For Quick Alerts
ALLOW NOTIFICATIONS  
For Daily Alerts
 

ಪರಸ್ಪರ ಕೋಪದಿಂದ ಬೈಯ್ದಾಡಿಕೊಂಡ ಪಾಂಡ್ಯ ಬ್ರದರ್ಸ್: ಸಿಟ್ಟಿಗೆ ಕಾರಣವೇನು ಗೊತ್ತಾ?

IPL 2020: Pandya Brothers Getting Angry Over Each Other; A Rare Moment In The IPL

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯ 27ನೇ ಪಂದ್ಯದ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ದೆಹಲಿ ಕ್ಯಾಪಿಟಲ್ಸ್ (ಡಿಸಿ) ಭಾನುವಾರ ಮುಖಾಮುಖಿಯಾಗಿದ್ದವು. ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರಾಮವಾಗಿ ಐದು ವಿಕೆಟ್‌ಗಳ ಜಯ ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಜಿಗಿಯಿತು.

ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಪ್ರದರ್ಶನದಿಂದಾಗಿ ರೋಹಿತ್ ನೇತೃತ್ವದ ಮುಂಬೈ ಪ್ರಸಕ್ತ ಸೀಸನ್‌ನಲ್ಲಿ ಐದನೇ ಗೆಲುವು ದಾಖಲಿಸಿತು. ಆದಾಗ್ಯೂ, ಡೆಲ್ಲಿ ಬ್ಯಾಟಿಂಗ್ ಮಾಡುವಾಗ ಅವರು ಸ್ವಲ್ಪ ಒತ್ತಡದಲ್ಲಿದ್ದ ಕಾರಣ ಮುಂಬೈ ಇದು ಸುಲಭದ ಗೆಲುವು ಆಗಿರಲಿಲ್ಲ.

ಇದೇ ವೇಳೆಯಲ್ಲಿ ಐಪಿಎಲ್‌ನ ಬೆಸ್ಟ್ ಬ್ರದರ್ಸ್ ರೀತಿಯಲ್ಲಿ ಕಣಕ್ಕಿಳಿಯುವ ಪಾಂಡ್ಯ ಬ್ರದರ್ಸ್‌ ಬಲು ಅಪರೂಪವೆಂಬಂತೆ ಪರಸ್ಪರ ಕೋಪವನ್ನು ವ್ಯಕ್ತಪಡಿಸಿದರು. ಶಿಖರ್ ಧವನ್ ಮತ್ತು ಅಯ್ಯರ್ ಜೊತೆಯಾಟವಾಡುತ್ತಿದ್ದಾಗ, ಒಂದು ರನ್ ಕದಿಯಲು ಯತ್ನಿಸಿದಾಗ ಹಾರ್ದಿಕ್ ಪಾಂಡ್ಯ ಬೌಲರ್‌ನ ತುದಿಯಲ್ಲಿ ಎಸೆಯಲು ನಿರ್ಧರಿಸಿದರು ಆದರೆ ಅದು ವ್ಯರ್ಥವಾಗಿ ಅಣ್ಣನ (ಕೃನಾಲ್ ಪಾಂಡ್ಯ) ಕೋಪಕ್ಕೆ ಕಾರಣವಾಯಿತು.

ಕ್ರುನಾಲ್ ಪಾಂಡ್ಯ ಬೌಲಿಂಗ್ ಮಾಡುವಾಗ ಈ ಘಟನೆ ಇನ್ನಿಂಗ್ಸ್‌ನ ಏಳನೇ ಓವರ್‌ನಲ್ಲಿ ನಡೆದಿದೆ. ಎಡಗೈ ಸ್ಪಿನ್ನರ್‌ ಕೃನಾಲ್ ಓವರ್‌ನ ಐದನೇ ಎಸೆತವನ್ನು ಅಯ್ಯರ್ ಟ್ರಡ್ ಮಾಡಿ ತ್ವರಿತ ಸಿಂಗಲ್‌ಗೆ ಓಡಿದಾರು. ಈ ವೇಳೆ ಬರ್ತ್‌ ಡೇ ಬಾಯ್ ಹಾರ್ದಿಕ್ ಪಾಂಡ್ಯ ಕವರ್ ಪ್ರದೇಶಕ್ಕೆ ಹತ್ತಿರವಿರುವ ಪ್ರದೇಶದಿಂದ ಚೆಂಡಿನ ಕಡೆಗೆ ವೇಗವಾಗಿ ಓಡಿಬಂದು ರನ್‌ಔಟ್‌ ಮಾಡಲು ಸ್ಟ್ರೈಕರ್ ಅಲ್ಲದವರ ಮೇಲೆ ಎಸೆದರು.

ಹಾರ್ದಿಕ್ ಪಾಂಡ್ಯ ಎಸೆದ ಥ್ರೋ ಉತ್ತಮವಾಗಿರ್ಲಿಲ್ಲ ಜೊತೆಗೆ ಕೃನಾಲ್ ಕೂಡ ಚೆಂಡನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಇದರಿಂದ ತನ್ನ ತನ್ನ ಕಿರಿಯ ಸಹೋದರನ ವರ್ತನೆಯು ಕೃನಾಲ್‌ಗೆ ಇಷ್ಟವಾಗದೇ ಮೈದಾನದಲ್ಲೇ ತನ್ನ ಕೋಪವನ್ನು ವ್ಯಕ್ತಪಡಿಸಿದರು.

ಬ್ಯಾಟ್ಸ್‌ಮನ್ ಆರಾಮವಾಗಿ ಕ್ರೀಸ್‌ನತ್ತ ಸಾಗಿದ್ದಾಗ ಚೆಂಡನ್ನು ಎಸೆಯುವ ಅಗತ್ಯವಿಲ್ಲ ಮತ್ತು ಅವನ ಹಿಂದೆ ಯಾವುದೇ ಕವರ್ ಇಲ್ಲ ಎಂದು ಕೃನಾಲ್ ಕೋಪಕ್ಕೆ ಕಾರಣವಾಯಿತು. ಇದಕ್ಕೆ ಹಾರ್ದಿಕ್ ಪಾಂಡ್ಯ ಕೂಡ ವಿವರಣೆಯನ್ನು ನೀಡುತ್ತಾ ಫೀಲ್ಡ್‌ ಕವರ್ ಮಾಡಲು ಮತ್ತು ರನ್ ತಡೆಗೆ ಶೀಘ್ರವಾಗಿ ಬರಬೇಕಾಯಿತು ಎಂದು ಕೃನಾಲ್ ಮೇಲೆ ಸಿಟ್ಟನ್ನು ಹೊರಹಾಕಿದರು. ಈ ಮೂಲಕ ಪಾಂಡ್ಯ ಸಹೋದರರು ಪರಸ್ಪರರ ಮೇಲೆ ಕೋಪಗೊಳ್ಳುವ ಅಪರೂಪದ ಕ್ಷಣಕ್ಕೆ ಮುಂಬೈ-ಡೆಲ್ಲಿ ಪಂದ್ಯ ಸಾಕ್ಷಿಯಾಯ್ತು.

Story first published: Monday, October 12, 2020, 17:53 [IST]
Other articles published on Oct 12, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+