ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2020: ರಾಹುಲ್ ತೆವಾಟಿಯಾಗೆ ಬಡ್ತಿ ನೀಡಿದ್ದು ಏಕೆ? ಕಾರಣ ತಿಳಿಸಿದ ಸಂಜು ಸ್ಯಾಮ್ಸನ್

IPL 2020: Sanju Samson Reveals Reason Behind Promoting Rahul Tewatia

ಯಾರೂ ಊಹಿಸಿರದ ರೀತಿಯಲ್ಲಿ ಚಮತ್ಕಾರ ಪ್ರದರ್ಶಿಸಿದ ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಒಂಜಾಬ್ ವಿರುದ್ಧ ರೋಚಕ ಕದನದಲ್ಲಿ ಗೆದ್ದು ಅಚ್ಚರಿ ಮೂಡಿಸಿದೆ. ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಸಂಜು ಸ್ಯಾಮ್ಸನ್ ಮತ್ತು ತಂಡದ ನಾಯಕ ಸ್ಟೀವ್ ಸ್ಮಿತ್ ಅವರ ಅಬ್ಬರದ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳಿಗೆ ಬಹಳ ವಿಶೇಷದ ಸಂಗತಿ ಎಂದೇನೂ ಎನಿಸಲಿಲ್ಲ. ಆದರೆ ಇಡೀ ಕ್ರಿಕೆಟ್ ಜಗತ್ತನ್ನು ತನ್ನೆಡೆಗೆ ಸೆಳೆದಿದ್ದ ರಾಹುಲ್ ತೆವಾಟಿಯಾ ಎಂಬ ಹರಿಯಾಣದ ಯುವ ಆಟಗಾರ.

224 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ರಾಜಸ್ಥಾನ ರಾಯಲ್ಸ್ ತಂಡ 9 ಓವರ್‌ಗೆ 100 ರನ್ ಗಳಿಸಿದ್ದಾಗ ನಾಯಕ ಸ್ಟೀವ್ ಸ್ಮಿತ್ ವಿಕೆಟ್ ಕಳೆದುಕೊಂಡಿತ್ತು. ನಾಲ್ಕನೆಯ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಬರಲಿದ್ದಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸ್ಟೀವ್ ಸ್ಮಿತ್ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದರು. ಸ್ಮಿತ್ ಲೆಕ್ಕಾಚಾರ ಒಂದು ಹಂತದಲ್ಲಿ ತಲೆಕೆಳಗಾಗಿದ್ದು ನಿಜ. ಮುಂದೆ ಓದಿ...

ಕೈಕೊಟ್ಟಿದ್ದ ತೆವಾಟಿಯಾ

ಕೈಕೊಟ್ಟಿದ್ದ ತೆವಾಟಿಯಾ

ಅನುಭವಿ ಆಟಗಾರರಾದ ಉತ್ತಪ್ಪ, ಜೋಫ್ರಾ ಆರ್ಚರ್ ಅವರಂತಹ ಬ್ಯಾಟ್ಸ್‌ಮನ್‌ಗಳಿರುವಾಗ ಕ್ರಿಕೆಟ್ ಜಗತ್ತಿಗೆ ಅಷ್ಟೇನೂ ಪರಿಚಯವಿಲ್ಲದ ರಾಹುಲ್ ತೆವಾಟಿಯಾ ಅವರಿಗೆ ಬಡ್ತಿ ನೀಡಿ ಮೇಲಿನ ಕ್ರಮಾಂಕದಲ್ಲಿ ಕಳಿಸಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಒಂದೆಡೆ ಸಂಜು ಸ್ಯಾಮ್ಸನ್‌ಗೆ ಸಾಥ್ ನೀಡಲಿದ್ದಾರೆ ಎಂದು ಭಾವಿಸಿದ್ದ ತೆವಾಟಿಯಾ, ಸಂಜು ಮೇಲಿನ ಒತ್ತಡ ಹೆಚ್ಚಿಸತೊಡಗಿದ್ದರು. ಆರಂಭದಲ್ಲಿ 19 ಎಸೆತಗಳಲ್ಲಿ 8 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನಿಂದ ದೂರ ತಳ್ಳಲಾರಂಭಿಸಿದ್ದರು.

ಒಂದೇ ಓವರ್: ವಿಲನ್ ಆಗಿದ್ದ ತೇವಾಟಿಯಾ ಹೀರೋ ಆಗ್ಬಿಟ್ಟ!

ಲೆಗ್ ಸ್ಪಿನ್ನರ್ ಸವಾಲು

ಲೆಗ್ ಸ್ಪಿನ್ನರ್ ಸವಾಲು

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಇರುವ ಪ್ರಮುಖ ಸ್ಪಿನ್ನರ್‌ಗಳಾದ ಮುರುಗನ್ ಅಶ್ವಿನ್ ಹಾಗೂ ರವಿ ಬಿಶ್ನೋಯಿ ಇಬ್ಬರೂ ಲೆಗ್ ಸ್ಪಿನ್ನರ್‌ಗಳು. ಕ್ರಿಕೆಟ್‌ನಲ್ಲಿ ಹೊರ ತಿರುವು ಪಡೆಯುವ ಎಸೆತಗಳಿಗಿಂತಲೂ ಒಳನುಗ್ಗುವ ಚೆಂಡುಗಳನ್ನು ಎದುರಿಸುವುದು ಸುಲಭ. ಇಬ್ಬರೂ ಲೆಗ್‌ಸ್ಪಿನ್ನರ್‌ಗಳಾಗಿರುವುದರಿಂದ ರಾಜಸ್ಥಾನ ತಂಡಕ್ಕೆ ಅವರನ್ನು ಎದುರಿಸುವುದು ಸವಾಲಿನ ಸಂಗತಿಯಾಗಿತ್ತು. ಏಕೆಂದರೆ ಬಲಗೈ ದಾಂಡಿಗರೇ ಹೆಚ್ಚಿರುವುದರಿಂದ ಲೆಗ್‌ಸ್ಪಿನ್ನರ್‌ಗಳ ಎದುರು ಅಬ್ಬರಿಸುವುದು ಸುಲಭವಾಗಿರಲಿಲ್ಲ. ಇಡೀ ತಂಡದಲ್ಲಿ ಇರುವ ಏಕೈಕ ಎಡಗೈ ಬ್ಯಾಟ್ಸ್‌ಮನ್ ರಾಹುಲ್ ತೆವಾಟಿಯಾ. ಸ್ವತಃ ಲೆಗ್ ಸ್ಪಿನ್ನರ್ ಆಗಿರುವ ತೆವಾಟಿಯಾ ಮೇಲೆ ತಂಡ ಭರವಸೆ ಹೊಂದಿತ್ತು.

ಹುಸಿಗೊಳಿಸಿದ್ದ ತೆವಾಟಿಯಾ

ಹುಸಿಗೊಳಿಸಿದ್ದ ತೆವಾಟಿಯಾ

ರಾಹುಲ್ ತೆವಾಟಿಯಾ ಅವರಿಗೆ ಬಡ್ತಿ ನೀಡಿ ಮೇಲಿನ ಕ್ರಮಾಂಕದಲ್ಲಿ ಆಡಿಸಿದ್ದ ಸ್ಮಿತ್ ತಂತ್ರದ ಹಿಂದಿನ ಉದ್ದೇಶ ಇದೇ ಆಗಿತ್ತು. ನೆಟ್ಸ್‌ನಲ್ಲಿ ಸ್ಪಿನ್ನರ್‌ಗಳನ್ನು ತೆವಾಟಿಯಾ ಲೀಲಾಜಾಲವಾಗಿ ಎದುರಿಸುತ್ತಿದ್ದರು. ಇದನ್ನು ಕಂಡಿದ್ದ ಸ್ಮಿತ್, ಇಬ್ಬರು ಲೆಗ್‌ಸ್ಪಿನ್ನರ್‌ಗಳನ್ನು ತೆವಾಟಿಯಾ ಚೆನ್ನಾಗಿ ಚಚ್ಚಬಲ್ಲರು ಎಂಬ ವಿಶ್ವಾಸ ಹೊಂದಿದ್ದರು. ಆದರೆ ಸ್ಮಿತ್ ನಿರೀಕ್ಷೆಯನ್ನು ತೆವಾಟಿಯಾ ಹುಸಿಗೊಳಿಸಿದ್ದರು. ಬಿಶ್ನೋಯಿ ಎಸೆತಗಳನ್ನು ಬ್ಯಾಟ್‌ಗೆ ತಾಗಿಸಲೂ ಹೆಣಗಾಡಿದ್ದರು.

ಒಂದೇ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿದ ತೆವಾಟಿಯಗೆ ಥ್ಯಾಂಕ್ಸ್‌ ಹೇಳಿದ ಯುವಿ..!

ಬಡ್ತಿ ನೀಡಲು ಕಾರಣ

ಬಡ್ತಿ ನೀಡಲು ಕಾರಣ

'ನಾವು ಆತನನ್ನು ಲೆಗ್ ಸ್ಪಿನ್ನರ್ ಆಗಿ ತಂಡಕ್ಕೆ ತೆಗೆದುಕೊಂಡಿದ್ದೆವು. ಆದರೆ ಅಭ್ಯಾಸದ ವೇಳೆ ಆತ ಅದ್ಭುತವಾಗಿ ಬ್ಯಾಟಿಂಗ್ ಕೌಶಲ ಪ್ರದರ್ಶಿಸಿದ್ದ. ಒಮ್ಮೆ ಆರು ಚೆಂಡುಗಳಲ್ಲಿ ಯಾರು ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಬಲ್ಲರು ಎಂಬ ಪೈಪೋಟಿ ನಡೆಸಿದ್ದವು. ತೆವಾಟಿಯಾ ನಾಲ್ಕೋ ಐದೋ ಸಿಕ್ಸರ್‌ಗಳನ್ನು ಬಾರಿಸಿದ್ದ. ಹೀಗಾಗಿ ಆತನನ್ನು ಮೇಲಿನ ಕ್ರಮಾಂಕದಲ್ಲಿ ಕಳಿಸಲು ತಂಡದ ಮ್ಯಾನೇಜ್ಮೆಂಟ್ ನಿರ್ಧರಿಸಿತ್ತು' ಎಂದು ರಾಹುಲ್ ತೆವಾಟಿಯಾಗೆ ಬಡ್ತಿ ನೀಡಿದ ಹಿಂದಿನ ಉದ್ದೇಶವನ್ನು ಸಂಜು ಸ್ಯಾಮ್ಸನ್ ತೆರೆದಿಟ್ಟಿದ್ದಾರೆ.

ಸೆಲ್ಯೂಟ್ ಸ್ಟಾರ್‌ಗೆ ಚಚ್ಚಿದ ತೆವಾಟಿಯಾ

ಸೆಲ್ಯೂಟ್ ಸ್ಟಾರ್‌ಗೆ ಚಚ್ಚಿದ ತೆವಾಟಿಯಾ

ಸ್ಪಿನ್ನರ್‌ಗಳಿಗೆ ಚೆನ್ನಾಗಿ ಆಡಬಲ್ಲರು ಎಂದು ಭಾವಿಸಿದ್ದ ತೆವಾಟಿಯಾ ವೇಗಿಗಳ ಮೇಲೆ ಸವಾರಿ ಮಾಡಿದರು. ವಿಲನ್ ಆಗಿದ್ದ ವ್ಯಕ್ತಿ, ಅದುವರೆಗೂ ಹೀರೋ ಆಗಿ ಮೆರೆಯುತ್ತಿದ್ದ ಸಂಜು ಸ್ಯಾಮ್ಸನ್ ಔಟಾಗುತ್ತಿದ್ದಂತೆಯೇ ಹೀರೋ ಪಟ್ಟವನ್ನು ಕಸಿದುಕೊಂಡರು. ಜಗತ್ತಿನ ಈಗಿನ ಉತ್ತಮ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ 'ಸೆಲ್ಯೂಟ್ ಸ್ಟಾರ್' ಶೆಲ್ಡನ್ ಕಾಟ್ರೆಲ್ ತನ್ನ ಮುಂದೆ ಏನೂ ಅಲ್ಲ ಎಂಬಂತೆ ಸಿಕ್ಸರ್‌ಗಳನ್ನು ಸಿಡಿಸಿ ಪಂದ್ಯ ಗೆಲ್ಲಿಸಿದರು.

ಸುಲಭವಾಗಿ ಸಿಕ್ಸರ್ ಸಿಡಿಸುವ ಸಂಜು ಸ್ಯಾಮ್ಸನ್ ತಾಕತ್ತಿನ ಗುಟ್ಟು..!

ತೆವಾಟಿಯಾ ಮೇಲೆ ನಂಬಿಕೆ ಇತ್ತು

ತೆವಾಟಿಯಾ ಮೇಲೆ ನಂಬಿಕೆ ಇತ್ತು

'ನಾವು ನೆಟ್ಸ್‌ನಲ್ಲಿ ನೋಡುತ್ತಿದ್ದ ತೆವಾಟಿsಯಾರ ಆಟವನ್ನೇ ಕಾಟ್ರೆಲ್ ಓವರ್‌ನಲ್ಲಿ ಕಂಡೆವು. ಆತ ಒಂದು ಸರಿಯಾದ ಹೊಡೆತ ಬಾರಿಸಿದರೆ ಸಾಕು, ರನ್ ಪ್ರವಾಹದ ಗೇಟುಗಳನ್ನು ತೆರೆದಂತೆ ಎಂದು ನಾನು ಒಬ್ಬರಿಗೆ ಹೇಳಿದ್ದೆ. ಆತ ತನ್ನ ಹೃದಯ ಪ್ರದರ್ಶಿಸಿದ. ಟೈಮ್ ಔಟ್ ಸಮಯದಲ್ಲಿ ನನಗೆ ಇನ್ನೂ ನಂಬಿಕೆ ಇದೆ ಎಂದು ನನಗೆ ಹೇಳಿದ್ದ' ಎಂಬುದಾಗಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

Story first published: Monday, September 28, 2020, 15:52 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X