IPL 2022: ಹೊಸ ಅಹಮದಾಬಾದ್ ಫ್ರಾಂಚೈಸಿಯ ಅಧಿಕೃತ ಹೆಸರು ಘೋಷಣೆ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿದ್ದು, ಈಗಾಗಲೇ ಲಕ್ನೋ ಸೂಪರ್‌ಜಾಯಿಂಟ್ಸ್ ತನ್ನ ಹೆಸರನ್ನ ಘೋಷಣೆ ಮಾಡಿತ್ತು. ಆದ್ರೀಗ ಮತ್ತೊಂದು ಫ್ರಾಂಚೈಸಿಯ ಅಹಮದಾಬಾದ್ ತನ್ನ ಅಧಿಕೃತ ತಂಡದ ಹೆಸರನ್ನ ಪ್ರಕಟಿಸಿದೆ.
ನೂತ ಐಪಿಎಲ್ ಫ್ರಾಂಚೈಸಿ ಅಹಮದಾಬಾದ್ ತನ್ನ ತಂಡದ ಹೆಸರನ್ನ ಅಹಮದಾಬಾದ್ ಟೈಟನ್ಸ್ ಎಂದು ತಿಳಿದುಬಂದಿದೆ.
ಅಹಮದಾಬಾದ್ ಮೂಲದ ಫ್ರಾಂಚೈಸಿಯೊಂದಿಗೆ ನಡೆಯುತ್ತಿರುವ ವಿವಾದದಿಂದಾಗಿ, ಮೆಗಾ ಹರಾಜನ್ನು ಫೆಬ್ರವರಿ ಎರಡನೇ ವಾರಕ್ಕೆ ಮುಂದೂಡಬೇಕಾಯಿತು. ಐಪಿಎಲ್ 2022 ಕ್ಕೆ ಬಿಸಿಸಿಐ 2 ಹೊಸ ತಂಡಗಳನ್ನು ಸೇರಿಸಿದ್ದು, ಇದರಲ್ಲಿ ಸಂಜೀವ್ ಗೋಯೆಂಕಾ ಅವರ ಆರ್‌ಪಿಎಸ್‌ಜಿ ಗ್ರೂಪ್ 7090 ಕೋಟಿ ರೂಪಾಯಿ ಖರ್ಚು ಮಾಡಿ ಲಕ್ನೋ ತಂಡವನ್ನು ಖರೀದಿಸಿದ್ದರೆ, ಅಮೆರಿಕದ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ಫ್ರಾಂಚೈಸಿಯನ್ನು 5,625 ಕೋಟಿಗೆ ಖರೀದಿಸಿದೆ.
ಈ ಮೊದಲು ಬೆಟ್ಟಿಂಗ್ ಕಂಪನಿಗಳಲ್ಲಿ ಸಿವಿಸಿ ಕ್ಯಾಪಿಟಲ್ಸ್ ಹೂಡಿಕೆ ಮಾಡಿರುವ ಬಗ್ಗೆ ವಿಷಯ ಬೆಳಕಿಗೆ ಬಂದ ನಂತರ ಸಿವಿಸಿ ಕ್ಯಾಪಿಟಲ್ ತಂಡಕ್ಕೆ ಬಿಸಿಸಿಐನಿಂದ ಒಪ್ಪಂದ ಪತ್ರವನ್ನು ನೀಡದಿರುವ ವಿವಾದ ಭುಗಿಲೆದ್ದಿತು. ಆದರೆ ಅಂತಿಮವಾಗಿ ಪರಿಶೀಲನೆ ನಡೆಸಿದ ಬಳಿಕ ಬಿಸಿಸಿಐನಿಂದ ಅನುಮತಿ ಸಿಕ್ಕಿತು. ವರದಿಯ ಪ್ರಕಾರ, ಬಿಸಿಸಿಐನ ತನಿಖಾ ಸಮಿತಿಯು ಸಿವಿಸಿ ಕ್ಯಾಪಿಟಲ್‌ನ ಹೂಡಿಕೆಯ ಬಗ್ಗೆ ತನಿಖೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದೆ.
ಹಾರ್ದಿಕ್ ಪಾಂಡ್ಯ ನಾಯಕ
ಮೆಗಾ ಹರಾಜಿಗೂ ಮುನ್ನವೇ ಅಹಮದಾಬಾದ್ ಫ್ರಾಂಚೈಸಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನ ನಾಯಕ ಎಂದು ಘೋಷಣೆ ಮಾಡಿತು. 15 ಕೋಟಿ ರೂಪಾಯಿಗೆ ಹಾರ್ದಿಕ್ ಪಾಂಡ್ಯ ಆಯ್ಕೆಯಾದ್ರೆ, ಮಿಸ್ಟರಿ ಸ್ಪಿನ್ನರ್ ರಶೀದ್ ಖಾನ್ ಜೊತೆಗೆ ಕೆಕೆಆರ್ ಪರ ಆಡುತ್ತಿದ್ದ ಶುಭ್ಮನ್ ಗಿಲ್‌ರನ್ನ ಸೆಳೆಯುವಲ್ಲಿ ಫ್ರಾಂಚೈಸಿ ಯಶಸ್ವಿಯಾಗಿದೆ.
ಅಹಮದಾಬಾದ್ ಫ್ರಾಂಚೈಸಿ ಈಗಾಗಲೇ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಮತ್ತು ದಕ್ಷಿಣ ಆಫ್ರಿಕಾದ ಗ್ಯಾರಿ ಕಸ್ಟ್ರನ್‌ರನ್ನ ಕೋಚ್‌ಗಳಾಗಿ ಆಯ್ಕೆ ಮಾಡಲಾಗಿದೆ. ಕೋಚ್ ವಿಕ್ರಂ ಸೋಲಂಕಿ ಅವರನ್ನ ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications