ಮಯಾಂಕ್- ರಾಹುಲ್‌ಗೆ ಹೊಸ ಹೆಸರು ನೀಡಿದ ಸೆಹ್ವಾಗ್

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಈಗ ಬ್ಯಾಟ್ ಹಿಡಿದು ಕ್ರೀಡಾಂಗಣಕ್ಕೆ ಇಳಿಯದಿದ್ದರೂ, ಕ್ರಿಕೆಟ್ ಪಂದ್ಯದ ಬಗ್ಗೆ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸುತ್ತಲೇ ಇರುತ್ತಾರೆ. ಪ್ರತಿ ಪಂದ್ಯದ ಬಗ್ಗೆ ಸೆಹ್ವಾಗ್ ಮಾಡುವ ವಿಶ್ಲೇಷಣೆ ವಿಭಿನ್ನ. ಅದರಲ್ಲಿ ಹಾಸ್ಯವೇ ಹೆಚ್ಚು. ಹಾಗೆಯೇ ಸೆಹ್ವಾಗ್ ತಮ್ಮ ವಿಮರ್ಶೆಗಳನ್ನು ಅಷ್ಟೇ ಕಟುವಾಗಿ ಮಾಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ದಿನ ಸೆಹ್ವಾಗ್‌ರಿಂದ ಹೊಗಳಿಕೆಗೆ ಒಳಗಾದ ವ್ಯಕ್ತಿ, ಆಟದಲ್ಲಿ ವಿಫಲವಾದರೆ ಅದೇ ರೀತಿ ಕಾಲೆಳೆಸಿಕೊಳ್ಳುತ್ತಾರೆ.
ಶಾರ್ಜಾದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಮೋಘ ಪ್ರದರ್ಶನ ನೀಡಿದ ರಾಹುಲ್ ತೆವಾಟಿಯಾ ಅವರನ್ನು ಸೆಹ್ವಾಗ್ ಮನಸಾರೆ ಹೊಗಳಿದ್ದಾರೆ. ಐಪಿಎಲ್ ಪಂದ್ಯಗಳ ಬಗ್ಗೆ ವಿಶ್ಲೇಷಣೆ ಮಾಡುವ 'ವೀರು ಕಿ ಬೈಠತ್' ಸರಣಿಯಲ್ಲಿ ಸೆಹ್ವಾಗ್, ಪಂದ್ಯದ ಒಟ್ಟಾರೆ ಪ್ರದರ್ಶನಗಳನ್ನು ಹಿಂದಿಯ ವಿವಿಧ ಸಿನಿಮಾಗಳಿಗೆ ಹೋಲಿಸಿದ್ದಾರೆ. ಮುಂದೆ ಓದಿ...

ತೆವಾಟಿಯಾ ಒಬ್ಬ ಹೀರೋ
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಶೆಲ್ಡನ್ ಕಾಟ್ರೆಲ್ ಅವರ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಸಿಡಿಸಿದ ರಾಹುಲ್ ತೆವಾಟಿಯಾ ಅವರನ್ನು ದಾಖಲೆಯ ಚೇಸ್ ಪಂದ್ಯದ 'ಹೀರೋ' ಎಂದು ಸೆಹ್ವಾಗ್ ಬಣ್ಣಿಸಿದ್ದಾರೆ. ಇದಕ್ಕೆ ಶಾಹಿದ್ ಕಪೂರ್ ನಟನೆಯ ಚಿತ್ರವನ್ನು ಹೋಲಿಸಿದ್ದಾರೆ. 'ಫಟಾ ಪೋಸ್ಟರ್ ನಿಕ್ಲಾ ಹೀರೋ-ರಾಹುಲ್ ತೆವಾಟಿಯಾ ಒಬ್ಬ ಹೀರೋ' ಎಂದು ಸೆಹ್ವಾಗ್ ಹೇಳಿದ್ದಾರೆ.
IPL 2020: ರಾಹುಲ್ ತೆವಾಟಿಯಾಗೆ ಬಡ್ತಿ ನೀಡಿದ್ದು ಏಕೆ? ಕಾರಣ ತಿಳಿಸಿದ ಸಂಜು ಸ್ಯಾಮ್ಸನ್

ತೆವಾಟಿಯಾ ಮೇಲೆ ದೇವರು
ಬ್ಯಾಟಿ ಬೀಸಿದರೂ ಅದಕ್ಕೆ ಚೆಂಡನ್ನು ತಗುಲಿಸಲು ವಿಫಲವಾಗುತ್ತಿದ್ದ ರಾಹುಲ್ ತೆವಾಟಿಯಾ, ಇದ್ದಕ್ಕಿಂದ್ದಂತೆ ಎಲ್ಲ ಚೆಂಡುಗಳನ್ನೂ ಬಾರಿಸತೊಡಗಿದ್ದರು. ತೆವಾಟಿಯಾ ಮೇಲೆ ದೇವರು ಬಂದಿತ್ತು ಎಂದು ಸೆಹ್ವಾಗ್ ಹೇಳಿದ್ದಾರೆ. ಎಂತಹ ಬಿಡುಗಡೆ. ಇದೇ ಕ್ರಿಕೆಟ್ ಮತ್ತು ಇದೇ ಜೀವನ, ನಿಮಿಷಗಳಲ್ಲಿಯೇ ಎಲ್ಲವೂ ಬದಲಾಗುತ್ತದೆ ಎಂದು ಸೆಹ್ವಾಗ್ ತಮಾಷೆಯ ಜತೆಗೆ ತತ್ವಜ್ಞಾನಿಯಂತೆಯೇ ಮಾತನಾಡಿದ್ದಾರೆ.

ರಾಮ ಲಕ್ಷ್ಮಣರು
ರಾಜಸ್ಥಾನ್ ರಾಯಲ್ಸ್ ದಾಖಲೆಯ ಬ್ಯಾಟಿಂಗ್ ಪ್ರದರ್ಶಿಸುವುದಕ್ಕೂ ಮುನ್ನ ಕನ್ನಡಿಗರಾದ ಮಯಾಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್ ಜೋಡಿ, ಆರ್ ಆರ್ ಬೌಲರ್‌ಗಳ ಬೆಂಡೆತ್ತಿದ್ದರು. ಮೊದಲ ವಿಕೆಟ್‌ಗೆ 183 ರನ್‌ಗಳನ್ನು ಪೇರಿಸಿದ್ದರು. ಇವರಿಬ್ಬರನ್ನೂ ಅನಿಲ್ ಕಪೂರ್-ಜಾಕಿ ಶ್ರಾಫ್ ನಟನೆಯ 'ರಾಮ ಲಕ್ಷ್ಮಣ' ಹಿಂದಿ ಸಿನಿಮಾಕ್ಕೆ ಸೆಹ್ವಾಗ್ ಹೋಲಿಕೆ ಮಾಡಿದ್ದಾರೆ.
ಭಾರತೀಯರ ಪರ ಕನ್ನಡಿಗ ಮಯಾಂಕ್ ಅಗರ್ವಾಲ್ ವಿಶೇಷ ದಾಖಲೆ

ಚೆನ್ನೈ ತಂಡಕ್ಕೆ ಗ್ಲೂಕೋಸ್ ಬೇಕು
ದೆಹಲಿ ಕ್ಯಾಪಿಟಲ್ಸ್ ತಂಡದ ಎದುರು ಹೀನಾಯ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಾಲೆಳೆದಿದ್ದ ವೀರೇಂದ್ರ ಸೆಹ್ವಾಗ್, 'ಚೆನ್ನೈ ಬ್ಯಾಟ್ಸ್‌ಮನ್‌ಗಳು ಸರಿಯಾಗಿ ಆಡುತ್ತಿಲ್ಲ. ಬಹುಶಃ ಮುಂದಿನ ಮ್ಯಾಚ್‌ನಲ್ಲಿ ಬ್ಯಾಟಿಂಗ್ ಬರುವಾಗ ಅವರಿಗೆ ಗ್ಲೂಕೋಸ್ ಬೇಕಾಗಬಹುದು' ಎಂದು ಸೆಹ್ವಾಗ್ ವ್ಯಂಗ್ಯವಾಡಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಧೋನಿ ಮನಸ್ಸು ಮಾಡುವ ಮುನ್ನ ಭಾರತಕ್ಕೆ ಬುಲೆಟ್ ಟ್ರೈನ್‌ಗಳು ಸಿಗಬಹುದು ಎಂದಿದ್ದ ಅವರು, ಇದೊಂದು ಟೆಸ್ಟ್ ಮ್ಯಾಚ್ ನೋಡಿದಂತೆ ಆಗಿತ್ತು ಎಂದು ಟೀಕಿಸಿದ್ದರು.
ಒಂದೇ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿದ ತೆವಾಟಿಯಗೆ ಥ್ಯಾಂಕ್ಸ್ ಹೇಳಿದ ಯುವಿ..!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications