ಆತ ತುಂಬಾ ಅಪಾಯಕಾರಿ: ಮುಂಬೈ ಬ್ಯಾಟ್ಸ್‌ಮನ್ ಹೊಗಳಿದ ಸಚಿನ್

ದುಬೈ: ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಶ್ಲಾಘಿಸಿದ್ದಾರೆ. ಆತನೊಬ್ಬ ವಿಶೇಷ ಬ್ಯಾಟ್ಸ್‌ಮನ್. ಆತ ತುಂಬಾ ಅಪಾಯಕಾರಿ ಎಂದು ಯಾದವ್ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ಹೇಳಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೂರ್ಯ ಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡಿದ್ದರು. ಕೇವಲ 27 ಎಸೆತಗಳಲ್ಲಿ 79 ರನ್ ಕೊಡುಗೆ ನೀಡಿದ್ದರು. ಯಾದವ್ ರನ್ ಕೊಡುಗೆಯಿಂದ ಮುಂಬೈ ತಂಡ 193 ರನ್ ಕಲೆ ಹಾಕಿತ್ತು. ಅಲ್ಲದೆ ಪಂದ್ಯವನ್ನು 57 ರನ್‌ಗಳಿಂದ ಗೆದ್ದುಕೊಂಡಿತ್ತು.
ಸೂರ್ಯಕುಮಾರ್ ಯಾದವ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಸಚಿನ್, 'ಸೂರ್ಯಕುಮಾರ್ ಒಬ್ಬ ವಿಶೇಷ ಮತ್ತು ತುಂಬಾ ಅಪಾಯಕಾರಿ ಬ್ಯಾಟ್ಸ್‌ಮನ್. ಯಾಕೆಂದರೆ ಅತ ಮೈದಾನದ ಎಲ್ಲಾ ಬದಿಯಿಂದಲೂ ಆಡಬಲ್ಲರು' ಎಂದು ಬರೆದುಕೊಂಡಿದ್ದಾರೆ.
ಸಚಿನ್ ಮಾಡಿರುವ ಮತ್ತೊಂದು ಟ್ವೀಟ್‌ನಲ್ಲಿ, 'ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮುಂಬೈ ಇಂಡಿಯನ್ಸ್ ಬಲಿಷ್ಠ ಪ್ರದರ್ಶನ ನೀಡಿದೆ. ವಿಕೆಟ್ ಬೇಗನೆ ಪಡೆಯುವ ಮೂಲಕ ಅವರು ಪಂದ್ಯವನ್ನು ಚೆನ್ನಾಗಿ ಆರಂಭಿಸಿದರು. ಜಸ್‌ಪ್ರೀತ್ ಬೂಮ್ರಾ ಪ್ರದರ್ಶನ ವಿಶೇಷವಾಗಿತ್ತು. ಆತನ ಆಟ ನೋಡಿ ಎಂಜಾಯ್ ಮಾಡಿದೆ' ಎಂದು ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications