ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಶುರುಗೂ ಮೊದಲೇ ಪಂಜಾಬ್ ಕಿಂಗ್ಸ್ ಹಣೆಬರಹ ತಿಳಿಸಿದ ಆಕಾಶ್ ಚೋಪ್ರಾ

Aakash chopra

14 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲದ ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಕೂಡ ಒಂದು. ಕಳೆದ ಎರಡು ಸೀಸನ್‌ಗಳಲ್ಲಿ ಅವರು ಪ್ಲೇ ಆಫ್‌ಗೆ ತಲುಪಿಲ್ಲ. ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ತಂಡ ಮುನ್ನಡೆದಿತ್ತು. ಇದುವರೆಗೂ 2014ರಲ್ಲಿ ರನ್ನರ್ ಅಪ್ ಆಗಿದ್ದ ಸಾಧನೆಯೇ ಹೆಚ್ಚಾಗಿದೆ. ಆದ್ರೆ ಈ ಬಾರಿ ಪಂಜಾಬ್ ಕಿಂಗ್ಸ್ ಭವಿಷ್ಯ ಬದಲಾಗುತ್ತೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಂದಾಜಿಸಿದ್ದಾರೆ.

ಈ ಸೀಸನ್‌ನಲ್ಲಿ ರಾಹುಲ್ ತಂಡದಲ್ಲಿಲ್ಲದ ಕಾರಣ ಮಯಾಂಕ್ ಅಗರ್ವಾಲ್ ಪಂಜಾಬ್ ನಾಯಕತ್ವ ವಹಿಸಲಿದ್ದಾರೆ. ಅವರು ಕಳೆದ ಹದಿನಾಲ್ಕು ಸೀನ್‌ನಲ್ಲಿ ನಾಯಕನಾದ ಹತ್ತನೇ ಆಟಗಾರನಾಗಿದ್ದಾನೆ. ಪಂಜಾಬ್ ಈ ಬಾರಿ ಅತ್ಯಂತ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿದೆ. ಮೆಗಾ ಹರಾಜಿನಲ್ಲಿ ಕೆಲವು ಅತ್ಯುತ್ತಮ ಆಟಗಾರರನ್ನು ಪಡೆದಿದ್ದಾರೆ.

ಭಾರತದ ಮಾಜಿ ಆರಂಭಿಕ ಆಟಗಾರ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಮುಂಬರುವ ಸೀಸನ್‌ನಲ್ಲಿ ಪಂಜಾಬ್‌ ಆಟವಾಡಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ತಂಡವನ್ನು ವಿಶ್ಲೇಷಿಸಿದ್ದಾರೆ.

ಶಿಖರ್ ಧವನ್ ಅಬ್ಬರಿಸಬಹುದು!

ಶಿಖರ್ ಧವನ್ ಅಬ್ಬರಿಸಬಹುದು!

ಪಂಜಾಬ್ ಕಿಂಗ್ಸ್ ಪರ ಶಿಖರ್ ಧವನ್ ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲಿದ್ದಾರೆ. ಅವರು ಅಗ್ರ ಸ್ಕೋರರ್‌ ಆಗಿ ಆರೆಂಜ್ ಕ್ಯಾಪ್ ಅನ್ನು ಸಹ ಗೆಲ್ಲಬಹುದು. ಕಗಿಸೊ ರಬಾಡ ಪಂಜಾಬ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲಿದ್ದು, ಪರ್ಪಲ್ ಕ್ಯಾಪ್ ಕೂಡ ಗೆದ್ದರೂ ಆಶ್ಚರ್ಯವಿಲ್ಲ ಎಂದಿದ್ದಾರೆ.

2021ರಲ್ಲಿ ಡೆಲ್ಲಿ ವಿರುದ್ಧ ಅಬ್ಬರಿಸಿದ್ದ ಈ ಮೂವರು ಪ್ಲೇಯರ್ಸ್, ಈಗ ಡೆಲ್ಲಿ ತಂಡದಲ್ಲೇ ಇದ್ದಾರೆ!

ಅಗ್ರ ನಾಲ್ಕು ತಂಡದಲ್ಲಿ ಪಂಜಾಬ್ ಕಿಂಗ್ಸ್‌!

ಅಗ್ರ ನಾಲ್ಕು ತಂಡದಲ್ಲಿ ಪಂಜಾಬ್ ಕಿಂಗ್ಸ್‌!

ಮಯಾಂಕ್ ಅಗರ್ವಾಲ್, ಲಿಯಾಮ್ ಲಿವಿಂಗ್ಸ್ಟನ್ ಮತ್ತು ಶಾರುಖ್ ಖಾನ್ ಅತ್ಯಧಿಕ ಸ್ಟ್ರೈಕ್ ರೇಟ್‌ ಹೊಂದಿದ್ದು ತಂಡದ ಪರ ಅಬ್ಬರಿಸಬಲ್ಲರು. ಇವರಲ್ಲಿ ಲಿವಿಂಗ್‌ಸ್ಟನ್ ನಂಬರ್ ಒನ್ ಆಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಇದಲ್ಲದೆ ಪಂಜಾಬ್ ಕಿಂಗ್ಸ್ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. ಅದು ಸಮರ್ಥವಾದ ತಂಡ ಎಂದು ಆಕಾಶ್ ಚೋಪ್ರಾ ವಿಶ್ಲೇಷಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಈ ಬಾರಿಯ ಮೆಗಾ ಹರಾಜಿನಲ್ಲಿ ಪರ್ಸ್‌ನಲ್ಲಿ ಹೆಚ್ಚು ಹಣವನ್ನು ಹೊಂದಿತ್ತು. ಏಕೆಂದರೆ ಪಂಜಾಬ್ ಮಯಾಂಕ್ ಅಗರ್ವಾಲ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಮಾತ್ರ ಉಳಿಸಿಕೊಂಡಿತ್ತು.

ಪಂಜಾಬ್ ತಂಡದಲ್ಲಿ ಶಿಖರ್ ಧವನ್, ಜಾನಿ ಬೈರ್‌ಸ್ಟೋ, ಕಗಿಸೊ ರಬಾಡ, ಶಾರುಖ್ ಖಾನ್, ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ರಾಹುಲ್ ಚಾಹರ್ ಮೋಡಿ ಮಾಡಬಲ್ಲ ಆಟಗಾರರಾಗಿದ್ದಾರೆ.

IPL 2022: ಈ ಸೀಸನ್‌ನಲ್ಲಿ ಭಾಗವಹಿಸುತ್ತಿರುವ ಸುಂದರ ನಿರೂಪಕಿಯರು

ಬಲಿಷ್ಠ ಓಪನಿಂಗ್ ಜೋಡಿ ಹೊಂದಿರುವ ಪಂಜಾಬ್

ಬಲಿಷ್ಠ ಓಪನಿಂಗ್ ಜೋಡಿ ಹೊಂದಿರುವ ಪಂಜಾಬ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್ ಬಗ್ಗೆ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಶಿಖರ್ ಧವನ್ ಮತ್ತು ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಅತ್ಯಂತ ಸ್ಥಿರ ಪ್ರದರ್ಶನ ನೀಡಬಲ್ಲ ಜೋಡಿ ಇದಾಗಿದೆ.

ಜಾನಿ ಬೈಸ್ಟ್ರೋವ್ ಮೊದಲ ಕೆಲವು ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಲಿದ್ದು, ಪ್ರಭ್ ಸಿಮ್ರಾನ್ ಸಿಂಗ್ ಅವರು ಮೂರನೇ ಕ್ರಮಾಂಕದಲ್ಲಿ ಆಡಬಹುದು. ಲಿಯಾಮ್ ಲಿವಿಂಗ್‌ಸ್ಟೋನ್ ನಾಲ್ಕನೇ ಸ್ಥಾನದಲ್ಲಿ, ಶಾರುಖ್ ಖಾನ್ ಐದನೇ ಸ್ಥಾನದಲ್ಲಿ ಮತ್ತು ಬೆನ್ನಿ ಹೊವೆಲ್ ಆರನೇ ಸ್ಥಾನದಲ್ಲಿ ಆಡಲಿದ್ದಾರೆ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.

ಇನ್ನು ಬೌಲಿಂಗ್ ವಿಷಯಕ್ಕೆ ಬಂದರೆ ಒಡಿಯನ್ ಸ್ಮಿತ್, ರಾಹುಲ್ ಚಹಾರ್, ಕಗಿಸೊ ರಬಾಡ, ಸಂದೀಪ್ ಶರ್ಮಾ ಮತ್ತು ಅರ್ಷದೀಪ್ ಸಿಂಗ್ ಆಡಲಿದ್ದಾರೆ. ಬೈರ್‌ಸ್ಟೋವ್ ಮರಳುವುದರೊಂದಿಗೆ ಪಂಜಾಬ್ ಉತ್ತಮ ತಂಡವಾಗಲಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

Story first published: Wednesday, March 23, 2022, 11:03 [IST]
Other articles published on Mar 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X