Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022 Anchors: ಈ ಸೀಸನ್‌ನಲ್ಲಿ ಭಾಗವಹಿಸುತ್ತಿರುವ ಸುಂದರ ನಿರೂಪಕಿಯರು

IPL 2022 Anchors

ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ಮೇಲೆ ಅಲ್ಲಿ ಮನರಂಜನೆಗೇನು ಕೊರತೆಯಿಲ್ಲ. ಅದೇ ರೀತಿಯಲ್ಲಿ ಕಲರ್‌ಫುಲ್ ಲೋಕದ ಅನಾವರಣವೂ ಆಗಿರುತ್ತದೆ. ಪಂದ್ಯದ ಪೂರ್ವ ಹಾಗೂ ಪಂದ್ಯ ಮುಗಿದ ಬಳಿಕ ಕಾರ್ಯಕ್ರಮವನ್ನ ನಡೆಸಿಕೊಂಡುವ ಸುಂದರಿಯರು ಯಾರಿಗೇನು ಕಮ್ಮಿ ಇರೋದಿಲ್ಲ. ಗ್ಲಾಮರ್ ಟಚ್ ಹೊಂದಿರುವ ಐಪಿಎಲ್ 15ನೇ ಸೀಸನ್‌ನಲ್ಲಿ ಅತ್ಯಂತ ಸುಂದರ ನಿರೂಪಕಿಯರನ್ನ ಕಾಣಬಹುದಾಗಿದೆ.

ಐಪಿಎಲ್ 15ನೇ ಸೀಸನ್‌ ಮಾರ್ಚ್‌ 26ರಿಂದ ಪ್ರಾರಂಭಗೊಳ್ಳಲಿದ್ದು, ಎರಡು ತಿಂಗಳ ಕಾಲ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಈಗಾಗಲೇ ಸ್ಕ್ರೀನ್ ಮೇಲೆ ಮೋಡಿರುವ ಸಂಜನಾ ಗಣೇಶ್, ಮಯಾಂತಿ ಲ್ಯಾಂಗರ್, ತಾನ್ಯ ಪುರೋಹಿತ್ ಐಪಿಎಲ್ 2022 ನಿರೂಪಕಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ತಾನ್ಯ ಪುರೋಹಿತ್

ತಾನ್ಯ ಪುರೋಹಿತ್

ಉತ್ತರಾಖಂಡ ಮೂಲದ ತಾನ್ಯ ಪುರೋಹಿತ್ ಗರ್ವಾಲ್ ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಅನುಷ್ಕಾ ಶರ್ಮಾರ ಬಾಲಿವುಡ್ ಸಿನಿಮಾ NH10ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಕ್ರೀಡಾ ನಿರೂಪಕಿಯೂ ಆಗಿರುವ ತಾನ್ಯ ಐಪಿಎಲ್ 2022ರಲ್ಲಿ ನಿರೂಪಕಿಯಾಗಿ ಆಯ್ಕೆಯಾಗಿದ್ದಾರೆ.

ನಶ್ಪ್ರೀತ್ ಕೌರ್

ನಶ್ಪ್ರೀತ್ ಕೌರ್

ಭಾರತದ ಕ್ರೀಡಾ ಲೋಕದ ಇತ್ತೀಚಿನ ಖ್ಯಾತ ನಿರೂಪಕಿಯರಲ್ಲಿ ನಶ್ಪ್ರೀತ್ ಕೌರ್ ಕೂಡ ಒಬ್ಬರು. ಭಾರತ ಮೂಲದ ಈಕೆ ಬೆಳೆದಿದ್ದು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ 2014ರಲ್ಲಿ ಮಾಡೆಲಿಂಗ್ ಜಗತ್ತಿನಲ್ಲಿ ಸಂಚರಿಸಿದ್ದ ಈಕೆ ಕಿರು ಸಿನಿಮಾ ಸ್ಟ್ರಿಂಗ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂಡಿಯನ್ ಪ್ರೀಮಿಯಲ್ ಲೀಗ್ 15ನೇ ಸೀಸನ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಐಪಿಎಲ್ 2022: ಈ ಆವೃತ್ತಿಯಲ್ಲಿ ಕಣ್ಣಿಡಬೇಕಾದ ಇಬ್ಬರು ಯುವ ಆಟಗಾರರನ್ನು ಹೆಸರಿಸಿದ ದಿನೇಶ್ ಕಾರ್ತಿಕ್

ಸಂಜನಾ ಗಣೇಶನ್

ಸಂಜನಾ ಗಣೇಶನ್

ಟೀಂ ಇಂಡಿಯಾ ಏಸ್ ಬೌಲರ್ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ನಿರೂಪಕಿ ಆಗಿ ಕಾಣಿಸಿಕೊಂಡಿದ್ದರ ಜೊತೆಗೆ, ಕೆಲವು ಐಪಿಎಲ್ ಸೀಸನ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಸಂಜನಾ ಕಾರ್ಯ ನಿರ್ವಹಿಸುತ್ತಿದ್ದು, ಐಪಿಎಲ್ 2022 ಸೀಸನ್‌ಗೆ ಮರಳಲಿದ್ದಾರೆ.

ಧೋನಿ vs ಎಬಿಡಿ: ಐಪಿಎಲ್ ಅಂತಿಮ 5 ಓವರ್‌ಗಳಲ್ಲಿ ಹೆಚ್ಚು ರನ್ ಚಚ್ಚಿರುವ ಡೇಂಜರಸ್ ಆಟಗಾರ ಯಾರು?

ಮಯಾಂತಿ ಲ್ಯಾಂಗರ್

ಮಯಾಂತಿ ಲ್ಯಾಂಗರ್

ಭಾರತದ ಪ್ರಮುಖ ಕ್ರೀಡಾ ನಿರೂಪಕಿಯರಲ್ಲಿ ಒಬ್ಬರಾದ ಮಯಾಂತಿ ಲ್ಯಾಂಗರ್, ಟೀಮ ಇಂಡಿಯಾ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿಯ ಪತ್ನಿ. ಮಯಾಂತಿ ಕೆಲವು ಸೀಸನ್‌ಗಳಲ್ಲಿ ಐಪಿಎಲ್‌ ಸೇರಿದಂತೆ ಟೀಂ ಇಂಡಿಯಾದ ಪ್ರಮುಖ ಕ್ರಿಕೆಟ್‌ ಸರಣಿಗಳ ನಿರೂಪಣೆಯಿಂದ ಹೊರಗಿದ್ರು.

ಮಗುವಿನ ಬಾಣಂತನದಲ್ಲಿ ತನ್ನ ವೃತ್ತಿಜೀವನಕ್ಕೆ ಬ್ರೇಕ್ ನೀಡಿದ್ದ ಮಯಾಂತಿ ಮತ್ತೆ ಕಂಬ್ಯಾಕ್ ಆಗಿದ್ದು, ಮಾರ್ಚ್‌ 26ರಿಂದ ಪ್ರಾರಂಭಗೊಳ್ಳಲಿರುವ ಐಪಿಎಲ್ 15ನೇ ಸೀಸನ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ನೆರೋಲಿ ಮೆಡೋಸ್

ನೆರೋಲಿ ಮೆಡೋಸ್

ಆಸ್ಟ್ರೇಲಿಯಾದ ಪತ್ರಕರ್ತೆ ಮತ್ತು ಕ್ರಿಕೆಟ್ ನಿರೂಪಕಿಯಾಗಿರುವ ನೆರೋಲಿ ಮೆಡೋಸ್, ಕ್ರಿಕೆಟ್ ಅಷ್ಟೇ ಅಲ್ಲದೆ ಫುಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ನಿರೂಪಣೆ ಕೂಡ ಮಾಡಿದ್ದಾರೆ. ಆಸ್ಟ್ರೇಲಿಯಾ ಕ್ರೀಡಾ ಟಿವಿ ಚಾನೆಗಳಲ್ಲಿ ಈಗಾಗಲೇ ಹೆಸರುವಾಸಿಯಾಗಿರುವ ಈಕೆ ಐಪಿಎಲ್ 15ನೇ ಸೀಸನ್‌ನಲ್ಲಿ ಮೋಡಿ ಮಾಡಲು ರೆಡಿಯಾಗಿದ್ದಾರೆ.

Story first published: Tuesday, March 22, 2022, 18:03 [IST]
Other articles published on Mar 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+