Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs PBKS: ಫ್ಯಾಂಟೆಸಿ ಡ್ರೀಮ್ ಟೀಂ, ಹೆಚ್ಚು ಪಾಯಿಂಟ್ಸ್‌ ಪಡೆಯಬಲ್ಲ ಪ್ಲೇಯರ್ಸ್‌

DC VS PUNJAB

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್ 2022ರ ಸೀಸನ್‌ನ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವರ್ಸಸ್ ಪಂಜಾಬ್ ಕಿಂಗ್ಸ್‌ ಮುಖಾಮುಖಿಯಾಗಲಿವೆ.

ಟಾಟಾ ಐಪಿಎಲ್ ಲೀಗ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು ಸಂಜೆ 7.30ಕ್ಕೆ ನಡೆಯಲಿರುವ ಪಂದ್ಯದಲ್ಲಿ ಅಖಾಡ ಪ್ರವೇಶಿಸಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೋವಿಡ್-19 ಕೇಸ್‌ಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪುಣೆಯಲ್ಲಿ ನಡೆಯಬೇಕಿದ್ದ ಇಂದಿನ ಪಂದ್ಯವನ್ನ ಮುಂಬೈನಲ್ಲೇ ನಡೆಸಲಾಗುತ್ತಿದೆ.

ಪಾಯಿಂಟ್ಸ್ ಟೇಬಲ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು ಮತ್ತು 3 ಪಂದ್ಯಗಳಲ್ಲಿ ಸೋಲನ್ನ ಕಂಡಿದ್ದು, ಒಟ್ಟು 4 ಪಾಯಿಂಟ್ಸ್ ಕಲೆಹಾಕಿದೆ.
ಇನ್ನು ಪಂಜಾಬ್ ಕಿಂಗ್ಸ್ ಆಡಿರುವ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲನ್ನ ಕಂಡಿದ್ದು, 6 ಪಾಯಿಂಟ್ಸ್‌ನೊಂದಿಗೆ ಏಳನೇ ಸ್ಥಾನದಲ್ಲಿದೆ.

ಆರ್‌ಸಿಬಿ ವಿರುದ್ಧ ಮುಗ್ಗರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್

ಆರ್‌ಸಿಬಿ ವಿರುದ್ಧ ಮುಗ್ಗರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಡವಿತು. ಡೆಲ್ಲಿ ವಿರುದ್ಧ ದಿನೇಶ್ ಕಾರ್ತಿಕ್ ಹಾಗೂ ಶಬಾಜ್ ಜೊತೆಯಾಟವು ಡೆಲ್ಲಿಯ ಹಿನ್ನಡೆಗೆ ಕಾರಣವಾಯಿತು. ಡೇವಿಡ್ ವಾರ್ನರ್ 66 ಹಾಗೂ ರಿಷಭ್ ಪಂತ್ 34 ರನ್‌ ಕಲೆಹಾಕಿದ್ರು ಗೆಲುವಿನ ಗೆರೆ ದಾಟಲು ಸಾಧ್ಯವಾಗಲಿಲ್ಲ. ಆರ್‌ಸಿಬಿ 16 ರನ್‌ಗಳಿಂದ ಸೋಲನ್ನ ಕಂಡಿತು.

ಮತ್ತೊಂದೆಡೆ ಪಂಜಾಬ್ ಕಿಂಗ್ಸ್‌ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್‌ ಏಳು ವಿಕೆಟ್‌ಗಳಿಂದ ಸೋಲನ್ನಪ್ಪಿತು. ಲಿವಿಂಗ್‌ಸ್ಟೋನ್ ಭರ್ಜರಿ ಆಟವಾಡಿದ್ರು ಸಹ ಪಂಜಾಬ್ ಗೆಲ್ಲಲು ಸಾಧ್ಯವಾಗ್ಲಿಲ್ಲ.

ಡೆಲ್ಲಿ ಮತ್ತು ಪಂಜಾಬ್ ಐಪಿಎಲ್‌ನಲ್ಲಿ 20 ಬಾರಿ ಮುಖಾಮುಖಿಯಾಗಿದ್ದು ಪಂಜಾಬ್ 9 ಪಂದ್ಯ ಗೆದ್ದಿದ್ದು, 11 ಪಂದ್ಯ ಪಂಜಾಬ್ ಗೆದ್ದಿದೆ.

ಆರ್‌ಸಿಬಿ ಮ್ಯಾಚ್‌ನಲ್ಲಿ ಅಧೀರ..! ಗೆಲುವು ತಂದುಕೊಟ್ಟ ಫಾಫ್, ಹೇಜಲ್‌ವುಡ್‌

ಹವಾಮಾನ ಮತ್ತು ಪಿಚ್ ರಿಪೋರ್ಟ್‌

ಹವಾಮಾನ ಮತ್ತು ಪಿಚ್ ರಿಪೋರ್ಟ್‌

ಮುಂಬೈನಲ್ಲಿ ಉಷ್ಣಾಂಶವು 32-34 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ಹ್ಯುಮಿಡಿಟಿ 57 ರಿಂದ 59 ಪರ್ಸೆಂಟ್‌ನಟ್ಟಿದೆ. ಗಂಟೆಗೆ 21 ರಿಂದ 23 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮಳೆ ಬರುವ ಸಾಧ್ಯತೆ ಬಹಳ ಕಡಿಮೆ ಇದೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿನ ಪಿಚ್ ಸಾಮಾನ್ಯವಾಗಿ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡುತ್ತದೆ, ಇಬ್ಬನಿ ಅಂಶವು ಪಂದ್ಯದಲ್ಲಿ ಆಳವಾಗಿ ಪರಿಣಾಮ ಬೀರುತ್ತದೆ. ಶಾರ್ಟ್ ಬೌಂಡರಿಗಳು ಮತ್ತು ವೇಗದ ಔಟ್‌ಫೀಲ್ಡ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 186 ಆಗಿದೆ. ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡದ ಗೆಲುವಿನ ಸರಾಸರಿ ಶೇಕಡಾ 60ರಷ್ಟಿದೆ.

ಡೆಲ್ಲಿ vs ಪಂಜಾಬ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಡೆಲ್ಲಿ vs ಪಂಜಾಬ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಯಶ್ ಧುಲ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ರೋಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್

ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಮಯಾಂಕ್ ಅಗರ್ವಾಲ್ (ನಾಯಕ), ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಾರುಖ್ ಖಾನ್, ಒಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಾಹರ್, ವೈಭವ್ ಅರೋರಾ, ಅರ್ಶ್‌ದೀಪ್ ಸಿಂಗ್

ಲಕ್ನೋ ವಿರುದ್ಧ ವಿರುದ್ಧ ಆರ್‌ಸಿಬಿ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಮುಡಿಗೆ?

ಫ್ಯಾಂಟೆಸಿ ಡ್ರೀಂ ಟೀಂ 1

ಫ್ಯಾಂಟೆಸಿ ಡ್ರೀಂ ಟೀಂ 1

ಫ್ಯಾಂಟೆಸಿ ಕ್ರಿಕೆಟ್ ಡ್ರೀಂ ಟೀಮ್‌ನ ಇಂದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್, ಪೃಥ್ವಿ ಶಾ, ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೊ ರಬಾಡ, ಶಿಖರ್ ಧವನ್ ಬಹುತೇಕ ಎಲ್ಲರೂ ಪಿಕ್ ಮಾಡುವ ಆಟಗಾರರಾಗಿದ್ದಾರೆ. ಉಳಿದಂತೆ ಡ್ರೀಂ ಟೀಮ್‌ನಲ್ಲಿ ಯಾರೆಲ್ಲಾ ಆಟಗಾರರು ತುಂಬಾನೇ ಮುಖ್ಯ ಎಂಬುದನ್ನ ಈ ಕೆಳಗೆ ಅಂದಾಜಿಸಲಾಗಿದೆ.

ನಾಯಕ- ಶಿಖರ್ ಧವನ್, ಡೇವಿಡ್ ವಾರ್ನರ್

ಉಪನಾಯಕ - ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೊ ರಬಾಡ

ಕೀಪರ್ - ರಿಷಬ್ ಪಂತ್

ಬ್ಯಾಟ್ಸ್‌ಮನ್‌ಗಳು - ಡೇವಿಡ್ ವಾರ್ನರ್, ಶಿಖರ್ ಧವನ್ (ನಾಯಕ), ಮಯಾಂಕ್ ಅಗರ್ವಾಲ್, ಪೃಥ್ವಿ ಶಾ

ಆಲ್ ರೌಂಡರ್ - ಲಿಯಾಮ್ ಲಿವಿಂಗ್‌ಸ್ಟೋನ್ (ಉಪನಾಯಕ)

ಬೌಲರ್‌ಗಳು - ವೈಭವ್ ಅರೋರಾ, ಕುಲದೀಪ್ ಯಾದವ್, ಕಗಿಸೊ ರಬಾಡ, ರಾಹುಲ್ ಚಾಹರ್, ಶಾರ್ದೂಲ್ ಠಾಕೂರ್

Golden Duck Out ಆದ Virat Kohli ಹಿಂಗ್ಯಾಕೆ ಮಾಡಿದ್ರು? ನೆಟ್ಟಿಗರಿಂದ ಫುಲ್ ತರಾಟೆ | Oneindia Kannada
ಫ್ಯಾಂಟೆಸಿ ಡ್ರೀಂ ಟೀಂ 2

ಫ್ಯಾಂಟೆಸಿ ಡ್ರೀಂ ಟೀಂ 2

ಕೀಪರ್ಸ್ - ರಿಷಬ್ ಪಂತ್, ಜಾನಿ ಬೈಸ್ಟ್ರೋವ್‌

ಬ್ಯಾಟ್ಸ್‌ಮನ್‌ಗಳು - ಡೇವಿಡ್ ವಾರ್ನರ್ (ನಾಯಕ), ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಪೃಥ್ವಿ ಶಾ

ಆಲ್ ರೌಂಡರ್‌ಗಳು - ಲಿಯಾಮ್ ಲಿವಿಂಗ್‌ಸ್ಟೋನ್, ಅಕ್ಷರ್ ಪಟೇಲ್

ಬೌಲರ್‌ಗಳು - ವೈಭವ್ ಅರೋರಾ, ಕಗಿಸೊ ರಬಾಡ (ಉಪನಾಯಕ), ರಾಹುಲ್ ಚಹಾರ್

Story first published: Wednesday, April 20, 2022, 11:14 [IST]
Other articles published on Apr 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+