Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಆರ್‌ಸಿಬಿಯಲ್ಲಿ DK ದರ್ಬಾರ್‌: ನನ್ನ ಕೆಲಸ ಇನ್ನೂ ಮುಗಿದಿಲ್ಲ ಎಂದ ದಿನೇಶ್ ಕಾರ್ತಿಕ್!

Dinesh karthik

ರಾಜಸ್ತಾನ್ ರಾಯಲ್ಸ್‌ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿನ್ನೆ ಅಮೋಘ ಗೆಲುವನ್ನು ದಾಖಲಿಸಿತು. ದಿನೇಶ್ ಕಾರ್ತಿಕ್ ಮತ್ತು ಶಬಾಜ್ ನದೀಮ್ ಆರ್‌ಸಿಬಿಯನ್ನ ಗೆಲುವಿನ ದಡ ತಲುಪಿಸುವಲ್ಲಿ ಯಶಸ್ವಿಯಾದ್ರು. ರಾಜಸ್ತಾನ್ ನೀಡಿದ್ದ 170 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಆರ್‌ಸಿಬಿ ತಂಡದಲ್ಲಿ ಎಬಿ ಡಿವಿಲಿಯರ್ಸ್ ಕಳೆದ ಹಲವು ಸೀಸನ್‌ಗಳಲ್ಲಿ ಗ್ರೇಟ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದರು. ಆದ್ರೆ ಕಳೆದ ವರ್ಷ ಎಬಿಡಿ ನಿವೃತ್ತಿಯ ಬಳಿಕ ಆರ್‌ಸಿಬಿ ಫಿನಿಷರ್ ಯಾರು ಎಂಬುದಕ್ಕೆ ಟೂರ್ನಿಗೂ ಮುನ್ನ ಉತ್ತರ ಸಿಕ್ಕಿರಲಿಲ್ಲ. ಆದ್ರೀಗ ಅನುಭವಿ ದಿನೇಶ್ ಕಾರ್ತಿಕ್ ತನ್ನ ಅಮೋಘ ಆಟದ ಮೂಲಕ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಎಬಿ ಡಿವಿಲಿಯರ್ಸ್ ಕೊರತೆ ನೀಗಿಸಬಲ್ಲರಾ DK

ಎಬಿ ಡಿವಿಲಿಯರ್ಸ್ ಕೊರತೆ ನೀಗಿಸಬಲ್ಲರಾ DK

ಸದ್ಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲೇನಿದ್ರೂ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌ರದ್ದೇ ಹವಾ ಆಗಿದೆ. ಇದಕ್ಕೆ ಕಾರಣ ಅವರ ಸ್ಥಿರ ಪ್ರದರ್ಶನದ ಜೊತೆಗೆ ಫಿನಿಷಿಂಗ್ ಕೌಶಲ್ಯ. ಹಲವು ಸೀಸನ್‌ಗಳ ಕಾಲ ಆರ್‌ಸಿಬಿಯ ಗ್ರೇಟ್ ಫಿನಿಷರ್ ಆಗಿ ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟಿದ್ದ ಎಬಿ ಡಿವಿಲಿಯರ್ಸ್‌ ಸ್ಥಾನವನ್ನ ದಿನೇಶ್ ಕಾರ್ತಿಕ್ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ 5 ಆಟಗಾರರು

ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ಮಿಂಚಲು ಕಾರಣವೇನು?

ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ಮಿಂಚಲು ಕಾರಣವೇನು?

ರಾಜಸ್ತಾನ್ ರಾಯಲ್ಸ್ ವಿರುದ್ಧದ ದಿನೇಶ್ ಕಾರ್ತಿಕ್ ತಂಡವನ್ನ ಗೆಲುವಿನ ಗೆರೆ ದಾಟಿಸುವಲ್ಲಿ ಯಶಸ್ವಿಯಾದ್ರು. ಈ ಕುರಿತಾಗಿ ಮಾತನಾಡಿದ ಡಿಕೆ ತಂಡದಲ್ಲಿ ತನ್ನ ಜವಾಬ್ದಾರಿಯನ್ನ ತೆರದಿಟ್ಟರು.

''ತಂಡದ ಮ್ಯಾನೇಜ್‌ಮೆಂಟ್ ಮೊದಲ ದಿನದಿಂದಲೇ ನನ್ನ ಜವಾಬ್ದಾರಿ ಏನು ಎಂಬುದನ್ನ ತಿಳಿಸಿಕೊಟ್ಟಿದೆ. ಹೀಗಾಗಿ ಈ ಫ್ರಾಂಚೈಸಿ ಅಂದ್ರೆ ನನಗಿಷ್ಟವಾಗಿದೆ. ಅವರು ನಾನು ಏನು ಮಾಡಬೇಕು ಎಂಬುದನ್ನ ತಿಳಿಸಿದ್ದಾರೆ ಮತ್ತು ನಾನು ತಂಡಕ್ಕಾಗಿ ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ ಮತ್ತು ಆಟವನ್ನ ಎಂಜಾಯ್ ಮಾಡುತ್ತಿದ್ದೇನೆ'' ಎಂದು ಡಿನೇಶ್ ಕಾರ್ತಿಕ್ ಹೇಳಿದ್ದಾರೆ.

ಮತ್ತದೇ ತಪ್ಪು: ಐಪಿಎಲ್‌ನ ಈ ತಂಡದ ನಾಯಕ ಕೊಹ್ಲಿ ನೋಡಿ ಬ್ಯಾಟಿಂಗ್ ಕಲಿಯಬೇಕಿದೆ ಎಂದ ರವಿಶಾಸ್ತ್ರಿ

ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ದಿನೇಶ್ ಕಾರ್ತಿಕ್

ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ದಿನೇಶ್ ಕಾರ್ತಿಕ್

ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 170 ರನ್ ಬೆನ್ನತ್ತಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಟಾಪ್ ಆರ್ಡರ್‌ ಬ್ಯಾಟ್ಸ್‌ಮನ್‌ಗಳನ್ನ ಬಹುಬೇಗ ಕಳೆದುಕೊಂಡಿತು. 87 ರನ್‌ಗಳಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನ ಸಹ ಕಳೆದುಕೊಂಡಿತು. ಈ ವೇಳೆತ ತಂಡಕ್ಕೆ ಆಧಾರವಾಗಿದ್ದೇ ಶಬಾಜ್ ನದೀಮ್ ಮತ್ತು ದಿನೇಶ್ ಕಾರ್ತಿಕ್.

ಶಬಾಜ್ ನದೀಮ್ 26 ಎಸೆತಗಳಲ್ಲಿ ಮೂರು ಸಿಕ್ಸರ್ ಸಹಿತ 45 ರನ್‌ಗಳಿಸಿ ಔಟಾದ್ರೆ, ಉತ್ತಮ ಆಟವಾಡಿದ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ ಅಜೇಯರಾಗಿ 44 ರನ್ ಕಲೆಹಾಕಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು. ಇವರ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ ಏಳು ಬೌಂಡರಿಗಳಿದ್ದವು.

ದಿನೇಶ್ ಕಾರ್ತಿಕ್ ತಂಡವನ್ನ ಗೆಲುವಿನತ್ತ ಕೊಂಡೊಯ್ದ ರೀತಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಕೂಡ ಒಲಿದುಬಂತು. ಜೊತೆಗೆ ಆರ್‌ಸಿಬಿಗೆ ಒಳ್ಳೆಯ ಫಿನಿಷರ್ ಸಿಕ್ಕ ಎಂದು ಅಭಿಮಾನಿಗಳು ಸಹ ಖುಷಿಯಾಗಿದ್ದಾರೆ. ತಂಡದ ಮ್ಯಾನೇಜ್‌ಮೆಂಟ್ ಕೂಡ ದಿನೇಶ್ ಕಾರ್ತಿಗೆಗೆ ಬೆಂಬಲ ನೀಡಿದೆ.

Dinesh Karthik ಬೆಂಕಿ ಆಟದ ನಂತರ ಹೇಳಿದ್ದೇನು | Oneindia Kannada
ನನ್ನ ಕೆಲಸ ಇನ್ನೂ ಮುಗಿದಿಲ್ಲ ಎಂದ ದಿನೇಶ್ ಕಾರ್ತಿಕ್

ನನ್ನ ಕೆಲಸ ಇನ್ನೂ ಮುಗಿದಿಲ್ಲ ಎಂದ ದಿನೇಶ್ ಕಾರ್ತಿಕ್

37 ವರ್ಷ ವಯಸ್ಸಿನ ದಿನೇಶ್ ಕಾರ್ತಿಕ್ ಇದೀಗ ಬೆಸ್ಟ್ ಫಿನಿಷರ್ ಆಗಿ ಹೊರಹೊಮ್ಮಿದ್ದಾರೆ. ಈ ಕುರಿತು ಮಾತನಾಡಿದ ಡಿಕೆ ನನ್ನ ಕೆಲಸ ಇನ್ನೂ ಮುಗಿದಿಎಲ್ಲ ಎಂದಿದ್ದಾರೆ.

''ನನಗೆ ನ್ಯಾಯ ಒದಗಿಸಲು ನಾನು ಪ್ರಜ್ಞಾಪೂರ್ವಕವಾಗಿ ಪ್ರಯತ್ನ ಮಾಡಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನಾನು ಉತ್ತಮವಾಗಿ ಕಾರ್ಯನಿರ್ವಹಿಸಬಹುದೆಂದು ಭಾವಿಸಿದ್ದೆ'' ಎಂದು ಅಜೇಯ 44ರನ್ ಕಲೆಹಾಕಿದ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

''ನಾನು ಈ ಬಾರಿ ತರಬೇತಿ ಪಡೆದ ರೀತಿ ವಿಭಿನ್ನವಾಗಿದೆ. ನನಗೆ ನಾನೇ ಹೇಳಿಕೊಂಡಿದ್ದೇನೆ ಇನ್ನೂ ಕೆಲಸ ಮುಗಿದಿಲ್ಲ ಎಂದು. ನನಗೆ ನನ್ನದೇ ಆದ ಗುರಿ ಇದ್ದು, ಅದನ್ನೂ ಸಾಧಿಸಿಯೇ ತೀರುತ್ತೇನೆ'' ಎಂದು ಪಂದ್ಯದ ನಂತರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Story first published: Wednesday, April 6, 2022, 12:50 [IST]
Other articles published on Apr 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+