For Quick Alerts
ALLOW NOTIFICATIONS  
For Daily Alerts
 

ಅಂಡರ್-19 ವಿಶ್ವಕಪ್‌ನಲ್ಲಿ ಮಿಂಚಿದ್ದ ರಾಜವರ್ಧನ್ ಹಂಗರ್ಗೇಕರ್‌ಗೆ CSK ಏಕೆ ಇನ್ನೂ ಅವಕಾಶ ನೀಡಿಲ್ಲ?

Stephen Fleming

ಕಳೆದ ಅಂಡರ್-19 ವಿಶ್ವಕಪ್‌ನಲ್ಲಿ ಉತ್ತಮ ಬೌಲಿಂಗ್ ನಡೆಸಿದ್ದ ಯುವ ಬೌಲರ್ ರಾಜವರ್ಧನ್ ಹಂಗರ್ಗೇಕರ್ ಈ ಬಾರಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿ ಪಾಲಾಗಿದ್ದರು. ಆದ್ರೆ ಈಗಾಗಲೇ ಬಹುತೇಕ ಅರ್ಧ ಸೀಸನ್‌ ಮುಗಿದರೂ ಈ ಯುವ ಬೌಲರ್‌ಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸಿಎಸ್‌ಕೆ ಅವಕಾಶ ನೀಡದೆ ಇರುವುದು ಹಲವು ಪ್ರಶ್ನೆ ಎಡೆಮಾಡಿಕೊಟ್ಟಿದೆ.

ಐಪಿಎಲ್ 15ನೇ ಸೀಸನ್ ನಲ್ಲಿ ಸಿಎಸ್‌ಕೆ ತಂಡ ರಾಜವರ್ಧನ್ಗೆ ಏಕೆ ಅವಕಾಶ ನೀಡಲಿಲ್ಲ ಎಂಬುದನ್ನು ಕೋಚ್ ಸ್ಟೀಫನ್ ಫ್ಲೆಮಿಂಗ್ ವಿವರಿಸಿದ್ದಾರೆ.

ಉತ್ತಮವಾಗಿ ಬೌಲಿಂಗ್ ಮಾಡುವುದಷ್ಟೇ ಅಲ್ಲದೆ ಬ್ಯಾಟಿಂಗ್ ನಲ್ಲಿ ಆಕ್ರಮಣಕಾರಿಯಾಗಿ ಆಡಬಲ್ಲ ಈ ಯುವ ಆಟಗಾರನಿಗೆ ಇನ್ನೂ ಏಕೆ ಅವಕಾಶ ನೀಡಿಲ್ಲ ಎಂದು ಸಿಎಸ್‌ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಕೇಳುತ್ತಿದ್ದರು. ಹೀಗಾಗಿ ಕೋಚ್ ಆತನಿಗೆ ಏಕೆ ಅವಕಾಶ ನೀಡಿಲ್ಲ ಎಂಬುದನ್ನ ವಿವರಿಸಿದ್ದಾರೆ.

2022ರ ಅಂಡರ್-19 ವಿಶ್ವಕಪ್ ಗೆಲ್ಲಲು ಭಾರತದ ಪರ ಮಿಂಚಿದ್ದ ಈ ಬೌಲರ್‌ಗೆ ಮೊದಲ ಪಂದ್ಯದಲ್ಲಿಯೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದ್ರೆ 8 ಪಂದ್ಯಗಳ ನಂತರವೂ ಈತನಿಗೆ ಅವಕಾಶ ಸಿಕ್ಕಿಲ್ಲ.

ಈ ಬಗ್ಗೆ ವಿವರಣೆ ನೀಡಿರುವ ಫ್ಲೆಮಿಂಗ್ 'ಹಂಗರ್ಗೇಕರ್ ಪ್ರತಿಭಾವಂತ ಆಟಗಾರ ಎಂಬುದು ನನಗೆ ಗೊತ್ತು. ಅವರು 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಅನೇಕ ದೊಡ್ಡ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಇದು ಅಂಡರ್-19 ಕ್ರಿಕೆಟ್‌ಗಿಂತ ಕಠಿಣವಾಗಿರುತ್ತದೆ. ಹೀಗಾಗಿ ಅವರನ್ನು ಮೊದಲ ಪಂದ್ಯದಲ್ಲಿ ಆಡಲು ಬಿಟ್ಟು ಅವರ ಆತ್ಮವಿಶ್ವಾಸವನ್ನು ಹಾಳು ಮಾಡಲು ಬಯಸುವುದಿಲ್ಲ. ನಾವು ಅವನನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು'' ಎಂದು ಫ್ಲೆಮಿಂಗ್ ಹೇಳಿದ್ದಾರೆ.

ಚೆನ್ನೈ ಮಾತ್ರವಲ್ಲದೆ ಅಂಡರ್-19 ಆಟಗಾರರನ್ನು ಬಿಡ್ ಮಾಡಿರುವ ಯಾವುದೇ ತಂಡದಲ್ಲಿ ಯುವ ಆಟಗಾರರಿಗೆ ಇದುವರೆಗೆ ಅವಕಾಶ ಸಿಕ್ಕಿಲ್ಲ. ರಾಜ್ ಪವಾಕ್ ಮಾತ್ರ ಪಂಜಾಬ್ ಗೆ ಕೆಲವು ಪಂದ್ಯಗಳಲ್ಲಿ ಅವಕಾಶ ನೀಡಿದ್ದರು. ನಂತರ ಅವರನ್ನು ತಂಡದಿಂದ ಬಿಡಲಾಯಿತು. ಇದು ಯುವ ಆಟಗಾರನ ಆತ್ಮವಿಶ್ವಾಸವನ್ನು ಮುರಿಯಲಿದೆ. 19 ವರ್ಷದೊಳಗಿನವರ ಕ್ರಿಕೆಟ್‌ಗಿಂತ ಇದು ಕಠಿಣವಾಗಿರುವುದರಿಂದ ಕಿರಿಯ ಆಟಗಾರರು ಮಾನಸಿಕವಾಗಿ ಸಿದ್ಧರಾಗಿರಬೇಕು.

ಅದೇ ರೀತಿ ಡೆಲ್ಲಿ ತಂಡ ಈ ಹಿಂದೆ 19 ವರ್ಷದೊಳಗಿನ ಆಟಗಾರ ಉನ್ಮುಕ್ ಚಾಂದ್‌ಗೆ ಮೊದಲ ಪಂದ್ಯದಲ್ಲಿಯೇ ಅವಕಾಶ ನೀಡಿತ್ತು. ಆದರೆ ಬ್ರಾಡ್ಲಿ ಎಸೆದ ಮೊದಲ ಎಸೆತದಲ್ಲಿಯೇ ಉನ್ಮುಕ್ ಚಾಂದ್ ಕ್ಲಿನ್ ಬೋಲ್ಟ್ ಆದರು. ಅಲ್ಲಿಗೇ ಅವರ ಮೇಲಿದ್ದ ನಿರೀಕ್ಷೆ ಹುಸಿಯಾಯಿತು. ಅದರ ನಂತರ ಅವರ ಕ್ರಿಕೆಟ್ ಕೇವಲ ಇಳಿಮುಖವಾಗಿತ್ತು ಹೊರತು ಏರಲಿಲ್ಲ. ಈ ಭಯದಿಂದಾಗಿಯೇ ಸಿಎಸ್‌ಕೆ ಹಂಗರ್ಗೇಕರ್‌ಗೆ ಆಡುವ ಹನ್ನೊಂದರಲ್ಲಿ ಸೇರಿಸಿಕೊಂಡಿಲ್ಲ.

1.5 ಕೋಟಿ ರೂಪಾಯಿಗೆ ಬಿಡ್ ಆದ ಹಂಗರ್ಗೇಕರ್
ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಮೆಗಾ ಹರಾಜಿನಲ್ಲಿ ಹಾಲಿ ಚಾಂಪಿಯನ್‌ಗಳು 1.5 ಕೋಟಿ ರೂ.ಗೆ ಹಂಗರ್ಗೇಕರ್ ಅವರನ್ನು ಆಯ್ಕೆ ಮಾಡಿಕೊಂಡರು. ಅಂಡರ್19 ವಿಶ್ವಕಪ್ 2022 ರಲ್ಲಿ ಅವರ ಅದ್ಭುತ ಪ್ರದರ್ಶನದ ಜೊತೆಗೆ, ಐದು ಪಂದ್ಯಗಳಿಂದ ನಾಲ್ಕು ವಿಕೆಟ್‌ಗಳನ್ನ ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸೆಮಿ-ಫೈನಲ್‌ನಲ್ಲಿ 141.7 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರನ್ನೂ ಆಕರ್ಷಿಸಿದ್ದರು.

Story first published: Thursday, April 28, 2022, 10:03 [IST]
Other articles published on Apr 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+