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಈ ನಡುವೆ ಧೋನಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಟಿ20ಯಲ್ಲಿ ಒಮ್ಮೆಯೂ 'ಡಕ್' ಔಟ್ ಆಗದೆ ಸತತವಾಗಿ 100 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಎಂ.ಎಸ್. ಧೋನಿ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಈ ದಾಖಲೆ ಮಾಡಿದ ಜಗತ್ತಿನ ಐದನೇ ಆಟಗಾರ ಧೋನಿ. ಮುಂದೆ ಓದಿ.

ಎಂ.ಎಸ್. ಧೋನಿ
2015ರಿಂದ ಇಲ್ಲಿಯವರೆಗೂ ಧೋನಿ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಒಳಗೊಂಡಂತೆ ಆಡಿರುವ ಸತತ 100 ಟಿ20 ಪಂದ್ಯಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ. ಧೋನಿ ಬಗ್ಗೆ ಹಲವು ಟೀಕೆಗಳಿದ್ದರೂ ಹೊಡಿ-ಬಡಿ ಆಟದ ಚುಟುಕು ಕ್ರಿಕೆಟ್‌ನಲ್ಲಿ ಅವರದು ವಿಶಿಷ್ಟ ಸಾಧನೆಯೇ ಸರಿ.

ಕ್ರಿಸ್ ಗೇಲ್
ಟಿ20ಯಲ್ಲಿ ಶೂನ್ಯಕ್ಕೆ ಔಟಾಗದೆ ಅತ್ಯಧಿಕ ಪಂದ್ಯವಾಡಿದ ದಾಖಲೆಯಲ್ಲಿ ಮೊದಲ ಸ್ಥಾನದಲ್ಲಿರುವುದು ವೆಸ್ಟ್ ಇಂಡೀಸ್‌ನ ಪವರ್ ಹಿಟ್ಟರ್ ಕ್ರಿಸ್ ಗೇಲ್. 2012-2016ರ ಅವಧಿಯಲ್ಲಿ ವೆಸ್ಟ್ ಇಂಡೀಸ್‌ನ ಅಂತಾರಾಷ್ಟ್ರೀಯ ಪಂದ್ಯಗಳು, ಕೆರಿಬಿಯನ್ ಲೀಗ್ ಮತ್ತು ಐಪಿಎಲ್ ಸೇರಿದಂತೆ ಅನೇಕ ಟಿ 20 ಟೂರ್ನಿಗಳಲ್ಲಿ ಆಡಿದ ಗೇಲ್, ಸತತ 145 ಪಂದ್ಯಗಳಲ್ಲಿ ಡಕೌಟ್ ಆಗದೆ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ 2020: ಸುರೇಶ್ ರೈನಾ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ

ದಿನೇಶ್ ಚಾಂಡಿಮಾಲ್
ಎರಡನೆಯ ಸ್ಥಾನದಲ್ಲಿ ಶ್ರೀಲಂಕಾದ ಕ್ರಿಕೆಟಿಗ ದಿನೇಶ್ ಚಾಂಡಿಮಾಲ್ ಇದ್ದಾರೆ. 2009ರಿಂದ ಇದುವರೆಗೂ ಅವರು 102 ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗದೆ ಆಡಿದ್ದಾರೆ. ಆದರೆ ಅವರು 11 ವರ್ಷಗಳ ಅವಧಿಯಲ್ಲಿ ಆಡಿದ ಟಿ20 ಮಾದರಿ ಪಂದ್ಯಗಳು ತೀರಾ ಕಡಿಮೆ ಎನ್ನಬಹುದು.

ಶಾನ್ ಮಾರ್ಷ್
ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್ ಶಾನ್ ಮಾರ್ಷ್ 2012-2019ರ ಅವಧಿಯಲ್ಲಿ ಶೂನ್ಯಕ್ಕೆ ಔಟಾಗದೆ ಸತತವಾಗಿ 102 ಪಂದ್ಯಗಳನ್ನು ಆಡಿದ್ದರು. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಜೆಪಿ ಡುಮಿನಿ 2014-2019ರ ಅವಧಿಯಲ್ಲಿ 101 ಪಂದ್ಯಗಳಲ್ಲಿ ಡಕೌಟ್ ಆಗದೆ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications