Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs KKR Preview : ಪ್ರಿವ್ಯೂ, ಪಿಚ್ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ತಂಡ

DC VS KKR

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಐಪಿಎಲ್ 2022ರ 41ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.

ಪಾಯಿಂಟ್ಸ್ ಟೇಬಲ್‌ನಲ್ಲಿ 6 ಪಾಯಿಂಟ್ಸ್‌ಗಳ ಮೂಲಕ ಏಳು ಮತ್ತು ಎಂಟನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್‌ ಪ್ಲೇ ಆಫ್ ಹಂತಕ್ಕೇರಲು ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಹೀಗಾಗಿ ಉಭಯ ತಂಡಗಳಿಗೂ ಇದು ದೊಡ್ಡ ಸವಾಲಾಗಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಬಲಿಷ್ಠ ರಾಜಸ್ತಾನ್ ರಾಯಲ್ಸ್ ವಿರುದ್ಧ ಸೋಲನ್ನ ಕಂಡಿತು. ಕೆಕೆಆರ್ ಕೂಡ ಗುಜರಾತ್ ಟೈಟನ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ 8 ರನ್‌ಗಳಿಂದ ಸೋಲನ್ನ ಕಂಡಿದೆ. ಹೀಗಿರುವಾಗ ಉಭಯ ತಂಡಗಳಿಗೂ ಗೆಲುವಿನ ಹಾದಿಗೆ ಮರಳುವ ಅವಶ್ಯಕತೆ ಹೆಚ್ಚಿದೆ. ಎರಡೂ ತಂಡಗಳು ಪ್ರಸಕ್ತ ಸೀಸನ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11

ಪೃಥ್ವಿ ಶಾ, ಡೇವಿಡ್ ವಾರ್ನರ್, ಮಂದೀಪ್ ಸಿಂಗ್/ಕೆ.ಎಸ್ ಭರತ್, ರಿಷಭ್ ಪಂತ್(ನಾಯಕ & ವಿಕೆಟ್ ಕೀಪರ್), ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ರೊಮನ್ ಪೊವೆಲ್,ಕುಲ್‌ದೀಪ್ ಯಾದವ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್/ಆನ್ರಿಕ್ ನೊರ್ಕಿಯಾ

RCB ತಂಡದ ಹಿತದೃಷ್ಟಿಯಿಂದ ವಿರಾಟ್ ಕೊಹ್ಲಿಯೇ ವಿಶ್ರಾಂತಿ ನಿರ್ಧಾರ ತೆಗೆದುಕೊಳ್ಳಲಿ!

ಕೆಕೆಆರ್ ಪ್ಲೇಯಿಂಗ್ 11

ಕೆಕೆಆರ್ ಪ್ಲೇಯಿಂಗ್ 11

ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ

RCB vs RR: ಮೈದಾನದಲ್ಲೇ ಮಾತಿನ ಚಕಮಕಿ: ಹರ್ಷಲ್ ಹಾಗೂ ಪರಾಗ್ ವಾಗ್ವಾದಕ್ಕೆ ಕಾರಣವೇನು?

ಪಿಚ್ ರಿಪೋರ್ಟ್‌

ಪಿಚ್ ರಿಪೋರ್ಟ್‌

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ನಾಲ್ಕು ಪಂದ್ಯಗಳನ್ನು ತಂಡಗಳು ಚೇಸಿಂಗ್ ಮಾಡಿ ಗೆದ್ದಿದ್ದವು. ಆದರೆ ಕಳೆದ ಕೆಲವು ಪಂದ್ಯಗಳಲ್ಲಿ ಫಲಿತಾಂಶ ವಿಭಿನ್ನವಾಗಿ ಬಂದಿದೆ. ಕೊನೆಯ ಐದು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಗೆದ್ದಿದ್ದು, ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಟಾಸ್‌ನಲ್ಲಿ ಮಾಡುವ ಆಯ್ಕೆಯು ನಾಯಕರಿಗೆ ತುಂಬಾ ಕಷ್ಟಕರವಾಗಿದೆ ಎಂದು ಸಾಬೀತುಪಡಿಸಬಹುದು. ಅದರಲ್ಲೂ ವಿಶೇಷವಾಗಿ ಚೇಸ್‌ಗೆ ಆಯ್ಕೆ ಮಾಡಿದ ನಂತರ ಸತತವಾಗಿ ಎರಡು ಪಂದ್ಯಗಳನ್ನು ಕಳೆದುಕೊಂಡಿರುವ ಪಂತ್‌ಗೆ ನಿರ್ಧಾರ ತೆಗೆದುಕೊಳ್ಳುವುದು ಸವಾಲಾಗಿದೆ.

Umran Malik ವೇಗದ ಬೌಲಿಂಗ್ ಗೆ Hardik Pandya ಸುಸ್ತು | Oneindia Kannada
ಮ್ಯಾಚ್ ಪ್ರೆಡಿಕ್ಷನ್

ಮ್ಯಾಚ್ ಪ್ರೆಡಿಕ್ಷನ್

ಈ ಋತುವಿನ ಆರಂಭದಲ್ಲಿ ಉಭಯ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಗೆಲುವು ಸಾಧಿಸಿತ್ತು. ಎರಡೂ ತಂಡಗಳು ಸ್ಥಿರ ಪ್ರದರ್ಶನ ಮತ್ತು ಸರಿಯಾದ ಪ್ಲೇಯಿಂಗ್‌ ಇಲೆವೆನ್ ಅನ್ನು ಹುಡುಕಲು ಹೆಣಗಾಡುತ್ತಿವೆ. ಆದ್ರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಅಗ್ರೆಷನ್ ಆಟವನ್ನ ನೋಡಿದ್ರೆ, ಗೆಲುವಿನ ಸರಾಸರಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೆಚ್ಚಿದೆ.

Story first published: Thursday, April 28, 2022, 9:59 [IST]
Other articles published on Apr 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+