
2008ರ ಐಪಿಎಲ್
2008ರಲ್ಲಿ ಐಪಿಎಲ್ ಆರಂಭವಾದಾಗ ರಾಹುಲ್ ದ್ರಾವಿಡ್ ಆರ್‌ಸಿಬಿಯ ನಾಯಕರಾಗಿದ್ದರು. ಆ ಆವೃತ್ತಿಯಲ್ಲಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು ಕೂಡ ದ್ರಾವಿಡ್. 14 ಪಂದ್ಯಗಳಲ್ಲಿ 28.54ರ ಸರಾಸರಿಯಲ್ಲಿ ಅವರು 371 ರನ್ ಗಳಿಸಿದ್ದರು. ಇದರಲ್ಲಿಎರಡು ಅರ್ಧಶತಕಗಳಿದ್ದವು.

2009ರ ಐಪಿಎಲ್
ಭಾರತದಲ್ಲಿ ಚುನಾವಣೆಯಲ್ಲಿದ್ದ ಕಾರಣ 2009ರ ಐಪಿಎಲ್ ಆವೃತ್ತಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ಆಟಗಾರ ಜಾಕ್ವೆಸ್ ಕಾಲಿಸ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಆರ್‌ಸಿಬಿ ಪರ ಅವರು 15 ಇನ್ನಿಂಗ್ಸ್‌ಗಳಲ್ಲಿ 108.73ರ ಸ್ಟ್ರೈಕ್ ರೇಟ್‌ನಲ್ಲಿ 361 ರನ್ ಗಳಿಸಿದ್ದರು.
'ಕ್ರೀಡಾ ಸ್ಫೂರ್ತಿ' ಮರೆತ ಧೋನಿ ಫೋಟೊ ಹಾಕಿ ರಿಕಿ ಪಾಂಟಿಂಗ್ ಕಾಲೆಳೆದ ಐಸ್‌ಲ್ಯಾಂಡ್

2010ರ ಐಪಿಎಲ್
2010ರ ಐಪಿಎಲ್ ಆವೃತ್ತಿಯಲ್ಲಿ ಕೂಟ ಆರ್‌ಸಿಬಿ ಪರ ಜಾಕ್ವೆಸ್ ಕಾಲಿಸ್ ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಿಂದ 572 ರನ್ ಗಳಿಸಿದ್ದರು. ಇದರಲ್ಲಿ 67 ಬೌಂಡರಿ ಮತ್ತು 9 ಸಿಕ್ಸರ್‌ಗಳಿದ್ದವು.

2011ರ ಐಪಿಎಲ್
ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಅವರ ಸ್ಫೋಟಕ ಯುಗ ಆರಂಭವಾಗಿದ್ದು 2011ರ ಐಪಿಎಲ್‌ನಲ್ಲಿ. ಕೇವಲ 12 ಇನ್ನಿಂಗ್ಸ್‌ಗಳಲ್ಲಿ ಅವರು 608 ರನ್ ಬಾರಿಸುವ ಮೂಲಕ ಆರ್‌ಸಿಬಿ ಪರ ಅತ್ಯಧಿಕ ಸ್ಕೋರರ್ ಎನಿಸಿದ್ದರು.
ಭಾರತದ ಯುವ ವೇಗಿ ಕಾರ್ತಿಕ್ ತ್ಯಾಗಿ ಬಗ್ಗೆ ಬೆನ್ ಸ್ಟೋಕ್ಸ್ ಟ್ವೀಟ್

2012ರ ಐಪಿಎಲ್
2012ರ ಐಪಿಎಲ್ ಆವೃತ್ತಿಯಲ್ಲಿ ಕೂಡ ಆರ್‌ಸಿಬಿ ಪರ ಕ್ರಿಸ್ ಗೇಲ್ ಮಿಂಚಿದ್ದರು. ಅದ್ಭುತ ಫಾರ್ಮ್‌ನಲ್ಲಿದ್ದ ಅವರು 12 ಪಂದ್ಯಗಳಲ್ಲಿ 733 ರನ್‌ಗಳನ್ನು ಕಲೆಹಾಕಿದ್ದರು. ಇದರಲ್ಲಿ ಒಂದು ಶತಕ ಮತ್ತು ಏಳು ಅರ್ಧಶತಕಗಳಿದ್ದವು.

2013ರ ಐಪಿಎಲ್
ಅಮೋಘ ಪ್ರದರ್ಶನ ಮುಂದುವರಿಸಿದ್ದ ಕ್ರಿಸ್ ಗೇಲ್, 2013ರ ಆವೃತ್ತಿಯಲ್ಲಿ ಕೂಡ ರನ್ ಹೊಳೆ ಹರಿಸಿದ್ದರು. 16 ಇನ್ನಿಂಗ್ಸ್‌ಗಳಲ್ಲಿ 156.29ರ ಸ್ಟ್ರೈಕ್ ರೇಟ್‌ನಲ್ಲಿ ಅವರು 708 ರನ್ ಗಳಿಸಿ, ಸತತ ಎರಡು ಆವೃತ್ತಿಗಳಲ್ಲಿ 700ಕ್ಕೂ ಅಧಿಕ ರನ್ ಗಳಿಸಿದ ಸಾಧನೆ ಮಾಡಿದರು.

2014ರ ಐಪಿಎಲ್
ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಒಂಬತ್ತು ವರ್ಷಗಳಿಂದ ಆರ್‌ಸಿಬಿಯ ಭಾಗವಾಗಿದ್ದಾರೆ. ಅನೇಕ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ. 2014ರಲ್ಲಿ ಅವರು 13 ಇನ್ನಿಂಗ್ಸ್‌ಗಳಿಂದ 395 ರನ್ ಕಲೆಹಾಕುವ ಮೂಲಕ ಆರ್‌ಸಿಬಿ ಪರ ಅತ್ಯಧಿಕ ಸ್ಕೋರರ್ ಆಗಿದ್ದರು.

2015ರ ಐಪಿಎಲ್
ಸತತ ಎರಡನೆಯ ಬಾರಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಕಲೆ ಹಾಕಿದ್ದ ಎಬಿ ಡಿವಿಲಿಯರ್ಸ್ 2015ರ ಐಪಿಎಲ್‌ನಲ್ಲಿ ಕೂಡ ಮಿಂಚಿದ್ದರು. 14 ಇನ್ನಿಂಗ್ಸ್‌ಗಳಿಂದ 513 ರನ್ ಗಳಿಸಿದ್ದರು. ಇದರಲ್ಲಿ 60 ಬೌಂಡರಿ ಹಾಗೂ 22 ಸಿಕ್ಸರ್‌ಗಳಿದ್ದವು.

2016ರ ಐಪಿಎಲ್
ತಮ್ಮ ಫಾರ್ಮ್‌ನ ಉತ್ತುಂಗದಲ್ಲಿದ್ದ ವಿರಾಟ್ ಕೊಹ್ಲಿ 2016ರಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಬೌಲರ್‌ಗಳನ್ನು ಚೆಂಡಾಡಿದ್ದ ಅವರು 973 ರನ್‌ಗಳನ್ನು ಈ ಆವೃತ್ತಿಯಲ್ಲಿ ಕಲೆಹಾಕಿದ್ದರು. ಇದು ಈವರೆಗಿನ ಐಪಿಎಲ್‌ನ ಆವೃತ್ತಿಯೊಂದರಲ್ಲಿ ದಾಖಲಾದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಈ ಆವೃತ್ತಿಯಲ್ಲಿ ಅವರು ನಾಲ್ಕು ಶತಕ ಮತ್ತು ಏಳು ಅರ್ಧ ಶತಕ ದಾಖಲಿಸಿದ್ದರು.

2017ರ ಐಪಿಎಲ್
ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 2017ರ ಆವೃತ್ತಿಯಲ್ಲಿ ಸಹ ತಂಡದ ಪರ ಅತ್ಯಧಿಕ ಸ್ಕೋರರ್ ಎನಿಸಿದ್ದರು. ಆದರೆ ಹಿಂದಿನ ಆವೃತ್ತಿಯಲ್ಲಿ 973 ರನ್ ಗಳಿಸಿದ್ದ ಕೊಹ್ಲಿ, ಈ ಅವಧಿಯಲ್ಲಿ ಗಳಿಸಿದ್ದು 308 ರನ್‌ಗಳನ್ನು ಮಾತ್ರ. ಇದರಲ್ಲಿ ನಾಲ್ಕು ಅರ್ಧ ಶತಕಗಳಿದ್ದವು.

2018ರ ಐಪಿಎಲ್
ವಿರಾಟ್ ಕೊಹ್ಲಿ 2018ರ ಆವೃತ್ತಿಯಲ್ಲಿ ಕೂಟ ನಾಯಕನ ಆಟವಾಡಿದ್ದರು. 14 ಪಂದ್ಯಗಳಲ್ಲಿ 48.18ರ ಸರಾಸರಿಯಲ್ಲಿ 530 ರನ್ ಕಲೆಹಾಕಿದ್ದರು. ಇದರಲ್ಲಿ ನಾಲ್ಕು ಅರ್ಧಶತಗಳಿದ್ದವು. 52 ಬೌಂಡರಿ ಮತ್ತು 18 ಸಿಕ್ಸರ್‌ಗಳನ್ನು ಸಿಡಿಸಿದ್ದರು.

2019ರ ಐಪಿಎಲ್
ಆರ್‌ಸಿಬಿ ಪರ ಸತತ ನಾಲ್ಕನೆಯ ಬಾರಿ ಅತ್ಯಧಿಕ ರನ್ ಸ್ಕೋರರ್ ಆದ ವಿರಾಟ್ ಕೊಹ್ಲಿ, 2019ರಲ್ಲಿ 141.16ರ ಸ್ಟ್ರೈಕ್ ರೇಟ್‌ನಲ್ಲಿ 464 ರನ್ ಬಾರಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳು ಸೇರಿದ್ದವು.


Click it and Unblock the Notifications












