For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಮುಂಬೈ vs ಚೆನ್ನೈ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಊಹಿಸಿದ ಆಕಾಶ್ ಚೋಪ್ರ

IPL 2021: Aakash Chopra predicts Mumbai Indians will win 1st match of UAE leg against CSK

ಐಪಿಎಲ್ 14ನೇ ಆವೃತ್ತಿಯಲ್ಲಿ ಎರಡನೇ ಚರಣದ ಪಂದ್ಯಗಳು ಇಂದಿನಿಂದ ಆರಂಭವಾಗುತ್ತಿದೆ. ಐಪಿಎಲ್ ಇತಿಹಾಸದ ಎರಡು ಯಶಸ್ವೀ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗುವ ಮೂಲಕ ಕದನದ ರೋಚಕತೆಯನ್ನು ಹೆಚ್ಚಿಸಲಿದೆ. 2020ರ ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಈ ಬಾರಿಯ ಟೂರ್ನಿಯ ಮೊದಲಾರ್ಧದಲ್ಲಿ ಅಮೋಘ ಪ್ರದರ್ಶನ ನೀಡಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಕದನದಲ್ಲಿ ಯಾರು ಗೆಲುವು ಸಾಧಿಸಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಲಿ ಹಾಲಿ ಕ್ರಿಕೆಟ್ ಕಾಮೆಂಟೇಟರ್ ಆಕಾಶ್ ಚೋಪ್ರ ಈ ಮುಖಾಮುಖಿಯಲ್ಲಿ ಯಾವ ತಂಡ ಪಂದ್ಯವನ್ನು ಗೆಲ್ಲಲಿದೆ ಎಂದು ಊಹಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಆಕಾಶ್ ಚೋಪ್ರ ಈ ಪಂದ್ಯದ ಫಲಿತಾಂಶದ ಬಗ್ಗೆ ಹೇಳಿಕೊಂಡಿದ್ದಾರೆ. ಅಂದ ಹಾಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಈ ಪಂದ್ಯದಲ್ಲಿ ಗೆಲ್ಲುವ ತಂಡ ಎಂದು ಹೆಸರಿಸಿದ್ದು ಮುಂಬೈ ಇಂಡಿಯನ್ಸ್ ತಂಡವನ್ನು. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಚೆನ್ನೈ ವಿರುದ್ಧ ಗೆಲುವು ಸಾಧಿಸಲಿದೆ ಎಂದಿದ್ದಾರೆ ಚೋಪ್ರ.

ಇನ್ನು ಇದೇ ಸಂದರ್ಭದಲ್ಲಿ ಇಂದಿನ ಪಂದ್ಯದಲ್ಲಿನಿರ್ಣಾಯಕ ಪಾತ್ರವಹಿಸುವ ಇಬ್ಬರು ಆಟಗಾರರನ್ನು ಕೂಡ ಚೋಪ್ರ ಹೆಸರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಹಾಗೂ ಮೊಯೀನ್ ಅಲಿ ಈ ಪಂದ್ಯದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂದು ಚೋಪ್ರ ಹೇಳಿದ್ದಾರೆ. ಇನ್ನು ದುಬೈನಲ್ಲಿ ರಿಸ್ಟ್ ಸ್ಪಿನ್ನರ್ಸ್‌ಗಿಂತ ಇಂಗರ್ ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಲಿದ್ದಾರೆ ಎಂದು ಕೂಡ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.

"ದುಬೈನಲ್ಲಿ ರಿಸ್ಟ್ ಸ್ಪಿನ್ನರ್‌ಗಳಿಗಿಂತ ಫಿಂಗರ್ ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಲಿದ್ದಾರೆ. ತಾಹಿರ್ ಮತ್ತು ಚಾಹರ್ ಆಡುವುದನ್ನು ನೀವು ಕಾಣಬಹುದು ಹಾಗೂ ರಾಹುಲ್ ಚಾಹರ್ ಖಂಡಿತಾ ಈ ಪಂದ್ಯ ಆಡಲಿದ್ದಾರೆ. ಆದರೆ ಈ ದೊಡ್ಡ ಅಂಗಳದಲ್ಲಿ ಮೊಯೀನ್ ಅಲಿ ಹಾಗೂ ಜಡ್ಡುಗೆ ಹೆಚ್ಚಿನ ಯಶಸ್ಸು ದೊರೆಯಲಿದೆ. ಅವರು ಹೆಚ್ಚಿನ ವಿಕೆಟ್ ಪಡೆಯಲಿದ್ದಾರೆ ಎಂದಿದ್ದಾರೆ ಆಕಾಶ್ ಚೋಪ್ರ.

ಇನ್ನು ಮೊದಲ ಹತ್ತು ಎಸೆತಗಳಲ್ಲಿ ಮೊದಲ ಬೌಂಡರಿ ಸಿಡಿಯಬಹುದು ಎಂದು ಭವಿಷ್ಯ ನುಡಿದ ಚೋಪ್ರ ಮೊದಲ ವಿಕೆಟ್ ಆರಂಭದ ನಾಲ್ಕು ಓವರ್‌ಗೆ ಮುನ್ನವೇ ಉರುಳಲಿದೆ ಎಂದಿದ್ದಾರೆ. ಈ ಅವಧಿಯಲ್ಲಿ ಬ್ಯಾಟಿಂಗ್ ನಡೆಸುವ ತಂಡ ಎರಡು ವಿಕೆಟ್‌ಗಳನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ ಎಂದಿದ್ದಾರೆ. ಇನ್ನು ಪಿಚ್ ಹೆಚ್ಚು ತಿರುವು ಪಡೆಯುವ ಕಾರಣದಿಂದಾಗಿ ಎಡ್ಜ್ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬ ಎಚ್ಚರಿಕೆಯನ್ನು ಕೂಡ ಆಕಾಶ್ ಚೋಪ್ರ ನೀಡಿದ್ದಾರೆ.

ಐಪಿಎಲ್ 2021: ಚೆನ್ನೈ vs ಮುಂಬೈ ಮುಖಾಮುಖಿಯಲ್ಲಿ ಯಾವುದು ಬಲಿಷ್ಠ ತಂಡ, ಯಾರಿಗೆ ಹೆಚ್ಚು ಸೋಲು?
ಸಂಭಾವ್ಯ ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ಫಾಫ್ ಡು ಪ್ಲೆಸಿಸ್ / ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ವಾಡ್, ಸುರೇಶ್ ರೈನಾ, ಮೊಯೀನ್ ಅಲಿ, ಅಂಬಾಟಿ ರಾಯುಡು, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್‌), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಇಮ್ರಾನ್ ತಾಹಿರ್

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಾಹರ್, ಮಾರ್ಕೊ ಜಾನ್ಸನ್/ಜಯಂತ್ ಯಾದವ್

Story first published: Sunday, September 19, 2021, 15:18 [IST]
Other articles published on Sep 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+