200ನೇ IPL ಪಂದ್ಯವನ್ನಾಡುತ್ತಿರುವ ಧೋನಿಗೆ, ಕುಚುಕು ಗೆಳೆಯನಿಂದ ಸಂದೇಶ

ಅಬುಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯ 37 ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅತ್ಯಂತ ವಿಶೇಷವಾಗಿದೆ. ಏಕೆಂದರೆ ಧೋನಿಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಐಪಿಎಲ್‌ನಲ್ಲಿ ವೈಯಕ್ತಿಕವಾಗಿ 200ನೇ ಪಂದ್ಯವಾಗಿದೆ.
ಹೌದು, ಇದುವರೆಗೂ ಯಾರೂ ಮಾಡದ ಸಾಧನೆ ಧೋನಿ ಹೆಸರಿಗೆ ಸೇರ್ಪಡೆಯಾಗಿದೆ. ನಾಯಕನಾಗಿ ಧೋನಿ ತನ್ನದೇ ಆದ ವಿಶೇಷ ದಾಖಲೆಯನ್ನು ಸಹ ಹೊಂದಿದ್ದರೆ. ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ನಾಯಕರ ಪಟ್ಟಿಯಲ್ಲಿ ಮಾಹಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಈಗ ಇದರ ಜೊತೆಗೆ 200 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಮಾಹಿಯ ಈ ವಿಶೇಷ ದಾಖಲೆಗೆ ಸಿಎಸ್‌ಕೆ ಸಹ ಆಟಗಾರ, ಸ್ನೇಹಿತ ಸುರೇಶ್ ರೈನಾ ಶುಭಾಶಯ ತಿಳಿಸಿದ್ದಾರೆ. ಸುರೈಶ್ ರೈನಾ ವೈಯಕ್ತಿಕ ಕಾರಣದಿಂದಾಗಿ ಐಪಿಎಲ್ 2020ನೇ ಆವೃತ್ತಿ ಆರಂಭಕ್ಕೂ ಮೊದಲೇ ಭಾರತಕ್ಕೆ ವಾಪಸ್ಸಾಗಿದ್ದರು.
''ಐಪಿಎಲ್‌ನಲ್ಲಿ ತನ್ನ 200 ನೇ ಪಂದ್ಯವನ್ನು ಆಡಿದ ಮೊದಲ ಆಟಗಾರ, ಶುಭಾಶಯಗಳು @msdhoni ಭಾಯ್.. ನಿಮಗೆ ಹೆಚ್ಚಿನ ಯಶಸ್ಸು ಸಿಗಲಿ, ನೀವು ಯಾವಾಗಲೂ ನಮಗೆ ಹೆಮ್ಮೆ ಪಡಿಸುತ್ತೀರಿ'' ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications