Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs GT: ಸಿಎಸ್‌ಕೆ ವಿರುದ್ಧ ಭರ್ಜರಿಯಾಗಿ ಗೆದ್ದ ಗುಜರಾತ್ ಟೈಟನ್ಸ್‌, ಪಾಯಿಂಟ್ಸ್ ಪಟ್ಟಿಯಲ್ಲಿ ನಂ.1

Gujarat titans

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲೇ ಉಳಿದುಕೊಂಡು ಪ್ಲೇ ಆಫ್ ತಲುಪಿದೆ. ಈ ಮೂಲಕ ಕೊಲ್ಕತ್ತಾದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭಾಗಿಯಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 134ರನ್‌ಗಳ ಸುಲಭ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹಾ 57 ಎಸೆತಗಳಲ್ಲಿ 67 ರನ್‌ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಆರಂಭಿಕ ವಿಕೆಟ್‌ಗೆ ಸಾಹಾ ಜೊತೆಗೂಡಿದ ಶುಭ್ಮನ್ ಗಿಲ್ 18 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು ಸಹ ಅರ್ಧಶತಕದ ಜೊತೆಯಾಟ ಮೂಡಿಬಂದಿತು.

ಗಿಲ್ ವಿಕೆಟ್ ಪತನದ ಬಳಿಕ ಮ್ಯಾಥ್ಯೂ ವೇಡ್ 15 ಎಸೆತಗಳಲ್ಲಿ 20ರನ್‌ಗಳಿಸಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದ್ರೆ, ಹಾರ್ದಿಕ್ ಪಾಂಡ್ಯ ಕೇವಲ 7ರನ್‌ಗೆ ಮಥೀಶ ಪತೀರ್ನಾಗೆ ಔಟಾದ್ರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ ಅಜೇಯ 15 ರನ್ ಕಲೆಹಾಕಿದ್ರೆ, ಆರಂಭದಿಂದಲೂ ಅಜೇಯನಾಗಿ ಉಳಿದು ಅದ್ಭುತ ಆಟವಾಡಿದ ವೃದ್ದಿಮಾನ್ ಸಾಹಾ ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ವೃದ್ದಿಮಾನ್ ಸಾಹಾ 67ರನ್‌ಗಳ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಸಿಎಸ್‌ಕೆ ಪರ ಶ್ರೀಲಂಕಾದ ಯುವ ಬೌಲರ್ ಮಥೀಶ ಪತೀರ್ನಾಗೆ 2 ವಿಕೆಟ್, ಮೊಯಿನ್ ಅಲಿ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿತು.

Ruturaj gaikwad

ಆರಂಭಿಕ ಪವರ್‌ಪ್ಲೇ ಓವರ್‌ಗಳಲ್ಲಿ ಡೆವೊನ್ ಕಾನ್ವೆ 5 ರನ್‌ಗೆ ವಿಕೆಟ್ ಒಪ್ಪಿಸಿದ್ರು. ಅದಾದ ಬಳಿಕ ರುತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಎರಡನೇ ವಿಕೆಟ್‌ಗೆ ಅರ್ಧಶತಕ ಜೊತೆಯಾಟವಾಡಿದ್ರು. ಆದ್ರೆ ಟಿ20 ಕ್ರಿಕೆಟ್‌ಗೆ ತಕ್ಕಂತೆ ಸ್ಟ್ರೈಕ್‌ರೇಟ್ ನಿಭಾಯಿಸದೇ ಬ್ಯಾಟ್ ಬೀಸಿದ ಗಾಯಕ್ವಾಡ್ 49 ಎಸೆತಗಳಲ್ಲಿ 53 ರನ್‌ ಕಲೆಹಾಕುವ ಮೂಲಕ ತಂಡದ ಒಟ್ಟಾರೆ ಮೊತ್ತಕ್ಕೆ ಕೊಡುಗೆ ನೀಡಿದ್ರು. ಇವ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು.

ಮೊಯಿನ್ ಅಲಿ 21 ರನ್‌ಗಳಿಸಿ ಸಾಯಿ ಕಿಶೋರ್‌ಗೆ ವಿಕೆಟ್ ಒಪ್ಪಿಸಿದ ಬಳಿಕ, ಎನ್. ಜಗದೀಶನ್ ಕೊನೆಯವರೆಗೂ ಕ್ರೀಸ್‌ನಲ್ಲೇ ಉಳಿದರು. 33 ಎಸೆತಗಳಲ್ಲಿ ಅಜೇಯ 39ರನ್ ಕಲೆಹಾಕಿದ ಈ ಬ್ಯಾಟರ್‌ಗೆ ಶಿವಂ ದುಬೆ (0) ಸಾಥ್‌ ಕೊಡಲಿಲ್ಲ. ಎಂ.ಎಸ್ ಧೋನಿ 10 ಎಸೆತಗಳಲ್ಲಿ ಕೇವಲ 7 ರನ್‌ಗಳಿಸಿ ಔಟಾದ್ರು. ಮಿಚೆಲ್‌ ಸ್ಯಾಂಟ್ನರ್ ಒಂದು ರನ್‌ಗಳಿಸಿದರು.

ಅಂತಿಮವಾಗಿ ನಿಗದಿತ 20 ಓವರ್‌ಗೆ ಐದು ವಿಕೆಟ್ ಕಳೆದುಕೊಂಡು ಸಿಎಸ್‌ಕೆ 133ರನ್ ದಾಖಲಿಸಿ ಸೋಲಿಗೆ ಶರಣಾಯಿತು. ಗುಜರಾತ್ ಪರ ಮೊಹಮ್ಮದ್ ಶಮಿ 2, ರಶೀದ್ ಖಾನ್ 1, ಅಲ್ಜಾರಿ ಜೋಸೆಫ್ 1, ಸಾಯಿ ಕಿಶೋರ್ 1 ವಿಕೆಟ್ ಕಬಳಿಸಿದರು.

ಧೋನಿಯ ನಿರ್ಧಾರವೇ ಫೈನಲ್!! ಧೋನಿ ಮಾತು ಕೇಳಿದ ಅಂಪೈರ್ ಫಜೀತಿ ನೋಡಿ | Oneindia Kannada

CSK ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನೆರ್, ಮೊಯಿನ್ ಅಲಿ, ಎನ್. ಜಗದೀಶನ್, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಶಿವಂ ದುಬೆ, ಪ್ರಶಾಂತ್ ಸೋಲಂಕಿ, ಮತೀಶ್ ಪತೀರಣ, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ

ಗುಜರಾತ್ ಟೈಟನ್ಸ್ ಪ್ಲೇಯಿಂಗ್ 11
ವೃದ್ದಿಮಾನ್ ಸಾಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ

Story first published: Monday, May 16, 2022, 14:47 [IST]
Other articles published on May 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+