Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs SRH: ಹೈದ್ರಾಬಾದ್ ವಿರುದ್ಧ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌, ಧೋನಿ ನಾಯಕತ್ವದ ಜೊತೆಗೆ ಗೆಲುವಿನ ಕಂಬ್ಯಾಕ್

CSK VS SRH

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ಗೆದ್ದು ಬೀಗಿದೆ. ಸಿಎಸ್‌ಕೆ ನೀಡಿದ್ದ 203ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಹೈದ್ರಾಬಾದ್‌ 189 ರನ್‌ಗೆ ಮುಗ್ಗರಿಸಿದೆ.

ಸಿಎಸ್‌ಕೆ ಕ್ಯಾಚ್‌ಗಳನ್ನ ಕೈ ಚೆಲ್ಲಿದ್ರೂ ಸಹ ಉತ್ತಮ ಜೊತೆಯಾಟ ಕಾಣದ ಸನ್‌ರೈಸರ್ಸ್ ಹೈದ್ರಾಬಾದ್ ಗುರಿಯನ್ನ ಬೆನ್ನಟ್ಟುವಲ್ಲಿ ವಿಫಲಗೊಂಡಿತು. ಆರಂಭಿಕ ಜೊತೆಯಾಟದಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭ ಪಡೆದ್ರೂ ಸಹ ಅದನ್ನು ಕೊಂಡೊಯ್ಯುವಲ್ಲಿ ಹೈದ್ರಾಬಾದ್ ಮುಗ್ಗರಿಸಿತು.

ಆರಂಭಿಕರಾದ ಅಭಿಷೇಕ್ ಶರ್ಮಾ 39, ಕೇನ್ ವಿಲಿಯಮ್ಸನ್ 47 ರನ್‌ಗಳಿಸಿ ಔಟಾದ ಬೆನ್ನಲ್ಲೇ, ರಾಹುಲ್ ತ್ರಿಪಾಠಿ ಶೂನ್ಯಕ್ಕೆ ಗೋಲ್ಡನ್ ಡಕೌಟ್ ಆಗುವ ಮೂಲಕ ತಂಡಕ್ಕೆ ದೊಡ್ಡ ಹೊಡೆತ ನೀಡಿದ್ರು. ಏಡನ್ ಮಕ್ರಾಮ್ 17, ಶಶಾಂಕ್ ಸಿಂಗ್ 15 ರನ್ ರನ್‌ಗಳಿಸಿದರು. ಕೊನೆಯವರೆಗೂ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ 64 ರನ್ ಕಲೆಹಾಕಿ ತಂಡದ ಗೆಲುವಿಗೆ ಪ್ರಯತ್ನಿಸಿದ್ರೂ ಮತ್ತೊಂದೆಡೆ ಬ್ಯಾಟರ್‌ಗಳ ವೈಫಲ್ಯ ತಂಡವನ್ನ ಸೋಲಿನ ದವಡೆಗೆ ನೂಕಿತು.

ಸಿಎಸ್‌ಕೆ ಪರ ಅದ್ಭುತ ಬೌಲಿಂಗ್ ಮಾಡಿದ ಮುಕೇಶ್ ಚೌಧರಿ 4 ಓವರ್‌ಗೆ 46 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಹಿಂದೆದೂ ಕಾಣದ ಆರಂಭಿಕ ಜೊತೆಯಾಟವನ್ನ ಕಂಡಿತು. ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ ಅಬ್ಬರದ ಆಟಕ್ಕೆ ಸನ್‌ರೈಸರ್ಸ್‌ನ ಬಲಿಷ್ಠ ಬೌಲಿಂಗ್ ಲೈನಪ್ ಪತರುಗುಟ್ಟಿತು.

ಆರಂಭಿಕ ವಿಕೆಟ್‌ಗೆ 182ರನ್‌ಗಳ ಅಮೋಘ ಜೊತೆಯಾಟವಾಡಿದ ಈ ಜೋಡಿ ಸಿಎಸ್‌ಕೆ ಪರ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಜೊತೆಯಾಟವಾಡಿತು.

ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ರನ್‌ಗಳಿಸಲು ಪರದಾಡಿದ ರುತುರಾಜ್ ಗಾಯಕ್ವಾಡ್ 57 ಎಸೆತಗಳಲ್ಲಿ 99 ರನ್ ಸಿಡಿಸುವ ಮೂಲಕ ಕೇವಲ ಒಂದು ರನ್‌ಗಳಲ್ಲಿ ಶತಕವಂಚಿತರಾದರು. ತಲಾ ಆರು ಬೌಂಡರಿ ಮತ್ತು ಸಿಕ್ಸರ್ ಕಲೆಹಾಕಿದ್ದ ಗಾಯಕ್ವಾಡ್ ಟಿ. ನಟರಾಜನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಒಂದೇ ರನ್‌ನಲ್ಲಿ ಶತಕ ಮಿಸ್ ಮಾಡಿಕೊಂಡರು.

Devon Conway

ಇನ್ನು ಗಾಯಕ್ವಾಡ್‌ಗೆ ಉತ್ತಮ ಸಾಥ್ ಕೊಟ್ಟ ಡಿವೊನ್ ಕಾನ್ವೆ 55 ಎಸೆತಗಳಲ್ಲಿ ಅಜೇಯ 85 ರನ್ ಕಲೆಹಾಕುವ ಮೂಲಕ ತನ್ನ ಕಂಬ್ಯಾಕ್ ಮ್ಯಾಚ್‌ನಲ್ಲೇ ಮಿಂಚಿದರು. 8 ಬೌಂಡರಿ ಮತ್ತು 4 ಸಿಕ್ಸರ್‌ಗಳ ಮೂಲಕ ಅಬ್ಬರದ ಆಟವಾಡಿದ್ರು.

ರುತುರಾಜ್ 99 ರನ್‌ಗೆ ಔಟಾದ ಬಳಿಕ ಧೋನಿ 8 ರನ್‌ ಸಿಡಿಸಿ ನಟರಾಜನ್ ಬೌಲಿಂಗ್‌ನಲ್ಲೇ ವಿಕೆಟ್ ಒಪ್ಪಿಸಿದ್ರು. ನಾಯಕತ್ವ ಬಿಟ್ಟುಕೊಟ್ಟ ರವೀಂದ್ರ ಜಡೇಜಾ ಒಂದು ರನ್ ಸಿಡಿಸಿದ್ರು.

ಅಂತಿಮವಾಗಿ ಎಂ.ಎಸ್ ಧೋನಿ ನಾಯಕತ್ವದ ಕಂಬ್ಯಾಕ್ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಟ್ರ್ಯಾಕ್‌ಗೆ ಮರಳಿರೋದು ವಿಶೇಷ. ಅದ್ರ ಜೊತೆಗೆ ಓಪನರ್ ರುತುರಾಜ್ ಗಾಯಕ್ವಾಡ್ ಕೂಡ ಅದ್ಭುತ ಫಾರ್ಮ್‌ಗೆ ಮರಳಿದ್ದಾರೆ.

ಈ ಗೆಲುವಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿಯೇ ಉಳಿದಿದ್ದು, 3 ಗೆಲುವು ಮತ್ತು 6 ಸೋಲುಗಳ ಮೂಲಕ ಒಟ್ಟು 6 ಪಾಯಿಂಟ್‌ಗಳನ್ನಷ್ಟೇ ಕಲೆಹಾಕಿದೆ.

Story first published: Monday, May 2, 2022, 11:12 [IST]
Other articles published on May 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+