
ಡೆವಾಲ್ಡ್ ಬ್ರೇವಿಸ್
ಡೆವಾಲ್ಡ್ ಬ್ರೇವಿಸ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ಯುವ ಆಟಗಾರ. ಬೇಬಿ ಎಬಿ ಎಂದು ಖ್ಯಾತವಾಗಿರುವ ದಕ್ಷಿಣ ಆಫ್ರಿಕಾದ ಈ ಕ್ರಿಕೆಟಿಗ ಇತ್ತೀಚೆಗೆ ಅಂತ್ಯವಾದ ಅಂಡರ್ 19 ವಿಶ್ವಕಪ್‌ನಲ್ಲಿ ನಿಡಿದ ಅದ್ಭುತ ಪ್ರದರ್ಶನದಿಂದಾಗಿ ಐಪಿಎಲ್‌ನಲ್ಲಿ ಅವಕಾಶವನ್ನು ಪಡೆದುಕೊಂಡರು. 3 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ದ. ಆಫ್ರಿಕಾದ ಈ ಯುವ ಆಟಗಾರನನ್ನು ತೆಕ್ಕೆಗೆ ಹಾಕಿಕೊಂಡಿತ್ತು. ಭರ್ಜರಿ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿರುವ ಬ್ರೇವಿಸ್ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.
ಬ್ಯಾಟಿಂಗ್‌ನಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು ನೆನಪಿಸುವಂತೆ ಬ್ಯಾಟಿಂಗ್ ಮಾಡುವ ವೆವಾಲ್ಡ್ ಬ್ರೇವಿಸ್, ಆರು ಪಂದ್ಯಗಳನ್ನು ಆಡಿದ್ದು 129 ರನ್‌ಗಳನ್ನು ಬಾರಿಸಿದ್ದಾರೆ. 155ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಅದರಲ್ಲೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬ್ರೆವಿಸ್ ಪ್ರದರ್ಶನ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಯುವ ಆಟಗಾರ ರಾಹುಲ್ ಚಹರ್ ಓವರ್‌ನಲ್ಲಿ ಬ್ರೆವಿಸ್ ಸತತ ನಾಲ್ಕು ಸಿಕ್ಸರ್ ಸಿಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಭವಿಷ್ಯದಲ್ಲಿ ಡೆವಾಲ್ಡ್ ಬ್ರೆವಿಸ್ ಅವರನ್ನು ಭವಿಷ್ಯದ ಸ್ಟಾರ್ ಆಟಗಾರನಾಗುವ ಭರವಸೆ ಮೂಡಿಸಿದೆ.
RCB: ಉತ್ತಮ ಪ್ರದರ್ಶನ ನೀಡಿ ಗೆಲುವು ತಂದುಕೊಡಬಲ್ಲ ಈ ಮೂವರನ್ನು ಆರ್‌ಸಿಬಿ ಒಮ್ಮೆಯೂ ಕಣಕ್ಕಿಳಿಸಿಲ್ಲ!

ಉಮ್ರಾನ್ ಮಲಿಕ್
ಈ ಬಾರಿಯ ಐಪಿಎಲ್‌ನಲ್ಲಿ ಗಮನಸೆಳೆಯುತ್ತಿರುವ ಮತ್ತೋರ್ವ ಯುವ ಆಟಗಾರ ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲಿಕ್. ತನ್ನ ವೇಗ ಹಾಗೂ ನಿಖರ ಬೌಲಿಂಗ್ ದಾಳಿಯ ಮೂಲಕ ಉಮ್ರಾನ್ ಮಲಿಕ್ ಕ್ರಿಕೆಟ್ ಪ್ರೇಮಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಮ್ಮು ಕಾಶ್ಮೀರ ಮೂಲದ 22ರ ಹರೆಯದ ಯುವ ಆಟಗಾರ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರವಾಗಿ 150 ಕಿ.ಮೀ ವೃಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ ಉಮ್ರಾನ್ ಮಲಿಕ್ 10 ವಿಕೆಟ್ ಸಂಪಾದಿಸಿದ್ದಾರೆ. ಈ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಭವಿಷ್ಯದಲ್ಲಿ ಸ್ಟಾರ್ ಆಟಗಾರನಾಗುವ ಭರವಸೆ ಮೂಡಿಸಿದ್ದಾರೆ ಉಮ್ರಾನ್ ಮಲಿಕ್.
RCB vs RR: ಬೆಂಗಳೂರಿಗೆ ಇಂದು ರಾಯಲ್ಸ್ ಸವಾಲು: ಆಘಾತದಿಂದ ಹೊರಬರುತ್ತಾ ಫಾಫ್ ಪಡೆ!

ತಿಲಕ್ ವರ್ಮಾ
ಐಪಿಎಲ್‌ನಂತಾ ದೊಡ್ಡ ವೇದಿಕೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಮತ್ತೋರ್ವ ಯುವ ಆಟಗಾರ ತಿಲಕ್ ವರ್ಮಾ. ಮಧ್ಯಮ ಕ್ರಮಾಂಕದ ಈ ಎಡಗೈ ಆಟಗಾರ ತಮ್ಮ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಿಲಕ್ ವರ್ಮಾ ಈವರೆಗೆ 8 ಪಂದ್ಯಗಳನ್ನು ಆಡಿದ್ದು ಇದರಲ್ಲಿ 45.33ರ ಸರಾಸರಿಯಲ್ಲಿ 272 ರನ್‌ಗಳನ್ನು ಬಾರಿಸಿದ್ದಾರೆ ತಿಲಕ್ ವರ್ಮಾ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು ಯುವ ಆಟಗಾರನ ಪ್ರದರ್ಶನ ಭರವಸೆ ಮೂಡಿಸಿದೆ.

ಮಹೀಶ್ ತೀಕ್ಷಣ
ಶ್ರೀಲಂಕಾದ ಯುವ ಆಟಗಾರ ಮಹೀಶ್ ತೀಕ್ಷಣ ಕಳೆದ ಟಿ20 ವಿಶ್ವಕಪ್‌ನಲ್ಲಿ ಲಂಕಾ ಪರವಾಗಿ ಮಿಂಚಿದ್ದಾರೆ. ಈ ಪ್ರದರ್ಶನದಿಂದಾಗಿ ತೀಕ್ಷಣ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಣ್ಣಿಟ್ಟಿತ್ತು. ಹಾಲಿ ಚಾಂಪಿಯನ್ ಸಿಎಸ್‌ಕೆ ಹರಾಜಿನಲ್ಲಿ ಮಹೀಶ್ ತೀಕ್ಷಣ ಅವರನ್ನು 70 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಸಿಎಸ್‌ಕೆ ಪರವಾಗಿ ಮಹೀಶ್ ತೀಕ್ಷಣ ಮಾತ್ರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ 5 ಪಂದ್ಯಗಳಲ್ಲಿ ತೀಕ್ಷಣ 8 ವಿಕೆಟ್ ಸಂಪಾದಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಭವಿಷ್ಯದಲ್ಲಿ ಐಪಿಎಲ್‌ನಲ್ಲಿ ಮಾತ್ರವಲ್ಲದೆ ಶ್ರೀಲಂಕಾ ಪರವಾಗಿಯೂ ಸ್ಟಾರ್ ಆಟಗಾರನಾಗುವ ವಿಶ್ವಾಸ ಮೂಡಿಸಿದ್ದಾರೆ.

ಆಯುಷ್ ಬದೋನಿ
ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ಆಟಗಾರ ಆಯುಷ್ ಬದೋನಿ ಈ ಬಾರಿಯ ಐಪಿಎಲ್‌ನಲ್ಲಿ ಮಿಂಚುತ್ತಿರುವ ಮತ್ತೋರ್ವ ಯುವ ಆಟಗಾರನಾಗಿದ್ದಾರೆ. ಈ ಬಾರಿಯ ಐಪಿಎಲ್‌ನ ಹರಾಜಿನಲ್ಲಿ ಗೌತಮ್ ಗಂಭೀರ್ ಸಲಹೆಯಂತೆ ಆಯುಷ್ ಬದೋನಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು ಎಲ್‌ಎಸ್‌ಜಿ ತಂಡ. ಗುಜರಾತ್ ಡೈಟನ್ಸ್ ವಿರುದ್ಧ ನಡೆದ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಮಿಂಚಿದ್ದು ಈ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು. ಒತ್ತಡದ ಸಂದರ್ಭದಲ್ಲಿಯೂ ದೃತಿಗೆಡದೆ ಆಡುವ ರೀತಿಯಿಂದಾಗಿ ಆಯುಷ್ ಬದಾನಿ ಎಲ್ಲರ ಗಮನಸೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಈ ಭವಿಷ್ಯದ ಸ್ಟಾರ್ ಆಟಗಾರನಾಗುವ ವಿಶ್ವಾಸ ಮೂಡಿಸಿದ್ದಾರೆ.


Click it and Unblock the Notifications












