ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ IPL 15ನೇ ಸೀಸನ್? ಪ್ಲ್ಯಾನ್ ಬಿ ರೆಡಿ ಮಾಡಿಕೊಂಡಿರುವ BCCI

ಭಾರತದಲ್ಲಿ ಕೋವಿಡ್-19 ಪಾಸಿಟಿವ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದಿನಕ್ಕೆ ಎರಡು ಲಕ್ಷಕ್ಕೂ ಅಧಿಕ ಪಾಸಿಟಿವ್ ಕೇಸ್ ವರದಿಯಾಗುತ್ತಿದೆ. ಇದರಿಂದ ಆತಂಕಗೊಂಡಿರುವ ಬಿಸಿಸಿಐ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಎಲ್ಲಿ ಆಡಿಸೋದು ಅನ್ನೋದಕ್ಕೆ ತಲೆಕೆಡಿಸಿಕೊಂಡಿದೆ.
ಕಳೆದ ಐಪಿಎಲ್ ಸೀಸನ್ ಅರ್ಧದಷ್ಟು ಪಂದ್ಯಗಳು ಭಾರತದಲ್ಲಿ ನಡೆಯಿತು. ಆದ್ರೆ ಆಟಗಾರರಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಾದ ಪರಿಣಾಮ ಟೂರ್ನಿಯನ್ನ ಮುಂದೂಡಲಾಗಿತ್ತು. ಜೊತೆಗೆ ಇನ್ನರ್ಧ ಸೀಸನ್ ದುಬೈನಲ್ಲಿ ನಡೆಸಿ ಯಶಸ್ವಿಯಾಗಿದೆ.
ಆದ್ರೀಗ 2022ರ ಐಪಿಎಲ್ ಸೀಸನ್ ಆಯೋಜನೆ ಕುರಿತಾಗಿ ಬಿಸಿಸಿಐ ಸಾಕಷ್ಟು ಗೊಂದಲಕ್ಕೆ ಒಳಗಾದಂತಿದೆ. ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13ರಂದು ನಿಗದಿಯಾಗಿದ್ದು ಏಪ್ರಿಲ್ ತಿಂಗಳಲ್ಲಿ ಟೂರ್ನಿ ಆಯೋಜಿಸಬೇಕಿದೆ.

ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ 15ನೇ ಸೀಸನ್ ನಡೆಸಲು ಬಿಸಿಸಿಐ ಯೋಜನೆ
ಹೌದು, ಬಿಸಿಸಿಐ ಮೂಲಗಳ ಪ್ರಕಾರ ಭಾರತದಲ್ಲಿ ಕೋವಿಡ್-19 ಪ್ರಮಾಣ ಹೀಗೆ ಮುಂದುವರಿದಿದ್ದೇ ಆದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ 15ನೇ ಸೀಸನ್ ಆಯೋಜನೆಗೆ ಪ್ಲ್ಯಾನ್ ಬಿ ಯೋಜನೆಯಯನ್ನ ರೂಪಿಸಿದೆ. 2009ರ ಎರಡನೇ ಆವೃತ್ತಿಯ ಐಪಿಎಲ್ ಸೀಸನ್ ಅನ್ನು ಹರಿಣಗಳ ನಾಡಲ್ಲೇ ನಡೆಸಿ ದಕ್ಷಿಣ ಆಫ್ರಿಕಾ ಯಶಸ್ವಿಯಾಗಿತ್ತು. ಹೀಗಾಗಿ ಪ್ರೋಟಿಸ್ ನಾಡಲ್ಲಿ ಮುಂದಿನ ಆವೃತ್ತಿಯ ಐಪಿಎಲ್ ಸೀಸನ್‌ಗೆ ಯೋಜನೆ ರೂಪಿಸುತ್ತಿದೆ.
ಐಪಿಎಲ್‌ಗೆ ಕಂಬ್ಯಾಕ್ ಮಾಡಲಿರುವ ಮಿಚೆಲ್ ಸ್ಟಾರ್ಕ್: ಆಸಿಸ್ ವೇಗಿ ಮೇಲೆ ಕಣ್ಣಿಟ್ಟಿದೆ RCB

ವೇಳಾಪಟ್ಟಿ ಮತ್ತು ಆಯೋಜನಾ ಸ್ಥಳದ ಬದಲಾವಣೆಗೆ ಹೆಚ್ಚಿದ ಒತ್ತಡ
ಹೆಚ್ಚುತ್ತಿರುವ ಕೋವಿಡ್ - 19 ಪಾಸಿಟಿವ್ ದರ ಮತ್ತು ಹೆಚ್ಚುತ್ತಿರುವ ಸಕಾರಾತ್ಮಕ ದರದ ಹಿನ್ನೆಲೆಯಲ್ಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಕಚೇರಿಯು 2021 ರ ವೇಳಾಪಟ್ಟಿಯನ್ನು ಮರುಹೊಂದಿಸಲು ಒತ್ತಾಯಿಸಲಾಯಿತು ಎಂದು ತಿಳಿದುಬಂದಿದೆ.
ಈಗಾಗಲೇ ರಣಜಿ ಟ್ರೋಫಿ ಸೇರಿದಂತೆ ದೇಶೀಯ ಟೂರ್ನಮೆಂಟ್‌ಗಳನ್ನ ಬಿಸಿಸಿಐ ಮುಂದೂಡಿದೆ. ದೇಶೀಯ ಅಂಡರ್-19 ಕೂಚ್ ಬೆಹರ್ ಟ್ರೋಫಿಯನ್ನು ಮಧ್ಯದಲ್ಲಿ ನಿಲ್ಲಿಸಬೇಕಾದ ಸಂದರ್ಭವು ಬಂದಿದೆ. ಹೀಗಿರುವಾಗ ಭಾರತದಲ್ಲಿ ಐಪಿಎಲ್ 15ನೇ ಸೀಸನ್ ನಡೆಸುವುದು ಅಸಾಧ್ಯದ ಮಾತಾಗಿದೆ.

ಈಗಾಗಲೇ ದೇಶೀಯ ಟೂರ್ನಿಗಳನ್ನ ಮುಂದೂಡಿರುವ ಬಿಸಿಸಿಐ
ಜನವರಿ 13ರಿಂದ ಶುರುವಾಗಬೇಕಿದ್ದ ರಣಜಿ ಟ್ರೋಫಿಯನ್ನು ಬಿಸಿಸಿಐ ಈಗಾಗಲೇ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ದೇಶದಲ್ಲಿ ಕೊರೊನಾದಿಂದ ಆಗಿರುವ ತೊಂದರೆ ಎದುರಾದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಈ ಹಿಂದಿನ ವೇಳಾಪಟ್ಟಿಯಂತೆ ಟೂರ್ನಿ ಆರಂಭವಾಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಣಜಿ ಟ್ರೋಫಿ ಅಲ್ಲದೆ ಇತರ ದೇಶೀಯ ಪಂದ್ಯಾವಳಿಗಳಾದ ಕರ್ನಲ್ ಸಿಕೆ ನಾಯ್ಡು ಟೂರ್ನಿ ಮತ್ತು ಹಿರಿಯ ಮಹಿಳಾ ಟಿ20 ಲೀಗ್ ಅನ್ನು ಸಹ ಮುಂದೂಡಲಾಗಿದೆ. ಹಾಗೆಯೇ ಪ್ರಸ್ತುತ ನಡೆಯುತ್ತಿದ್ದ U-19 ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದ ಬಳಿಕ ಉಳಿದ ಪಂದ್ಯಗಳನ್ನು ಕೂಡ ಮುಂದೂಡಲಾಗುತ್ತಿದೆ.
ದ್ರಾವಿಡ್ ಮತ್ತು ನಾನು ಒಂದೇ ಕುಟುಂಬದವರು ಎಂದ ನಟಿ; ದ್ರಾವಿಡ್‌ಗೂ ಆ ನಟಿಗೂ ಇರುವ ನಂಟೇನು?

ಶ್ರೀಲಂಕಾದಲ್ಲಿ ನಡೆಸಲು ಬದಲಿ ಪ್ಲ್ಯಾನ್ ರೆಡಿ
ಐಪಿಎಲ್ ಸೀಸನ್ 15ನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲು ಒಂದೆಡೆ ಬಿಸಿಸಿಐ ಯೋಜಿಸಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ಸಾಧ್ಯವಾಗದಿದ್ದರೆ, ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಐಪಿಎಲ್ ಸೀಸನ್ ನಡೆಸುವ ಆಯ್ಕೆಯನ್ನು ಸಹ ಬಿಸಿಸಿಐ ಪ್ಲ್ಯಾನ್ ಬಿ ಆಗಿ ರೂಪಿಸಿದೆ. ಹಾಗೇನಾದ್ರು ಆಗಿದ್ದೇ ಆದಲ್ಲಿ ದ್ವೀಪ ರಾಷ್ಟ್ರದಲ್ಲಿ ಚೊಚ್ಚಲ ಬಾರಿಗೆ ಟೂರ್ನಿ ಆಯೋಜಿಸದಂತಾಗುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಟೂರ್ನಿ ಆಯೋಜನೆ
ಭಾರತವು ದಕ್ಷಿಣ ಆಫ್ರಿಕಾಕ್ಕಿಂತ 3 ಗಂಟೆ 30 ನಿಮಿಷಗಳ ಮುಂದಿರುವಾಗ, ಯುಎಇ ಅಥವಾ ಭಾರತದಲ್ಲಿ ಐಪಿಎಲ್ ಪಂದ್ಯಗಳಂತೆ ತುಂಬಾ ತಡ ರಾತ್ರಿಯ ಮುಕ್ತಾಯವನ್ನು ಕಾಣುವುದಿಲ್ಲ. ಒಂದು ವೇಳೆ ಪ್ರಸಾರಕರು ತಮ್ಮ ಆದ್ಯತೆಯ ಭಾರತೀಯ ಕಾಲಮಾನತ 7.30 pm ಸಮಯದ ಆರಂಭಕ್ಕೆ ಅಂಟಿಕೊಂಡರೆ, ದಕ್ಷಿಣ ಆಫ್ರಿಕಾದಲ್ಲಿ ಪಂದ್ಯವು ಸಂಜೆ 4 ಗಂಟೆಗೆ ಪ್ರಾರಂಭವಾಗುತ್ತದೆ.
ಇದ್ರಿಂದ ಆಟಗಾರರಿಗೂ ಪಂದ್ಯ ಮುಕ್ತಾಯವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಈ ಹಿಂದೆ ಭಾರತದಲ್ಲಿ ಆಟಗಾರರು ಸಾಮಾನ್ಯವಾಗಿ ಮಧ್ಯರಾತ್ರಿಯ ನಂತರ ಐಪಿಎಲ್ ಪಂದ್ಯಗಳನ್ನು ಮುಗಿಸುತ್ತಾರೆ ಎಂದು ದೂರಿದ್ದಾರೆ. ಅನಿಯಮಿತ ಪಂದ್ಯದ ಸಮಯಗಳು, ನಿರಂತರ ವಿಮಾನ ಪ್ರಯಾಣದ ಜೊತೆಗೆ ಆಟಗಾರರಿಗೆ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ಸದ್ಯ ದಕ್ಷಿಣ ಆಫ್ರಿಕಾದಲ್ಲಿರುವ ಭಾರತದ ಆಟಗಾರರು ಅಲ್ಲಿನ ವಾತಾವರಣ ಮತ್ತು ಟೂರ್ನಿಯ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರ ಪರಿಣಾಮ ಮುಂದಿನ ಐಪಿಎಲ್ ಸೀಸನ್‌ಗೆ ಉತ್ತಮ ವೇದಿಕೆಯಾಗಲಿದೆ.

ಈ ಬಾರಿ 10 ತಂಡಗಳು ಟೂರ್ನಿಯಲ್ಲಿ ಭಾಗಿ
ಇದುವರೆಗೂ ಐಪಿಎಲ್ ಸೀಸನ್‌ನಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನ ಆಡುತ್ತಿದ್ದವು. ಆದ್ರೆ ಈ ಸೀಸನ್‌ನಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗುವುದರಿಂದ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಜೂನ್‌ನ ಮೊದಲ ವಾರದಲ್ಲಿ ನಡೆಯಬಹುದು. ಅಂದರೆ ಜೂನ್ 4 ಇಲ್ಲವೆ 5ರಂದು ಫೈನಲ್ ಪಂದ್ಯ ನಡೆಯಲಿದೆ.
ಈ ಹಿಂದಿನ ನಿಯಮದ ಪ್ರಕಾರ ಪ್ರತಿ ತಂಡಗಳು ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನ ಆಡುತ್ತಿದ್ದವು. ಅದರಲ್ಲಿ ಏಳು ಪಂದ್ಯಗಳು ತವರಿನ ಅಂಗಳದಲ್ಲಿ, ಏಳು ಪಂದ್ಯಗಳು ಇತರೆ ಸ್ಟೇಡಿಯಂನಲ್ಲಿ ನಡೆಯುತ್ತಿತ್ತು. ಆದ್ರೆ ಈ ಬಾರಿ ಕೋವಿಡ್ ಕಾರಣದಿಂದಾಗಿ ಲೀಗ್ ಆಯೋಜನೆ ಬಿಸಿಸಿಐಗೆ ಸವಾಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications