For Quick Alerts
ALLOW NOTIFICATIONS  
For Daily Alerts
 

CSK vs GT: ಕುಂಟುತ್ತಾ ರನ್ ಕಲೆಹಾಕಿದ ಸಿಎಸ್‌ಕೆ, ಗುಜರಾತ್‌ಗೆ 134ರನ್‌ ಟಾರ್ಗೆಟ್‌

CSK

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್‌ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿದೆ. ಈ ಮೂಲಕ ಗುಜರಾತ್ ಟೈಟನ್ಸ್‌ಗೆ 134ರನ್‌ಗಳ ಗುರಿ ನೀಡಿದೆ.

ಆರಂಭಿಕ ಪವರ್‌ಪ್ಲೇ ಓವರ್‌ಗಳಲ್ಲಿ ಡೆವೊನ್ ಕಾನ್ವೆ 5 ರನ್‌ಗೆ ವಿಕೆಟ್ ಒಪ್ಪಿಸಿದ್ರು. ಅದಾದ ಬಳಿಕ ರುತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಎರಡನೇ ವಿಕೆಟ್‌ಗೆ ಅರ್ಧಶತಕ ಜೊತೆಯಾಟವಾಡಿದ್ರು. ಆದ್ರೆ ಟಿ20 ಕ್ರಿಕೆಟ್‌ಗೆ ತಕ್ಕಂತೆ ಸ್ಟ್ರೈಕ್‌ರೇಟ್ ನಿಭಾಯಿಸದೇ ಬ್ಯಾಟ್ ಬೀಸಿದ ಗಾಯಕ್ವಾಡ್ 49 ಎಸೆತಗಳಲ್ಲಿ 53 ರನ್‌ ಕಲೆಹಾಕುವ ಮೂಲಕ ತಂಡದ ಒಟ್ಟಾರೆ ಮೊತ್ತಕ್ಕೆ ಕೊಡುಗೆ ನೀಡಿದ್ರು. ಇವ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.

ಮೊಯಿನ್ ಅಲಿ 21 ರನ್‌ಗಳಿಸಿ ಸಾಯಿ ಕಿಶೋರ್‌ಗೆ ವಿಕೆಟ್ ಒಪ್ಪಿಸಿದ ಬಳಿಕ, ಎನ್. ಜಗದೀಶನ್ ಕೊನೆಯವರೆಗೂ ಕ್ರೀಸ್‌ನಲ್ಲೇ ಉಳಿದರು. 33 ಎಸೆತಗಳಲ್ಲಿ ಅಜೇಯ 39ರನ್ ಕಲೆಹಾಕಿದ ಈ ಬ್ಯಾಟರ್‌ಗೆ ಶಿವಂ ದುಬೆ (0) ಸಾಥ್‌ ಕೊಡಲಿಲ್ಲ. ಎಂ.ಎಸ್ ಧೋನಿ 10 ಎಸೆತಗಳಲ್ಲಿ ಕೇವಲ 7 ರನ್‌ಗಳಿಸಿ ಔಟಾದ್ರು. ಮಿಚೆಲ್‌ ಸ್ಯಾಂಟ್ನರ್ ಒಂದು ರನ್‌ಗಳಿಸಿದರು.

ಅಂತಿಮವಾಗಿ ನಿಗದಿತ 20 ಓವರ್‌ಗೆ ಐದು ವಿಕೆಟ್ ಕಳೆದುಕೊಂಡು ಸಿಎಸ್‌ಕೆ 133ರನ್ ದಾಖಲಿಸಿದೆ. ಗುಜರಾತ್ ಪರ ಮೊಹಮ್ಮದ್ ಶಮಿ 2, ರಶೀದ್ ಖಾನ್ 1, ಅಲ್ಜಾರಿ ಜೋಸೆಫ್ 1, ಸಾಯಿ ಕಿಶೋರ್ 1 ವಿಕೆಟ್ ಕಬಳಿಸಿದರು.

CSK ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನೆರ್, ಮೊಯಿನ್ ಅಲಿ, ಎನ್. ಜಗದೀಶನ್, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಶಿವಂ ದುಬೆ, ಪ್ರಶಾಂತ್ ಸೋಲಂಕಿ, ಮತೀಶ್ ಪತೀರಣ, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ

play off ರೇಸ್ ನಲ್ಲಿ RCB ಗೆ ಈ ಅವಕಾಶ ಬಿಟ್ರೆ ಇನ್ಯಾವ ದಾರಿನೂ ಇಲ್ವಾ?? | Oneindia Kannada

ಗುಜರಾತ್ ಟೈಟನ್ಸ್ ಪ್ಲೇಯಿಂಗ್ 11
ವೃದ್ದಿಮಾನ್ ಸಾಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ

Story first published: Sunday, May 15, 2022, 17:56 [IST]
Other articles published on May 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+