ಆರ್‌ಸಿಬಿ ಮ್ಯಾಚ್‌ನಲ್ಲಿ ಅಧೀರ..! ಗೆಲುವು ತಂದುಕೊಟ್ಟ ಫಾಫ್, ಹೇಜಲ್‌ವುಡ್

ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಆರ್‌ಸಿಬಿ ಅಬ್ಬರಕ್ಕೆ ಬಲಿಷ್ಠ ಲಕ್ನೋ ಸೂಪರ್‌ಜೈಂಟ್ಸ್ ತಂಡ ಸೋಲೊಪ್ಪಿಕೊಂಡಿತು. ನಾಯಕ ಫಾಫ್ ಡುಪ್ಲೆಸಿಸ್ ಅಮೋಘ ಆಟ ಪ್ರದರ್ಶನದ ಜೊತೆಗೆ, ಅಚ್ಚುಕಟ್ಟಿನ ಬೌಲಿಂಗ್‌ನ ಮೂಲಕ ಆರ್‌ಸಿಬಿ ಪಂದ್ಯ ಗೆದ್ದುಕೊಂಡಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಪರ ಅನುಜ್ ರಾವತ್, ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯವು ತಂಡಕ್ಕೆ ಉತ್ತಮ ಆರಂಭ ನೀಡಲು ಸಾಧ್ಯವಾಗ್ಲಿಲ್ಲ. ಆದ್ರೆ ಇದರ ನಡುವೆ ಭರ್ಜರಿ ಆಟವಾಡಿದ ನಾಯಕ ಫಾಫ್ ಡುಪ್ಲೆಸಿಸ್ ಒತ್ತಡದ ಸನ್ನಿವೇಶದಲ್ಲಿ ಯಾವ ರೀತಿಯ ಆಟವಾಡಬಹುದು ಎಂಬುದನ್ನ ತೋರಿಸಿಕೊಟ್ಟರು.

ಕೇವಲ 4 ರನ್‌ಗಳ ಅಂತರದಲ್ಲಿ ಫಾಫ್ ಶತಕ ಮಿಸ್
ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಳೆದುಕೊಂಡ ಆರ್‌ಸಿಬಿ ಮೇಲೆ ಉಂಟಾಗಿದ್ದ ಒತ್ತಡವನ್ನ ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾದ್ರು. ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳ ಮೇಲೆ ಕೌಂಟರ್ ಅಟ್ಯಾಕ್ ಮಾಡಿದ ಫಾಫ್ ಅಮೋಘ ಆಟವಾಡಿದ್ರು. ಆದ್ರೆ ಕೇವಲ 4 ರನ್‌ಗಳ ಅಂತರದಲ್ಲಿ ಸೆಂಚುರಿ ಮಿಸ್ ಮಾಡಿಕೊಂಡರು.
64 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 96 ರನ್ ಕಲೆಹಾಕಿದ ಫಾಫ್ ನಿಗದಿತ 20 ಓವರ್ ಮುಕ್ತಾಯಕ್ಕೆ ಇನ್ನೊಂದು ಎಸೆತ ಬಾಕಿ ಇರುವಂತೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡಿದ್ದು ಮಾತ್ರ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆ ತಂದಿತು. ಅಂತಿಮವಾಗಿ ಆರ್‌ಸಿಬಿ ಮ್ಯಾಕ್ಸ್‌ವೆಲ್ 23, ಶಬಾಜ್ ಅಹ್ಮದ್ 26 ರನ್‌ಗಳ ಕೊಡುಗೆಯಿಂದ 6 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು.
DC vs PBKS Preview: ಪ್ರಿವ್ಯೂ, ಸಂಭಾವ್ಯ ತಂಡ, ಪಿಚ್ ರಿಪೋರ್ಟ್, ಹವಾಮಾನ ವರದಿ

ಆರ್‌ಸಿಬಿ ಲೈನ್ & ಲೆಂಥ್ ಬೌಲಿಂಗ್‌ಗೆ ಅದುರಿದ ಲಕ್ನೋ
182 ರನ್ ಗುರಿ ಬೆನ್ನತ್ತಿದ ಲಕ್ನೋಗೆ ಆರ್‌ಸಿಬಿ ಲೈನ್ & ಲೆಂಥ್ ಸ್ಪೆಷಲಿಸ್ಟ್ ಬೌಲರ್ ಜೋಶ್ ಹೇಜಲ್‌ವುಡ್ ಕೈ ಹಿಡಿದ್ರು. ಮೊದಲೆರಡು ವಿಕೆಟ್‌ಗಳನ್ನ ಬಹುಬೇಗ ಪಡೆದ ಹೇಜಲ್‌ವುಡ್ ತಮ್ಮ ಖಡಕ್ ಬೌಲಿಂಗ್ ದಾಳಿ ಮೂಲಕ ಲಕ್ನೋ ಬ್ಯಾಟರ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದರು.
ಕ್ವಿಂಟನ್ ಡಿಕಾಕ್, ಮನೀಶ್ ಪಾಂಡೆ ಜೊತೆಗೆ ಕೆಳಕ್ರಮಾಂಕದ ಸ್ಫೋಟಕ ಬ್ಯಾಟರ್‌ಗಳಾದ ಆಯುಷ್ ಬದೋನಿ ಮತ್ತು ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ಈತನ ಜೊತೆಗೆ ಹರ್ಷಲ್ ಪಟೇಲ್ ತನ್ನ ಸ್ಥಿರ ಪ್ರದರ್ಶನದ ಮೂಲಕ ಕೆ.ಎಲ್ ರಾಹುಲ್, ಜೇಸನ್ ಹೋಲ್ಡರ್‌ನಂತಹ ಪ್ರಮುಖ ವಿಕೆಟ್ ಪಡೆದರು. ಇನ್ನು ಮೊಹಮ್ಮದ್ ಸಿರಾಜ್ ಮತ್ತು ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಪಡೆಯುವುದರ ಜೊತೆಗೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ರು.
ಆರ್‌ಸಿಬಿಯ ಬೊಂಬಾಟ್ ಬೌಲಿಂಗ್ ದಾಳಿಗೆ ಲಕ್ನೋ ಸೂಪರ್ ಜೈಂಟ್ಸ್ ಕೇವಲ 168ರನ್‌ಗಳಿಸುವಷ್ಟರಲ್ಲಿ ಶಕ್ತವಾಯಿತು. ಆರ್‌ಸಿಬಿ 18ರನ್‌ಗಳ ಗೆಲುವಿನ ನಗಾರಿ ಬಾರಿಸಿದೆ. ಜೊತೆಗೆ ಅಮೂಲ್ಯ 2 ಪಾಯಿಂಟ್ಸ್ ತನ್ನ ಅಕೌಂಟ್‌ಗೆ ಜಮಾ ಮಾಡಿಕೊಂಡಿದೆ.
ಲಕ್ನೋ ವಿರುದ್ಧ ವಿರುದ್ಧ ಆರ್‌ಸಿಬಿ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಮುಡಿಗೆ?
ಆರ್‌ಸಿಬಿ ಪಂದ್ಯ ವೀಕ್ಷಿಸಲು ಆಗಮಿಸಿದ ಕೆಜಿಎಫ್‌ನ ಅಧೀರ
ಆರ್‌ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ಸ್ಟೇಡಿಯಂನಲ್ಲಿ ವಿಶೇಷವಾಗಿ ಅತಿಥಿಗಳು ಕಾಣಿಸಿಕೊಂಡ್ರು. ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ, ವಿಶ್ವದಾದ್ಯಂತ ಧೂಳೆಬ್ಬಿಸುತ್ತಿರುವ ಕನ್ನಡ ಚಿತ್ರ ಕೆಜಿಎಫ್-2 ಸಿನಿಮಾದ ಖಳನಟ ಅಧೀರ ಪಾತ್ರ ಸಂಜಯ್ ದತ್ ಮತ್ತು ರಿಮಿಕಾ ಸೇನ್ ಪಾತ್ರ ನಿರ್ವಹಿಸಿದ ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಪಂದ್ಯ ವೀಕ್ಷಿಸಿದ್ರು.
KGF 2 ಸಿನಿಮಾ ನೋಡಿ ಎಂಜಾಯ್ ಮಾಡಿದ ಆರ್‌ಸಿಬಿ ಪ್ಲೇಯರ್ಸ್: Video
ಇತ್ತೀಚೆಗಷ್ಟೇ ಆರ್‌ಸಿಬಿ ಆಟಗಾರರಿಗಾಗಿಯೇ ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆಯನ್ನ ಮಾಡಲಾಗಿದ್ದು, ಬಯೋಬಬಲ್ ವ್ಯವಸ್ಥೆಯಲ್ಲಿ ಹೋಟೆಲ್‌ನಲ್ಲಿಯೇ ಕೆಜಿಎಫ್ 2 ಸಿನಿಮಾ ನೋಡುವ ಅವಕಾಶ ಕಲ್ಪಿಸಲಾಗಿತ್ತು.
ನಾಯಕ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಬಹುತೇಕ ಆಟಗಾರರು ಕೆಜಿಎಫ್ 2 ಸಿನಿಮಾ ವೀಕ್ಷಿಸಿದ್ದಾರೆ. ಆರ್‌ಸಿಬಿ ಹೆಡ್ ಕೋಚ್ ಸಂಜಯ್ ಬಂಗಾರ್ ಕೂಡ ಆರ್‌ಸಿಬಿ ಆಟಗಾರರ ಜೊತೆಯಲ್ಲಿ ಕೆಜಿಎಫ್ 2 ನೋಡಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಜಿಎಫ್ ಚಿತ್ರದಲ್ಲಿ ಅಭಿನಯಿಸಿದ್ದ ನಟರು ಕಳೆದ ಆರ್‌ಸಿಬಿ ಪಂದ್ಯ ವೀಕ್ಷಿಸಲು ಸ್ಟೇಡಿಯಂಗೆ ಆಗಮಿಸಿದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications