Head To Head: ಇಂದು ಧೋನಿಗೆ ಕೊಹ್ಲಿ ಚಾಲೆಂಜ್: ರೆಕಾರ್ಡ್ಸ್ ಏನು ಹೇಳುತ್ತೆ?
ಐಪಿಎಲ್ 13 ಆವೃತ್ತಿಯ 25ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಾದಾಟ ನಡೆಸಲಿವೆ. ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಚೆನ್ನೈ ಪಾಲಿಗೆ ಮಾಡು ಇಲ್ಲವೆ ಮಡಿ ಪರಿಸ್ಥಿತಿ ಸೃಷ್ಠಿಸಿದೆ
ಆಡಿರುವ ಆರು ಪಂದ್ಯಗಳಲ್ಲಿ ಕೇವಲ 2 ಗೆಲುವು ಕಂಡು 4 ಪಂದ್ಯ ಸೋತಿರುವ ಧೋನಿ ಬಳಗ ಇಂದು ರಣತಂತ್ರದೊಂದಿಗೆ ಕಣಕ್ಕಿಳಿಯಲಿದೆ. ಐಪಿಎಲ್‌ನಲ್ಲಿ ಈವರೆಗೆ ಉಭಯ ತಂಡಗಳು 24 ಬಾರಿ ಪರಸ್ಪರ ಮುಖಾಮುಖಿಯಾಗಿವೆ, ಮತ್ತು ಸಿಎಸ್‌ಕೆ ಆರ್‌ಸಿಬಿಯ ವಿರುದ್ಧ 15 ಪಂದ್ಯ ಗೆಲುವಿನ ದಾಖಲೆ ಹೊಂದಿದ್ದು 8 ಪಂದ್ಯದಲ್ಲಿ ಸೋಲನ್ನು ಕಂಡಿದೆ.

ಕಳೆದ ಸೀಸನ್‌ನಲ್ಲಿ 1-1 ಸಮಬಲದ ಸಾಧನೆ
ಕಳೆದ ಆವೃತ್ತಿಯಲ್ಲಿ, ಚೆನ್ನೈ ಮತ್ತು ಆರ್‌ಸಿಬಿ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾಗವಹಿಸಿದ್ದವು. ಸೀಸನ್ ಓಪನಿಂಗ್ ಪಂದ್ಯದಲ್ಲಿ ಆರ್‌ಸಿಬಿ ಅತ್ಯಂತ ಕಡಿಮೆ ರನ್‌ಗಳಿಸಿತು. ಆರ್‌ಸಿಬಿ ಕೇವಲ 70 ರನ್ ಇನ್ನಿಂಗ್ಸ್ ಮುಗಿಸಿತು ಮತ್ತು ಸಿಎಸ್‌ಕೆ ಕೂಡ ಕಷ್ಟ ಪಟ್ಟು 18 ನೇ ಓವರ್‌ನಲ್ಲಿ ಏಳು ವಿಕೆಟ್‌ಗಳಿಂದ ಜಯಗಳಿಸಿತು.
ಇನ್ನು ಕಳೆದ ಸೀಸನ್‌ನ ಇನ್ನೊಂದು ಪಂದ್ಯದಲ್ಲಿ, ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡವು, ಎದುರಾಳಿ ನಾಯಕ ಎಂ.ಎಸ್. ಧೋನಿ ಅವರ ಅಜೇಯ 84 ರನ್ ಹೊರತಾಗಿಯೂ ಚೆನ್ನೈಯನ್ನು ಕೇವಲ ಒಂದು ರನ್ ಗಳಿಂದ ಸೋಲಿಸಿ ರೋಚಕ ಜಯ ಸಾಧಿಸಿತು.

ಚೆನ್ನೈ 3 ಬಾರಿ ಚಾಂಪಿಯನ್, ಆರ್‌ಸಿಬಿ 3 ಬಾರಿ ಫೈನಲ್
ಒಟ್ಟಾರೆಯಾಗಿ, ಸಿಎಸ್‌ಕೆ ಈ ಬಾರಿ ಅಷ್ಟೊಂದು ಉತ್ತಮ ಪ್ರದರ್ಶನ ತೋರದಿದ್ರೂ, ಐಪಿಎಲ್ ಇತಿಹಾಸದಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಕಪ್ ಗೆದ್ದಿದೆ ಮತ್ತು ಎರಡು ಚಾಂಪಿಯನ್ಸ್ ಲೀಗ್ ಟಿ 20 (ಸಿಎಲ್‌ಟಿ 20) ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದೆ. ಮತ್ತೊಂದೆಡೆ, ಆರ್‌ಸಿಬಿ ಮೂರು ಐಪಿಎಲ್ ಫೈನಲ್‌ಗಳನ್ನು ತಲುಪಿದ್ದು ಕಪ್ ಗೆಲ್ಲಲು ಸಾಧ್ಯವಾಗಿಲ್ಲ.

ಆರ್‌ಸಿಬಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಚೆನ್ನೈ
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ವಿರುದ್ಧ ಧೋನಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 41.78 ರ ಸರಾಸರಿಯಲ್ಲಿ 741 ರನ್ ಗಳಿಸಿದ್ದಾರೆ ಮತ್ತು 25 ಇನ್ನಿಂಗ್ಸ್‌ಗಳಲ್ಲಿ 143.58 ಸ್ಟ್ರೈಕ್ ರೇಟ್ ಮಾಡಿದ್ದಾರೆ.

ಧೋನಿಗೆ ಸಮನಾಗಿ ಕೊಹ್ಲಿಯ ಅಬ್ಬರ
ಆರ್‌ಸಿಬಿ ವಿರುದ್ಧ ಧೋನಿಯ ಉತ್ತಮ ಪ್ರದರ್ಶನದಂತೆಯೇ, ಕೊಹ್ಲಿ ಕೂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಖತ್ತಾಗಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ವಿರುದ್ಧ ಕೊಹ್ಲಿ ಹೆಚ್ಚು ರನ್ ಗಳಿಸಿದ್ದಾರೆ. ಅವರು 37.35 ರ ಸರಾಸರಿಯಲ್ಲಿ 747 ರನ್ ಮತ್ತು 23 ಇನ್ನಿಂಗ್ಸ್‌ಗಳಲ್ಲಿ 124.08 ಸ್ಟ್ರೈಕ್ ರೇಟ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications