'ಟಿ20 ಲೀಗ್‌ಗಳಲ್ಲಿ ಭಾರತ-ಪಾಕಿಸ್ತಾನ ಆಟಗಾರರ ನೋಡ ಬಯಸುತ್ತೇನೆ'

ಇಸ್ಲಮಾಬಾದ್: ಕೊರೊನಾ ಬಳಿಕ ಕ್ರೀಡಾ ಚಟುವಟಿಕೆಗಳು ಮತ್ತೆ ಶುರುವಾಗತೊಡಗಿದೆ. ಇಂಗ್ಲೆಂಡ್-ಪಾಕಿಸ್ತಾನ ಪ್ರವಾಸ ಸರಣಿ, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆದಿದೆ. ದ್ವೀಪರಾಷ್ಟ್ರ ಶ್ರೀಲಂಕಾದಲ್ಲೂ ಲಂಕಾ ಪ್ರೀಮಿಯರ್ ಲೀಗ್‌ಗೆ ಸಿದ್ಧತೆ ನಡೆಯುತ್ತಿದೆ.
ಎಲ್‌ಪಿಎಲ್‌ನ ಫ್ರಾಂಚೈಸಿ ಗ್ಯಾಲೆ ಗ್ಲಾಡಿಯೇಟರ್ಸ್‌ನಲ್ಲಿ ಪಾಕಿಸ್ತಾನದ ದಂತಕತೆ ವಾಸಿಮ್ ಅಕ್ರಮ್ ಕೋಚಿಂಗ್ ಸಿಬ್ಬಂದಿ ಬಳಗದಲ್ಲಿದ್ದಾರೆ. 'ಸುಲ್ತಾನ್ ಆಫ್ ಸ್ವಿಂಗ್' ಖ್ಯಾತಿಯ ಅಕ್ರಮ್ ಅನೇಕ ಲೀಗ್‌ಗಳನ್ನು ಕಂಡವರು. ಲಂಕಾ ಪ್ರೀಮಿಯರ್ ಲೀಗ್‌ನಲ್ಲೂ ಪಾಲ್ಗೊಳ್ಳಲು ಅಕ್ರಮ್ ಉತ್ಸುಕರಾಗಿದ್ದಾರೆ.
ಲಂಕಾ ಪ್ರೀಮಿಯರ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್‌ಗಳ ಬಗ್ಗೆ ಮಾತನಾಡಿರುವ ಅಕ್ರಮ್, ವಿರಾಟ್ ಕೊಹ್ಲಿ, ಬಾಬರ್ ಅಝಾಮ್ ಅಂಥ ಪ್ರತಿಭಾನ್ವಿತ ಆಟಗಾರರು ಪಾಕ್-ಭಾರತ ತಂಡಗಳಲ್ಲಿ ಇರುವುದರಿಂದ ಎರಡೂ ತಂಡಗಳ ಆಟಗಾರರು ಲೀಗ್ ಟೂರ್ನಿಗಳಲ್ಲಿ ಆಡೋದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.
'ರಾಜಕೀಯಕ್ಕೆ ಕ್ರೀಡೆ ಬಲಿಪಶುವಾಗಬಾರದು ಎಂದು ನಾನು ನಂಬುತ್ತೇನೆ. ವಿಶ್ವದಲ್ಲಿ ಐಪಿಎಲ್ ಹೆಚ್ಚು ಜನಪ್ರಿಯ ಲೀಗ್. ಆ ಲೀಗ್‌ನಲ್ಲಿ ಪಾಕ್‌ನ ಯುವ ಆಟಗಾರರು ಆಡುವಂತಾಗಬೇಕು. ಭಾರತೀಯ ಆಟಗಾರರು ಪಾಕಿಸ್ತಾನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವಂತಾಗಬೇಕು. ಇದನ್ನು ನಾನು ಬಯಸುತ್ತೇನೆ,' ಎಂದು ಎಎನ್‌ಎ ಜೊತೆ ಮಾತನಾಡಿದ ಅಕ್ರಮ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications