Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಚೆನ್ನೈ ಸೂಪರ್ ಕಿಂಗ್ಸ್‌ ಸೇರಿದ ರಾಬಿನ್ ಉತ್ತಪ್ಪ

IPL 2021: Robin Uthappa joined Chennai Super Kings

ಚೆನ್ನೈ: 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ಗೆ ಸಿದ್ಧತೆ ನಡೆಸಿಕೊಳ್ಳುತ್ತಿರುವ ಫ್ರಾಂಚೈಸಿಗಳು ತಂಡದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿವೆ. ಐಪಿಎಲ್ ಮೂರು ಬಾರಿಯ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ ಆಟಗಾರನನ್ನು ಬದಲಿಸಿಕೊಂಡಿದೆ.

ಹಿಂದಿನ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. ಆರ್‌ಆರ್‌ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ರಾಬಿನ್ ಹೆಸರೂ ಇತ್ತು. ಆದರೆ ಆರ್‌ಆರ್ ಉತ್ತಪ್ಪ ಅವರನ್ನು ಸಿಎಸ್‌ಕೆಗೆ ಕ್ಯಾಶ್‌ ಡೀಲ್ ಮೂಲಕ ವ್ಯಾಪಾರ ನಡೆಸಿದೆ.

ಜನವರಿ 20ರ ಬುಧವಾರ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸಿದಾಗ ಸಿಎಸ್‌ಕೆಯ ರಿಲೀಸ್ಡ್ ಪ್ಲೇಯರ್ಸ್ ಲಿಸ್ಟ್‌ನಲ್ಲಿ ಪೀಯೂಷ್ ಚಾವ್ಲಾ, ಕೇದಾರ್ ಜಾಧವ್, ಹರ್ಭಜನ್ ಸಿಂಗ್, ಮುರಳಿ ವಿಜಯ್, ಮೋನು ಕುಮಾರ್ ಸಿಂಗ್, ಶೇನ್ ವಾಟ್ಸನ್ (ನಿವೃತ್ತಿ) ಹೆಸರುಗಳಿದ್ದವು.

ಸಿಎಸ್‌ಕೆ ಬಿಡುಗಡೆ ಮಾಡಿರುವ 6 ಆಟಗಾರರಲ್ಲಿ ಆಲ್ ರೌಂಡರ್ ಕೇದಾರ್ ಜಾಧವ್ ಜಾಗಕ್ಕೆ ರಾಬಿ ಅವರನ್ನು ತರಲಾಗಿದೆ ಎನ್ನಲಾಗುತ್ತಿದೆ. ಉತ್ತಪ್ಪ ಸಿಎಸ್‌ಕೆ ಸೇರಿಕೊಂಡಿರುವುದನ್ನು ಅದರ ಅಧಿಕೃತ ಟ್ವಿಟರ್ ಖಾತೆ ತಿಳಿಸಿದೆ. 'ರಾಬಿನ್ ನಮ್ಮ ನೂತನ ಬ್ಯಾಟ್ಸ್‌ಮನ್‌. ಅವರನ್ನು ಹಳದಿ ನಮಸ್ಕಾರದೊಂದಿಗೆ ಸ್ವಾಗತಿಸುತ್ತಿದ್ದೇವೆ' ಎಂದು ಸಿಎಸ್‌ಕೆ ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ.

Story first published: Friday, January 22, 2021, 9:44 [IST]
Other articles published on Jan 22, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+