Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ರಾಜಸ್ಥಾನ್ vs ಚೆನ್ನೈ, ಆಗಲಿರುವ ವಿಶೇಷ ದಾಖಲೆಗಳಿವು!

IPL 2021: Rajasthan Royals vs Chennai Super Kings Stats and Records Preview

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 2) ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 47ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇ ಆಫ್ಸ್‌ಗೆ ಪ್ರವೇಶಿಸಿರುವುದರಿಂದ ರಾಜಸ್ಥಾನ್‌ಗೆ ಇಂದಿನ ಪಂದ್ಯದ ಗೆಲುವು ಪ್ರಮುಖವೆನಿಸಿದೆ.

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಈ ಸೀಸನ್‌ನಲ್ಲಿ ಮತ್ತೆ ಉತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡಿತ್ತು. ಈ ಬಾರಿ ಆಡಿರುವ 11 ಪಂದ್ಯಗಳಲ್ಲಿ 9 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ 11ರಲ್ಲಿ 4 ಪಂದ್ಯಗಳನ್ನು ಗೆದ್ದಿದೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ಅನೇಕ ದಾಖಲೆಗಳು ಆಗಲಿವೆ. ಆ ದಾಖಲೆಗಳ ಪಟ್ಟಿ ಕೆಳಗಿವೆ..

ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ಆಗಲಿರುವ ದಾಖಲೆಗಳ ಪಟ್ಟಿ
* ಚೆನ್ನೈ ಸೂಪರ್ ಕಿಂಗ್ಸ್‌ನ ಡ್ವೇನ್ ಬ್ರಾವೋ ಇನ್ನು 2 ವಿಕೆಟ್‌ಗಳನ್ನು ಪಡೆದರೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ದಾಖಲೆ ಪಟ್ಟಿಯಲ್ಲಿ ಎರಡನೇ ಅತ್ಯಧಿಕ ವಿಕೆಟ್ ದಾಖಲೆ ಬರೆಯಲಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಸದ್ಯ ಅಮಿತ್ ಮಿಶ್ರಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಬ್ರಾವೋ 164 ವಿಕೆಟ್‌ಗಳು, ಅಮಿತ್ ಮಿಶ್ರಾ 166, ಲಸಿತ್ ಮಾಲಿಂಗ 170 ವಿಕೆಟ್‌ಗಳು.
* ಒಟ್ಟಾರೆ ಟಿ 20 ಕ್ರಿಕೆಟ್ ನಲ್ಲಿ 550 ವಿಕೆಟ್ ಪಡೆದ ಮೊದಲ ಬೌಲರ್ ಆಗಲು ಸಿಎಸ್‌ಕೆ ಆಲ್ ರೌಂಡರ್ ಡ್ವೇನ್ ಬ್ರಾವೋಗೆ ಎರಡು ವಿಕೆಟ್ ಅಗತ್ಯವಿದೆ.
* ಸಂಜು ಸ್ಯಾಮ್ಸನ್ ಐಪಿಎಲ್ 2021ರಲ್ಲಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಲು 38 ರನ್ ಗಳ ಅಗತ್ಯವಿದೆ. ಸಂಜು ಸ್ಯಾಮ್ಸನ್ ಈಗ 452 ರನ್ ಗಳಿಸಿದ್ದಾರೆ.
* ಅಂಬಾಟಿ ರಾಯುಡು ಒಟ್ಟಾರೆ ಟಿ 20 ಕ್ರಿಕೆಟ್ ನಲ್ಲಿ 200 ಸಿಕ್ಸರ್ ಪೂರೈಸಲು 3 ಸಿಕ್ಸರ್ ಗಳ ಅಗತ್ಯವಿದೆ.
* ಸ್ಯಾಮ್ಸನ್ vs ದೀಪಕ್ ಚಹರ್: ಚೆನ್ನೈ ಸೂಪರ್ ಕಿಂಗ್ಸ್‌ನ ದೀಪಕ್ ಚಹಾರ್ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್‌ನ ಸಂಜು ಸ್ಯಾಮ್ಸನ್ ಅವರನ್ನು ಮೂರು ಬಾರಿ ಔಟ್ ಮಾಡಿದ್ದಾರೆ.
* ರಾಜಸ್ಥಾನ್ ರಾಯಲ್ಸ್‌ನ ಮುಸ್ತಾಫಿಜುರ್ ರೆಹಮಾನ್ 2021 ರಲ್ಲಿ 50 ಟಿ20 ವಿಕೆಟ್ ತೆಗೆದುಕೊಳ್ಳಲು 2 ವಿಕೆಟ್ ಅಗತ್ಯವಿದೆ. ರಶೀದ್ ಖಾನ್ ಇದುವರೆಗೆ 2021 ರಲ್ಲಿ 56 ವಿಕೆಟ್ ಪಡೆದಿದ್ದಾರೆ.
* ರಾಜಸ್ಥಾನ್ ರಾಯಲ್ಸ್‌ನ ಶ್ರೇಯಸ್ ಗೋಪಾಲ್ ಐಪಿಎಲ್ ನಲ್ಲಿ 50 ವಿಕೆಟ್ ಪೂರೈಸಲು 2 ವಿಕೆಟ್ ಅಗತ್ಯವಿದೆ.
* ಪಂಜಾಬ್‌ನ ಬ್ಯಾಟ್ಸ್‌ಮನ್‌ ಡೇವಿಡ್ ಮಿಲ್ಲರ್‌ಗೆ ಐಪಿಎಲ್‌ನಲ್ಲಿ 2000 ರನ್ ಪೂರೈಸಲು 41 ರನ್ ಅಗತ್ಯವಿದೆ.

Story first published: Saturday, October 2, 2021, 17:11 [IST]
Other articles published on Oct 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+