
9 ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ್ದು 128ರನ್
ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಕೆಟ್ಟ ಫಾರ್ಮ್ ಅನ್ನು ಐಪಿಎಲ್‌ನಲ್ಲೂ ಮುಂದುವರಿಸಿದ್ದಾರೆ. ಪ್ರಸಕ್ತ ಸೀಸನ್‌ನಲ್ಲಿ ಆಡಿರುವ 9 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿರುವ ಕೇವಲ 128ರನ್ ಆಗಿದೆ. ಒಂದೇ ಒಂದು ಅರ್ಧಶತಕ ದಾಖಲಿಸಿದ ಕೊಹ್ಲಿ ಕಳಪೆ 16ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
IPL 2022: ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡಗಳು, ಸೋತರೂ ಮುಂಬೈ ಮೊದಲು

2019ರಿಂದ ಕೊಹ್ಲಿ ಬ್ಯಾಡ್ ಲಕ್ ಶುರು
2019ರವರೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಜಮಾನರಾಗಿ ಆಡಿದ್ದ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗಿತ್ತು. ಹೀಗಾಗಿ ಅತಿ ಕಡಿಮೆ ಸಮಯದಲ್ಲಿ ಕೊಹ್ಲಿ 70 ಅಂತರಾಷ್ಟ್ರೀಯ ಶತಕ ಸಿಡಿಸಲು ಸಾಧ್ಯವಾಗಿದೆ. ಕೊಹ್ಲಿಯ ಬೊಂಬಾಟ್ ಫಾರ್ಮ್‌ಗೆ 2019ರಲ್ಲಿ ಬ್ರೇಕ್ ಬಿದ್ದಿತು. ಅಲ್ಲಿಂದ ಕೇವಲ ಅರ್ಧಶತಕ ಸಿಡಿಸಿದ್ರೆ ಹೆಚ್ಚು ಎಂಬಂತೆ ಆಟವಾಡಿದ್ದಾರೆ. ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿದು 2 ವರ್ಷಕ್ಕಿಂತ ಹೆಚ್ಚಾಗಿದೆ.

ಆರ್‌ಸಿಬಿ ಪರ ಫ್ಲಾಪ್ ಶೋ
ವಿರಾಟ್ ಕೊಹ್ಲಿ ಕಳೆದ ವರ್ಷ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಈ ಸೀಸನ್‌ನಲ್ಲಿ ಆಟಗಾರನಾಗಿ ಅಬ್ಬರಿಸಬಹುದು ಎಂದು ಅಂದಾಜಿಸಲಾಗಿತ್ತು. ನಾಯಕತ್ವ ಒತ್ತಡದಿಂದ ವಿರಾಟ್ ಫಾರ್ಮ್ ಕಳೆದುಕೊಂಡಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದ್ರೆ ವಿರಾಟ್ ಕೊಹ್ಲಿ ಕೇವಲ ಆಟಗಾರನಾಗಿ ತಂಡಕ್ಕೆ ಕೊಡುಗೆ ನೀಡಲು ವಿಫಲರಾಗಿದ್ದಾರೆ. ಪದೇ ಪದೇ ಡಕೌಟ್ ಆಗುವ ಮೂಲಕ ತಾನೆಷ್ಟು ಕೆಟ್ಟ ಫಾರ್ಮ್‌ನಲ್ಲಿದ್ದೇನೆ ಎಂದು ಕ್ರಿಕೆಟ್ ಲೋಕಕ್ಕೆ ತೋರಿಸಿದ್ದಾರೆ.

ತಂಡದ ಹಿತದೃಷ್ಟಿಯಿಂದ ಕೊಹ್ಲಿಯೇ ಹೊರನಡೆಯಲಿ!
ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯದಂತೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಅಗತ್ಯ ಬಹಳಲಷ್ಟಿದೆ. ತಂಡಕ್ಕೆ ಯಾವುದೇ ಕೊಡುಗೆ ನೀಡಲು ಸಾಧ್ಯವಾಗದೇ ಇದ್ದಾಗ, ಸತತ ಸೋಲುತ್ತಿರುವ ತಂಡದ ಭಾರ ಕಮ್ಮಿ ಮಾಡಲು ವಿರಾಟ್ ಕೊಹ್ಲಿ ಸ್ವತಃ ನಿರ್ಧಾರ ತೆಗೆದುಕೊಳ್ಳಲು ಎಂಬ ಮಾತು ಕೇಳಿಬಂದಿದೆ. ಆದ್ರೆ ಅಭಿಮಾನಿಗಳು ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದ್ರೂ ತಾವುಗಳು ಅವರಿಗೆ ಬೆಂಬಲಿಸುವುದು ಎಂದು ತಮ್ಮ ಅಭಿಮಾನವನ್ನ ವ್ಯಕ್ತಪಡಿಸುತ್ತಿದ್ದಾರೆ.
IPL 2022: ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ 11 ಆಟಗಾರರನ್ನ ಹೆಸರಿಸಿದ ಹರ್ಭಜನ್ ಸಿಂಗ್

ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಮುಂದಿನ ಕಾದಾಟ
ಈಗಾಗಲೇ ಆಡಿರುವ 9 ಪಂದ್ಯಗಳಲ್ಲಿ ಐದು ಗೆಲವು ಮತ್ತು ನಾಲ್ಕು ಪಂದ್ಯ ಸೋತಿರುವ ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಾದಾಟ ನಡೆಸಲಿದೆ. ಏಪ್ರಿಲ್ 30ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡಕ್ಕೆ ಸವಾಲೆಸೆಯಲಿದ್ದಾರೆ.


Click it and Unblock the Notifications
