IPL 2022: ಈ ಬಾರಿ ಐಪಿಎಲ್‌ನಲ್ಲಿ ಮಿಂಚಿದ್ರೆ, ಈ ಐವರು ಆಟಗಾರರಿಗೆ ಸಿಗಲಿದೆ ಸುವರ್ಣಾವಕಾಶ

ಭಾರತೀಯ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಜೊತೆಗೆ, ಭಾರೀ ಪ್ರಮಾಣದಲ್ಲಿ ಆದಾಯ ಗಳಿಕೆಗೆ ಪ್ರಾರಂಭಗೊಂಡ ಬಿಸಿಸಿಐ ಕನಸಿನ ಸಸಿ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಐಪಿಎಲ್ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೆ, ದೇಶೀಯ ಆಟಗಾರರಿಗೆ ಅನುಕೂಲವಾಗುದಷ್ಟೇ ಅಲ್ಲದೆ, ವಿದೇಶಿ ಆಟಗಾರರಿಗೂ ವೃತ್ತಿ ಜೀವನದಲ್ಲಿ ರಾಷ್ಟ್ರಿಯ ತಂಡಕ್ಕೆ ಮರಳುವ ಸುವರ್ಣಾವಕಾಶಗಳನ್ನು ಕಲ್ಪಿಸಲಿದೆ.
ಐಪಿಎಲ್ ಇತಿಹಾಸದಲ್ಲಿ ತಂಡದಿಂದ ಹೊರಬಿದ್ದಿದ್ದ ಮಿಚೆಲ್ ಜಾನ್ಸನ್ ಮತ್ತು ಕ್ರಿಸ್ ಗೇಲ್ ಅವರಂತಹ ಆಟಗಾರರು ಅಬ್ಬರದ ಪ್ರದರ್ಶನದಿಂದ ರಾಷ್ಟ್ರಿಯ ತಂಡದಲ್ಲಿ ಶಾಶ್ವತ ಸ್ಥಾನ ಒದಗಿಸಿದೆ. ಅದಲ್ಲದೆ ಶರವೇಗದ ಬಾಲರ್ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ 2018ರ ಅವೃತ್ತಿಯಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ತಂಡಕ್ಕೆ ಮರಳಲು ಸಾಧ್ಯವಾಯಿತು.
ಯುವ ಆಟಗಾರರು ಕೋಟಿ- ಕೋಟಿ ಮೊತ್ತಕ್ಕೆ ಬಿಕರಿಯಾಗಿರುವುದರಿಂದ ಸ್ಪರ್ದೆಯು ಹೆಚ್ಚಾಗಿದ್ದು, ಗುಣಮಟ್ಟದ ಆಟಗಾರರನ್ನ ಟೀಂ ಇಂಡಿಯಾದಲ್ಲಿ ನೋಡಬಹುದಾಗಿದೆ. ಇದರ ಜೊತೆಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಆಟಗಾರರಿಗೂ ಸಹ ಐಪಿಎಲ್ 15ನೇ ಆವೃತ್ತಿಯು ವರದಾನವಾಗಲಿದೆ. ಅದ್ರಲ್ಲೂ ಈ ಕೆಳಗಿನ ಐವರು ಆಟಗಾರರು ಪ್ರಸ್ತುತ ಸೀಸನ್‌ನಲ್ಲಿ ಮಿಂಚಿದ್ರೆ, ರಾಷ್ಟ್ರೀಯ ತಂಡಕ್ಕೆ ಮರಳಬಹುದು.

ಶಿಮ್ರಾನ್ ಹೆಟ್ಮೆಯರ್ :
ವೆಸ್ಟ್ಇಂಡೀಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರನಾದ ಹೆಟ್ಮೆಯರ್, ಕಳೆದ ಎರಡು ವರ್ಷಗಳಿಂದ ಫಿಟ್ನೆಸ್ ಪರೀಕ್ಷೆಗಳಲ್ಲಿ ವಿಫಲರಾಗಿದ್ದು, 20 ಒವರ್ ಪಂದ್ಯಗಳಲ್ಲಿ ಪ್ಲೇಯಿಂಗ್ 11ನಿಂದ ಹೊರಗುಳಿದರು ಸಹ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಪಂದ್ಯಾವಳಿಯಲ್ಲಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅದಾಗ್ಯು ವೆಸ್ಟ್‌ಇಂಡಿಸ್ ಪರ ಬ್ಯಾಟ್ ಬಿಸಿರುವ ಹೆಟ್ಮೆಯರ್ 47 ಏಕದಿನ ಪಂದ್ಯಗಳಲ್ಲಿ 1,447 ರನ್ ಹಾಗೂ 42 T20 ಪಂದ್ಯಗಳಲ್ಲಿ 666 ರನ್ ಗಳಿಸಿದ್ದಾರೆ.
ಐಪಿಎಲ್ 15ನೇ ಆವೃತ್ತಿಯಲ್ಲಿ 8.5 ಕೋಟಿ ರೂಪಾಯಿಗೆ ಬಿಕರಿಯಾಗುವ ಮೂಲಕ ರಾಜಸ್ಥಾನ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಆಲ್ ರೌಂಡರ್ ಹೆಟ್ಮೆಯರ್ 2 ಪಂದ್ಯಗಳಲ್ಲಿ 67 ರನ್ ಗಳಿಸುವುದರೊಂದಿಗೆ ತಂಡವನ್ನು ಜಯದ ಪತದತ್ತ ಸಾಗಿಸುವಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದಲ್ಲಿ ರಾಷ್ಟ್ರಿಯ ತಂಡಕ್ಕೆ ಮರಳುವ ಸಾಧ್ಯತೆಗಳಿವೆ.
KKR vs MI: ಡ್ರೀಮ್ ಟೀಂ ಸೆಲೆಕ್ಷನ್‌ಗೆ ಇಲ್ಲಿದೆ ಟಿಪ್ಸ್, ಸಂಭಾವ್ಯ ಪ್ಲೇಯಿಂಗ್ 11

ಬಾನುಕಾ ರಾಜಪಕ್ಷೆ
ಶ್ರೀಲಂಕಾ ತಂಡದ ಬಾನುಕಾ ಫಿಟ್ನೆಸ್ ಕಾಯ್ದುಕೊಳ್ಳದ ಹಿನ್ನೆಲೆ ಮತ್ತು ಕಳಪೆ ಪ್ರದರ್ಶನದಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿಯಬೇಕಾಯಿತು. ಟಿ20 ವಿಶ್ವಕಪ್ ನಲ್ಲಿ ಶ್ರೀಲಂಕಾ ತಂಡದ ಭಾಗವಾಗಿದ್ದ ಬಾನುಕಾ ರಾಜಪಕ್ಷೆ 8 ಪಂದ್ಯಗಳಲ್ಲಿ 155 ರನ್ ಕಲೆಹಾಕಿದ್ದರು. ಪ್ರಸ್ತುತ ರಾಜಸ್ಥಾನ ತಂಡದ ಭಾಗವಾಗಿರುವ ಬಾನುಕಾ ಕಳೆದ 3 ಪಂದ್ಯಗಳಲ್ಲಿ 83 ರನ್ ಕಲೆಹಾಕಿದ್ದು ಮುಂಬರುವ ದಿನಗಳಲ್ಲಿ ತಂಡಕ್ಕೆ ಅತಿ ಅವಶ್ಯಕವಾಗಿರುವ ಮಧ್ಯಮ ಕ್ರಮಾಂಕದ ಸ್ಥಾನವನ್ನು ಬರಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ರೀಲಿ ಮೆರಿಡಿಥ್
ಆಸ್ಟ್ರೇಲಿಯಾ ತಂಡದ ಯುವ ವೇಗಿ ರೀಲಿ ಬಿಗ್ ಬ್ಯಾಶ್ ಲಿಗ್ ನಲ್ಲಿ 11 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದುಕೊಂಡು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಮುಂಬೈ ಇಂಡಿಯನ್ಸ್ 1 ಕೋಟಿ ರೂಗೆ ಈತನನ್ನ ಖರೀದಿಸಿದ್ದು, ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಶಕ್ತಿ ಬಂದೊದಗಿದೆ. ಪವರ್ ಪ್ಲೇ ಮತ್ತು ಸ್ಲಾಗ್ ಓವರ್ ಗಳಲ್ಲಿ ಅತಿ ವೇಗವಾಗಿ ಮತ್ತು ಒಳ್ಳೆಯ ಲಯದಲ್ಲಿ ಬೌಲಿಂಗ್ ಮಾಡುವ ರೀಲಿ ಆಸ್ಟ್ರೇಲಿಯಾ ತಂಡದ T20 ಪಂದ್ಯಗಳಿಗೆ ಕಂಬ್ಯಾಕ್ ಮಾಡುವ ಸಾಧ್ಯತೆಗಳಿವೆ.
IPL 2022: ಆರ್‌ಸಿಬಿಯಲ್ಲಿ DK ದರ್ಬಾರ್: ನನ್ನ ಕೆಲಸ ಇನ್ನೂ ಮುಗಿದಿಲ್ಲ ಎಂದ ದಿನೇಶ್ ಕಾರ್ತಿಕ್!

ಆಂಡ್ರ್ಯೂ ಟೈ
ಆಸ್ಟ್ರೇಲಿಯಾ ತಂಡದ ಅನುಭವಿ ವೇಗದ ಬೌಲರ್ ಆ್ಯಂಡ್ರ್ಯೂ ಟೈ 7 ಏಕದಿನ ಪಂದ್ಯಗಳನ್ನಾಡಿ 12 ವಿಕೆಟ್ ಕಬಳಿಸಿದ್ದಾರೆ. ಕಳೆದ ಬಿಗ್ ಬ್ಯಾಶ್ ಲೀಗ್‌ನಲ್ಲಿ 16 ಪಂದ್ಯಗಳಲ್ಲಿ 25 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಒಂದು ಕೋಟಿ ರೂ. ಗೆ ಕೆ.ಎಲ್ ರಾಹುಲ್ ಸಾರಥ್ಯದ ಲಕ್ನೊ ಸೂಪರ್ ಜೈಂಟ್ಸ ತಂಡವನ್ನು ಸೇರಿಕೊಂಡಿದ್ದಾರೆ. ಇವರು ಐಪಿಎಲ್ 2022ರಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಮತ್ತೆ ಕಾಂಗರೂ ಪಾಳಯವನ್ನ ಸೇರಿಕೊಳ್ಳಬಹುದು.


ಶೆರ್ಫೆನ್ ರುದರ್ಪೋರ್ಡ್
ವೆಸ್ಟ ಇಂಡೀಸ್ ತಂಡದ ಎಡಗೈ ಆಟಗಾರ ಶೆರ್ಫೆನ್ 2020ರಲ್ಲಿ ತಂಡದ ಪರವಾಗಿ ಕೊನೆಯದಾಗಿ ಬ್ಯಾಟ್ ಬೀಸಿದ್ದರು. ನಂತರದ ದಿನಗಳಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ 11 ಪಂದ್ಯಗಳಲ್ಲಿ 262 ರನ್ ಕಲೆ ಹಾಕುವ ಮೂಲಕ ಮಿಂಚಿನ ಆಟವನ್ನು ಪ್ರದರ್ಶಿಸಿದರು. ಪ್ರಸ್ತುತ ಆರ್‌ಸಿಬಿ ತಂಡದಲ್ಲಿರುವ ಇವರು ಡೆವಿಡ್ ವಿಲ್ಲಿಯೊಂದಿಗೆ 28 ಎಸೆತಗಳಲ್ಲಿ 40ರನ್ ಜೊತೆಯಾಟವಾಡುವ ಮೂಲಕ ತಂಡ ಜಯಗಳಿಸಲು ಸಹಾಯಕವಾದರು. ಈತ ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿದ್ದೇ ಆದಲ್ಲಿ, ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ವಿಂಡೀಸ್ ತಂಡ ಸೇರುವ ಅವಕಾಶಗಳಿವೆ.
ಹೀಗೆ ದೇಶ ಮತ್ತು ವಿದೇಶಿ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಲ್ಲಿ ಐಪಿಎಲ್ ಉತ್ತಮ ವೇದಿಕೆಯಾಗಿದ್ದು, ಅನೇಕ ಯುವ ಆಟಗಾರರಿಗೆ ಭವಿಷ್ಯ ಕಟ್ಟಿಕೊಟ್ಟಿದೆ. ಇದರ ಜೊತೆಗೆ ಫಾರ್ಮ್ ವೈಫಲ್ಯ, ಇಂಜ್ಯುರಿ, ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರಬಿದ್ದ ಆಟಗಾರರು ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಒದಗಿಸಿಕೊಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications