Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022 Opening Ceremony : ಅಭಿಮಾನಿಗಳಿಗೆ ನಿರಾಸೆ, ಉದ್ಘಾಟನಾ ಸಮಾರಂಭಕ್ಕೆ ಕೊಕ್!

IPL 2022

ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೌಂಟ್‌ಡೌನ್ ಶುರುವಾಗಿದ್ದು, ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಐಪಿಎಲ್ 15ನೇ ಸೀಸನ್ ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಇದೇ ತಿಂಗಳ 26ರಂದು ಎದುರಿಸಲಿದೆ.

ಪಂದ್ಯಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಮುಂಬೈ ತಲುಪಿದೆ. ಈ ನಡುವೆ ಬಿಸಿಸಿಐ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದನ್ನು ಹೇಳಿದೆ. ಐಪಿಎಲ್ 15ನೇ ಆವೃತ್ತಿಯ ಉದ್ಘಾಟನಾ ಸಮಾರಂಭ ನಡೆಸುತ್ತಿಲ್ಲ ಎಂದಿದ್ದು, ಇದರಿಂದ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಪ್ರತಿ ಋತುವಿನ ಆರಂಭಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭಗಳನ್ನು ನಡೆಸುವುದು ರೂಢಿಯಾಗಿದೆ.

ಆದರೆ ಕಾರಣಾಂತರಗಳಿಂದ ಬಿಸಿಸಿಐ ಕಳೆದ ಮೂರು ವರ್ಷಗಳಿಂದ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿರಲಿಲ್ಲ. ಈ ಬಾರಿಯೂ ಸತತ 4 ವರ್ಷಗಳ ಕಾಲ ಯಾವುದೇ ಉದ್ಘಾಟನಾ ಸಮಾರಂಭಗಳಿಲ್ಲದೆ ಐಪಿಎಲ್ ಆರಂಭವಾಗಲಿದೆ. ಅಂತಿಮವಾಗಿ 2018 ರ ಐಪಿಎಲ್ ಋತುವಿನಲ್ಲಿ ಉದ್ಘಾಟನಾ ಸಮಾರಂಭಗಳನ್ನು ಆಯೋಜಿಸಿತ್ತು.

ಆದ್ರೆ 2019 ರ ಐಪಿಎಲ್ ಉದ್ಘಾಟನಾ ಸಮಾರಂಭದ ಬದಲು ಅಕ್ಕೆ ಬಳಸುವ ಹಣವನ್ನ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥವಾಗಿ ನೀಡಲಾಯಿತು. ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಹಣವನ್ನು ಬಿಸಿಸಿಐ ಹಸ್ತಾಂತರಿಸಿತು. ಇದಾದ ಬಳಿಕ ಕೋವಿಡ್ ಕಾರಣದಿಂದಾಗಿ 2020 ಮತ್ತು 2021 ರ ಐಪಿಎಲ್ ಸೀಸನ್‌ಗಳಲ್ಲಿ ಉದ್ಘಾಟನಾ ಸಮಾರಂಭಗಳನ್ನು ನಡೆಸಲಾಗಿಲ್ಲ. ದೇಶದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳು ಇಳಿಮುಖವಾಗಿದ್ದರೂ ಚೀನಾದಲ್ಲಿ ಕೋವಿಡ್ ಮತ್ತೆ ಹೆಚ್ಚಾಗುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಕೊರೊನಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಈ ಬಾರಿಯೂ ಐಪಿಎಲ್ ಉದ್ಘಾಟನಾ ಸಮಾರಂಭ ನಡೆಸದಿರಲು ಬಿಸಿಸಿಐ ನಿರ್ಧರಿಸಿದೆ.

ಇದೇ ತಿಂಗಳ 26ರಿಂದ ಆರಂಭವಾಗಲಿರುವ ಐಪಿಎಲ್ 15ನೇ ಸೀಸನ್‌ನಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ 70 ಪಂದ್ಯಗಳು ನಡೆಯಲಿವೆ. ಪ್ಲೇ ಆಫ್‌ನಲ್ಲಿ 4 ಪಂದ್ಯಗಳು ನಡೆಯಲಿವೆ. ಮೇ 29 ರಂದು ಅಂತಿಮ ಪಂದ್ಯದೊಂದಿಗೆ ಪಂದ್ಯಾವಳಿಯು ಮುಕ್ತಾಯಗೊಳ್ಳುತ್ತದೆ. ಮುಂಬೈನ 4 ಸ್ಟೇಡಿಯಂಗಳಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ ಎಂಬುದು ಗಮನಾರ್ಹ.

Story first published: Wednesday, March 23, 2022, 11:03 [IST]
Other articles published on Mar 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+