Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs MI: ಚೆನ್ನೈ-ಮುಂಬೈ ಪಂದ್ಯದಲ್ಲಿ ಡಿಆರ್‌ಎಸ್‌ ಬಳಕೆಗೆ ಅಡ್ಡಿ: ಕಾರಣ ಏನ್ ಗೊತ್ತಾ?

MI VS CSK
Devon Conwayಗೆ ಬಹಳ ದೊಡ್ಡ ಅನ್ಯಾಯ | Oneindia Kannada

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ವಿದ್ಯುತ್ ಕಡಿತದ ಕಾರಣ ಡಿಆರ್‌ಎಸ್ ಆಯ್ಕೆಗೆ ಅಡ್ಡಿ ಎದುರಾಗಿದೆ.

ಫ್ಲಡ್‌ಲೈಟ್‌ನ ಸಮಸ್ಯೆಯಿಂದಾಗಿ ಟಾಸ್ ಕೂಡ ವಿಳಂಭವಾಗಿತ್ತು. ಇದೀಗ ವಿದ್ಯುತ್ ಕಡಿತದ ಕಾರಣದಿಂದಾಗಿ ಡಿಆರ್‌ಎಸ್ ಕೂಡ ಲಭ್ಯವಿರಲಿಲ್ಲ. ಸಮಸ್ಯೆಯನ್ನು ಪರಿಹರಿಸಿದ ನಂತರ ತಂತ್ರಜ್ಞಾನವು ಲಭ್ಯವಾಗುತ್ತದೆಯೋ ಅಥವಾ ಇಲ್ಲವೋ ಎಂಬುದಕ್ಕೆ ಯಾವುದೇ ದೃಢೀಕರಣ ಸಹ ಇಲ್ಲ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ದಾಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಅಕ್ಷರಶಃ ತತ್ತರಿಸಿ ಹೋಗಿದೆ. ಪವರ್‌ ಪ್ಲೇ ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮೊದಲ ಆರು ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಐದು ವಿಕೆಟ್ ಕಳೆದುಕೊಂಡು 32 ರನ್ ಕಲೆಹಾಕಿತು. ಮುಂಬೈ ಇಂಡಿಯನ್ಸ್‌ನ ಬೌಲರ್ ಡೇನಿಯಲ್ ಸ್ಯಾಮ್ಸ್‌ ಮೊದಲ ಓವರ್‌ನಲ್ಲಿಯೇ ಸಿಎಸ್‌ಕೆ ಎರಡು ವಿಕೆಟ್ ಕಳೆದುಕೊಂಡಿತು.

ರುತುರಾಜ್ ಗಾಯಕ್ವಾಡ್ 7, ಡೆವೊನ್ ಕಾನ್ವೆ 0, ಮೊಯಿನ್‌ ಅಲಿ 0, ರಾಬಿನ್ ಉತ್ತಪ್ಪ 1, ಅಂಬಟಿ ರಾಯುಡು 10, ಶಿವಂ ದುಬೆ 10 ರನ್‌ಗಳಿಸಿ ಔಟಾಗಿದ್ದರೆ.

ಚೆನ್ನೈ ಸೂಪರ್ ಕಿಂಗ್ಸ್‌ ಪ್ಲೇಯಿಂಗ್ 11
ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್) , ರುತುರಾಜ್ ಗಾಯಕ್ವಾಡ್ , ಡೆವೊನ್ ಕಾನ್ವೇ , ರಾಬಿನ್ ಉತ್ತಪ್ಪ , ಅಂಬಟಿ ರಾಯುಡು, ಶಿವಂ ದುಬೆ , ಮೊಯಿನ್ ಅಲಿ , ಡ್ವೈನ್ ಬ್ರಾವೋ , ಮಹೇಶ್ ತೀಕ್ಷಣ , ಸಮರ್ಜಿತ್ ಸಿಂಗ್ , ಮುಖೇಶ್ ಚೌಧರಿ

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11:
ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್, ತಿಲಕ್ ವರ್ಮ , ರಮಣದೀಪ್ ಸಿಂಗ್ , ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ಡೇನಿಯಲ್ ಸ್ಯಾಮ್ಸ್ , ಕುಮಾರ್ ಕಾರ್ತಿಕೇಯ , ಹೃತಿಕ್ ಶೋಕಿನ್ , ಜಸ್ಪ್ರೀತ್ ಬುಮ್ರಾ , ರಿಲೆ ಮೆರೆಡಿತ್

Story first published: Thursday, May 12, 2022, 21:47 [IST]
Other articles published on May 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+