Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಯುಜುವೇಂದ್ರ ಚಾಹಲ್ ಹೆಸರಿಗೆ ವಿಶೇಷ ದಾಖಲೆ

IPL 2021: Yuzvendra Chahal creates record as Most wicket taker in IPL Matches in the UAE

ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ (ಅಕ್ಟೋಬರ್ 3) ನಡೆದ 48ನೇ ಟೆಸ್ಟ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಚಾಹಲ್ ಈ ದಾಖಲೆ ನಿರ್ಮಿಸಿದ್ದಾರೆ.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಯುಜುವೇಂದ್ರ ಚಾಹಲ್ ಮೂರು ವಿಕೆಟ್ ಪಡೆದುಕೊಂಡರು. ನಿಕೋಲಸ್ ಪೂರನ್, ಮಯಾಂಕ್ ಅಗರ್ವಾಲ್ ಮತ್ತು ಶಾರುಖ್ ಖಾನ್ ವಿಕೆಟ್‌ಗಳು ಚಾಹಲ್‌ಗೆ ಲಭಿಸಿತು.

57 ರನ್ ಬಾರಿಸಿದ್ದ ಮಯಾಂಕ್ ಅಗರ್ವಾಲ್ 15.2ನೇ ಓವರ್‌ನಲ್ಲಿ, 3 ರನ್ ಬಾರಿಸಿದ ನಿಕೋಲಸ್ ಪೂರನ್ 12.5ನೇ ಓವರ್‌ನಲ್ಲಿ ಮತ್ತು 0 ರನ್‌ಗೆ ಸರ್ಫರಾಜ್ ಖಾನ್ ಅವರನ್ನು 15.5ನೇ ಓವರ್‌ನಲ್ಲಿ ಚಾಹಲ್ ಔಟ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು. ಈ ಮೂಲಕ ಚಾಹಲ್ ದಾಖಲೆ ಪಟ್ಟಿಗೆ ಸೇರಿದ್ದಾರೆ.

ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ದಾಖಲೆಗಳು
* ಯುಜುವೇಂದ್ರ ಚಾಹಲ್ - 38
* ಜಸ್ಪ್ರೀತ್ ಬೂಮ್ರಾ - 38
* ಕಾಗಿಸೊ ರಬಾಡ - 35
* ಮೊಹಮ್ಮದ್ ಶಮಿ - 33

Story first published: Monday, October 4, 2021, 10:27 [IST]
Other articles published on Oct 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+