Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈ ಸೂಪರ್ ಕಿಂಗ್ಸ್‌ಗೆ ಆನೆಬಲ: ಸ್ಕ್ವಾಡ್ ಸೇರಿಕೊಂಡ ರುತುರಾಜ್ ಗಾಯಕ್ವಾಡ್

Ruturaj gaikwad

ಮನೋರಂಜನ್ ಕಾ ಬಾಪ್ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ಗೆ ಕ್ಷಣಗಣನೆ ಶುರುವಾಗಿದ್ದು, ಇನ್ನು 10 ದಿನಗಳಷ್ಟೇ ಬಾಕಿ ಉಳಿದಿದೆ. ಪ್ರಮುಖ ಆಟಗಾರರೆಲ್ಲಾ ತಮ್ಮ ಫ್ರಾಂಚೈಸಿಯನ್ನ ಸೇರಿಕೊಳ್ಳುತ್ತಿದ್ದು, ತಂಡಗಳೂ ಅಭ್ಯಾಸ ಆರಂಭಿಸಿವೆ.

ಫಿಟ್ನೆಸ್ ಸಮಸ್ಯೆ ಎದುರಿಸಿದ್ದ ಯುವ ಬ್ಯಾಟ್ಸ್‌ಮನ್, 2021 ರ ಐಪಿಎಲ್ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ರುತುರಾಜ್ ಗಾಯಕ್ವಾಡ್ ಅವರು ತಮ್ಮ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಂಡಿದ್ದಾರೆ. ಈ ಮೂಲಕ ಸಿಎಸ್‌ಕೆಗೆ ಆನೆಬಲ ಬಂದಂತಾಗಿದೆ.

ರುತುರಾಜ್ ಗಾಯಕ್ವಾಡ್ ಶ್ರೀಲಂಕಾ ಸರಣಿಗೂ ಮುನ್ನ ಗಾಯಗೊಂಡ ಪರಿಣಾಮ ಬೆಂಗಳೂರಿನ ಎನ್‌ಸಿಎ ಶಿಬಿರದಲ್ಲಿ ಭಾಗವಹಿಸಿದ್ರು. ಆರಂಭಿಕ ಪಂದ್ಯಗಳಿಗೆ ಸಿಎಸ್‌ಕೆಗೆ ಅಲಭ್ಯರಾಗಬಹುದು ಎಂದು ಅಂದಾಜಿಸಲಾಗಿತ್ತು.

ಆದ್ರೆ ರುತುರಾಜ್ ಗಾಯಕ್ವಾಡ್ ತಂಡವನ್ನ ಸೇರಿದ್ದರ ಕುರಿತು ಸಿಎಸ್ ಕೆ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಬಹಿರಂಗಪಡಿಸಿದೆ. ಕಳೆದ ಋತುವಿನಲ್ಲಿ ರುತುರಾಜ್ ಗಾಯಕ್ವಾಡ್ 635 ರನ್ ಗಳಿಸಿ ಗರಿಷ್ಠ ರನ್ ಗಳಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್‌ನ 2021ರಲ್ಲಿ ಟ್ರೋಫಿ ಗೆಲ್ಲಲು ರುತುರಾಜ್ ಗಾಯಕ್ವಾಡ್ ಪ್ರಮುಖ ಪಾತ್ರ ವಹಿಸಿದ್ದರು.

ಐಪಿಎಲ್ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2022ರ ಮೊದಲ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಇದೇ 26ರಂದು ನಡೆಯಲಿದೆ. 31ರಂದು ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಎರಡನೇ ಪಂದ್ಯ ನಡೆಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್‌ ಸ್ಕ್ವಾಡ್
ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ , ರುತುರಾಜ್ ಗಾಯಕ್ವಾಡ್, ದೀಪಕ್ ಚಾಹರ್ , ಅಂಬಟಿ ರಾಯುಡು , ಡ್ವೇನ್ ಬ್ರಾವೋ , ಶಿವಂ ದುಬೆ , ಕ್ರಿಸ್ ಜೋರ್ಡಾನ್, ರಾಬಿನ್ ಉತ್ತಪ್ಪ, ಮಿಚೆಲ್ ಸ್ಯಾಂಟ್ನರ್ , ಆಡಮ್ ಮಿಲ್ನೆ , ವಿಕ್ರಮ್ ಸೋಲಂಕಿ, ರಾಜವರ್ಧನ್ , ಡೆವೊನ್ ಕಾನ್ವೆ , ಮಹೇಶ್ ತೀಕ್ಷಣ , ಪ್ರಿಟೋರಿಯಸ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್, ಶುಭ್ರಾಂಶ ಸೇನಾಪತಿ, ಮುಖೇಶ್ ಚೌಧರಿ, ಜಗದೀಶನ್, ನಿಶಾಂತ್

Story first published: Thursday, March 17, 2022, 21:24 [IST]
Other articles published on Mar 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+