5 ಎಸೆತಗಳಲ್ಲಿ 30 ಕೋಟಿ ಪ್ಲೇಯರ್ಸ್ ಔಟ್: ವಿಕೆಟ್ ಪಡೆದಿದ್ದು ಮಾತ್ರ 20 ಲಕ್ಷದ ಬೌಲರ್

ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ರೋಚಕ ಗೆಲುವು ಕಂಡಿತು. ಕೊನೆಯ ಓವರ್‌ವರೆಗೂ ಪಂದ್ಯದ ರೋಚಕತೆ ಮನೆಮಾಡಿತ್ತು. ಕ್ರಿಕೆಟ್ ಲೋಕದ ಗ್ರೇಟೆಸ್ಟ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ತಂಡವನ್ನ ಗೆಲುವಿನ ದಡ ತಲುಪಿಸಿದ್ರು.
ಕೊನೆಯ ಓವರ್‌ನಲ್ಲಿ 17ರನ್‌ಗಳನ್ನ ಬೆನ್ನತ್ತಿದ ಮಹೇಂದ್ರ ಸಿಂಗ್ 1 ಸಿಕ್ಸರ್, 2 ಬೌಂಡರಿ ಜೊತೆಗೆ ಅಜೇಯ 28 ರನ್ ಕಲೆಹಾಕುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ ರೋಚಕ ಗೆಲುವು ತಂದುಕೊಟ್ಟರು.
ಆದ್ರೆ ಇದಕ್ಕೂ ಮೊದಲು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಸತತ ಏಳನೇ ಪಂದ್ಯ ಸೋಲುವ ಮೂಲಕ ಮುಖಭಂಗ ಅನುಭವಿಸಿದೆ. ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಸತತ ಏಳು ಪಂದ್ಯಗಳನ್ನ ಸೋತಿರಲಿಲ್ಲ.
ಮೊದಲ ಬ್ಯಾಟಿಂಗ್ ಮಾಡಿದ ಮುಂಬೈ ಪರ ಮೊದಲ ಓವರ್‌ನಲ್ಲೇ ತಂಡದ ದುಬಾರಿ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ವಿಕೆಟ್ ಒಪ್ಪಿಸಿದ್ರು. ಸಿಎಸ್‌ಕೆ ಪರ ಅದ್ಭುತ ಬೌಲಿಂಗ್ ಮಾಡಿದ ಮುಕೇಶ್ ಚೌಧರಿ ಮೊದಲ ಐದು ಎಸೆತಗಳಲ್ಲೇ ಎರಡು ವಿಕೆಟ್ ಉರುಳಿಸಿದ್ರು.

16 ಕೋಟಿಯ ರೋಹಿತ್ ಶರ್ಮಾ ಮತ್ತು 15.25 ಕೋಟಿ ಮೊತ್ತದ ಇಶಾನ್ ಕಿಶನ್ ಕೇವಲ ಐದು ಎಸೆತಗಳಲ್ಲಿ ವಿಕೆಟ್ ಕಳೆದುಕೊಂಡರು. ವಿಶೇಷ ಅಂದ್ರೆ ಈ ಎರಡು ವಿಕೆಟ್ ಪಡೆದ ಮುಕೇಶ್ ಚೌಧರಿ ಬೆಲೆ ಕೇವಲ 20 ಲಕ್ಷ ಅನ್ನೋದು ವಿಶೇಷ. ಹೀಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಟ್ರೋಲ್ ಆಗುತ್ತಿದ್ದು, 20 ಲಕ್ಷದ ಪ್ಲೇಯರ್ 30 ಕೋಟಿ ಪ್ಲೇಯರ್ಸ್ ಧೂಳೀಪಟ ಎಂದು ಕಾಮೆಂಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications